
ನೇಣು ಬಿಗಿದ ಸ್ಥಿತಿಯಲ್ಲಿ ಯೋಗ ಶಿಕ್ಷಕಿ ಶವ ಪತ್ತೆ…ಆತ್ಮಹತ್ಯೆ ಶಂಕೆ…
- Mysore
- June 23, 2024
- No Comment
- 265
ಮೈಸೂರು,ಜೂ23,Tv10 ಕನ್ನಡ
ಪತಿಯಿಂದ ವಿಚ್ಛೇದನ ಪಡೆದು ಯೋಗ ಶಿಕ್ಷಕಿಯಾಗಿ ಜೀವನ ಸಾಗಿಸುತ್ತಾ ಒಂಟಿ ಜೀವನ ನಡೆಸುತ್ತಿದ್ದ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಮೈಸೂರಿನ ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಗೋಕುಲಂ ಬಾಡವಣೆಯಲ್ಲಿ ಘಟನೆ ನಡೆದಿದೆ.ಮಲ್ಲಿಕಾ(47)ಮೃತ ಯೋಗ ಶಿಕ್ಷಕಿ.
ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದ ಮಲ್ಲಿಕಾ ತನ್ನ ಮನೆಯ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಮಲ್ಲಿಕಾ ಸಹೋದರಿ ಮಮತಾ ರವರು ಸಾವಿನಲ್ಲಿ ಯಾವುದೇ ಶಂಕೆ ಇಲ್ಲವೆಂದು ತಿಳಿಸಿದ್ದು ಶವಪರೀಕ್ಷೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ವಿವಿ ಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ…