.ಆರ್.ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ…ಮನೆ ಮನೆಗೆ ತೆರಳಿ ಉಚಿತ ಬಟ್ಟೆ ಬ್ಯಾಗ್ ವಿತರಣೆ…
- MysoreNews
- July 6, 2024
- No Comment
- 96
ಕೆ
ಮೈಸೂರು,ಜು6,Tv10 ಕನ್ನಡ
ಕೃಷ್ಣರಾಜ ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಶಾಸಕ ಟಿ.ಎಸ್.ಶ್ರೀವತ್ಸ ಚಾಲನೆ ನೀಡಿದರು.ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು ಒಂದು ಲಕ್ಷ ಕ್ಕೂ ಹೆಚ್ಚು ಮನೆಗಳಿದ್ದು ಕಡ್ಡಾಯವಾಗಿ ಎಲ್ಲರೂ ಬಟ್ಟೆ ಬ್ಯಾಗ್ ಬಳಸುವಂತೆ ಶ್ರೀವತ್ಸ ಕರೆ ನೀಡಿದರು. ಮನೆಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಉಚಿತವಾಗಿ ಬಟ್ಟೆ ಬ್ಯಾಗ್ ಗಳನ್ನು ವಿತರಿಸಿದರು.ಇಂದು ವಲಯ ಮೂರ ರ ವ್ಯಾಪ್ತಿಯ ಕುವೆಂಪು ನಗರದ ಭಾಗದಲ್ಲಿ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ವಲಯ ಆಯುಕ್ತ ಸತ್ಯಮೂರ್ತಿ,ಪರಿಸರ ವಲಯ ಅಧಿಕಾರಿ ಅರ್ಪಿತಾ,ಇಂಜಿನಿಯರ್ ಮಣಿ,ಮಾಜಿ ನಗರಪಾಲಿಕೆ ಸದಸ್ಯ ರಮೇಶ್, ಜೋಗಿ ಮಂಜು,ಮನೋಜ್,ನಾಗೇಂದ್ರ,ರಾಜೇಶ್,ಹೇಮಂತ, ಪ್ರಸಾದ್,ರವಿ,ಛಾಯ,ಪ್ರದೀಪ್,ಕಿಶೋರ್, ಅಪ್ತ ಸಹಾಯಕ ಆದಿತ್ಯ, ಗೋವಿಂದ,ವಸಂತ,ಮುಂತಾದವರು ಹಾಜರಿದ್ದರು…