ಪತ್ನಿಯನ್ನ ಕರೆದೊಯ್ಯಲು ಬಂದ ಅಳಿಯನ ಮೇಲೆ ದಾಳಿ…ವೃಷಣ ಅಮುಕಿ ಚಾಕುವಿನಿಂದ ಇರಿತ…7 ಮಂದಿ ವಿರುದ್ದ FIR ದಾಖಲು…

ಪತ್ನಿಯನ್ನ ಕರೆದೊಯ್ಯಲು ಬಂದ ಅಳಿಯನ ಮೇಲೆ ದಾಳಿ…ವೃಷಣ ಅಮುಕಿ ಚಾಕುವಿನಿಂದ ಇರಿತ…7 ಮಂದಿ ವಿರುದ್ದ FIR ದಾಖಲು…

ಮೈಸೂರು,ಜು5,Tv10 ಕನ್ನಡ

ಕೌಟುಂಬಿಕ ಕಲಹ ಹಿನ್ನಲೆ ಕೋಪಿಸಿಕೊಂಡು ತವರು ಮನೆಯಲ್ಲಿದ್ದ ಪತ್ನಿಯನ್ನ ಕರೆದೊಯ್ಯಲು ಬಂದ ಅಳಿಯನ ಮೇಲೆ ದಾಳಿ ನಡೆಸಿ ವೃಷಣ ಗಾಯಗೊಳಿಸಿ ಚಾಕುವಿನಿಂದ ಇರಿದ ಘಟನೆ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಬೋಗಾದಿ ಗ್ರಾಮದಲ್ಲಿ ನಡೆದಿದೆ.ಘಟನೆಯಲ್ಲಿ ಗಾಯಗೊಂಡ ಅಳಿಯ ಸುಜಿತ್ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಸಂಭಂಧ ಅತ್ತೆ ಉಮಾ,ಮಾವ ಲೋಕೇಶ್,ಭಾವಮೈದ ದೇವರಾಜ್,ಚಿಕ್ಕಮಾವ ಅಜಯ್,ಉಮಾ ರವರ ಅಕ್ಕಂದಿರಾದ ಸೌಭಾಗ್ಯ,ಮಂಜುಳಾ ಹಾಗೂ ಸ್ನೇಹಿತೆ ಮಮತಾ ಎಂಬುವರ ಮೇಲೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಜಿತ್ ಹಾಗೂ ನಿಖಿತಾ ಪರಸ್ಪರ ಪ್ರೀತಿಸಿ ಮನೆಯವರನ್ನ ಒಪ್ಪಿಸಿ ಮದುವೆಯಾಗಿದ್ದರು.ಸಣ್ಣಪುಟ್ಟ ವಿಚಾರದಲ್ಲಿ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು.ನಿಖಿತಾಗೆ ಅನಾರೋಗ್ಯ ಹಿನ್ನಲೆ ತವರು ಮನೆ ಸೇರಿದ್ದಳು.ಸುಮಾರು ಒಂದು ತಿಂಗಳಾದರೂ ಮನೆಗೆ ಹಿಂದಿರುಗಲಿಲ್ಲ.ಹೀಗಾಗಿ ಪತ್ನಿಯನ್ನ ಕರೆತರಲು ಸುಜಿತ್ ಬೋಗಾದಿ ಗ್ರಾಮಕ್ಕೆ ತಮ್ಮ ಸಹೋದರನ ಜೊತೆ ತೆರಳಿದ್ದಾರೆ.ಈ ವೇಳೆ ಕ್ಯಾತೆ ತೆಗೆದ ಅತ್ತೆ,ಮಾವ ಹಾಗೂ ಸಂಭಂಧಿಕರು ಸುಜಿತ್ ಮೇಲೆ ಹಲ್ಲೆ ಮಾಡಿದ್ದಾರೆ.ಉಮಾ ರವರ ಅಕ್ಕಂದಿರು ಸುಜಿತ್ ರವರ ವೃಷಣ ಅಮುಕಿ ಗಾಯಗೊಳಿಸಿದ್ದಾರೆ.ದೇವರಾಜು ಚಾಕುವಿನಿಂದ ಇರಿದಿದ್ದಾನೆ.ಈ ವೇಳೆ ಅಕ್ಕಪಕ್ಕದ ಮನೆಯವರು ಜಗಳ ಬಿಡಿಸಿದ್ದಾರೆ.ಗಾಯಗೊಂಡ ಸುಜಿತ್ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಹಲ್ಲೆ ನಡೆಸಿದ ಅತ್ತೆ,ಮಾವ ಹಾಗೂ ಸಂಭಂಧಿಕರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ…

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು ಮೈಸೂರು, ಆ.4: ಮೈಸೂರಿನ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ…
ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ… ಹುಣಸೂರು,ಆ3,Tv10 ಕನ್ನಡ ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ನೇತೃತ್ವದ…
ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ… ಮೈಸೂರು,ಆ3,Tv10 ಕನ್ನಡ ಪೊಲೀಸ್ ಇಲಾಖೆಯ ಮಿಕ್ಕುಳಿದ ವೃಂದ ಹಾಗೂ ಸಿವಿಲ್ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆ ವೇಳೆ…

Leave a Reply

Your email address will not be published. Required fields are marked *