ಟ್ರಕ್ ಟರ್ಮಿನಲ್ ಆಗಿ ಪರಿವರ್ತನೆಯಾದ ಸಿಎ ನಿವೇಶನ…ಅಪಾಯಕ್ಕೆ ಆಜ್ವಾನ ನೀಡುತ್ತಿರುವ ಭಾರಿ ವಾಹನಗಳು…
- MysoreNews
- July 9, 2024
- No Comment
- 114
ಮೈಸೂರು,ಜು9,Tv10 ಕನ್ನಡಸರ್ಕಾರಿ ಜಾಗಗಳು,ನಿವೇಶನಗಳುದುರ್ಬಳಕೆ ಆಗುತ್ತಿದೆ ಎಂಬ ಆರೋಪಗಳ ಬೆನ್ನ ಹಿಂದೆಯೇ ಸಿಎ ನಿವೇಶನವೊಂದು ಭಾರಿ ವಾಹನಗಳ ನಿಲುಗಡೆಗೆ ಆಸರೆ ನೀಡಿದೆ.ಪ್ರತಿಷ್ಟಿತ ಬಡಾವಣೆಯಲ್ಲಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನಪಾಲಿಸಬೇಕಾದ ಪೊಲೀಸ್ ಠಾಣೆಯ ಸಮೀಪದಲ್ಲೇ ಇಂತಹ ಬೆಳವಣಿಗೆ ಕಂಡು ಬರುತ್ತಿದ್ದರೂ ಯಾವುದೇ ಅಧಿಕಾರಿಯಾಗಲಿ ಅಥವಾ ಜನಪ್ರತಿನಿಧಿಯಾಗಲಿ ಈ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದು ವಿಷಾಧನೀಯ.ಹೆಬ್ಬಾಳ್ ಬಡಾವಣೆ ವಾರ್ಡ್ ನಂ 5 ರಲ್ಲಿರುವ ಹೆಬ್ಬಾಳ್ ಪೊಲೀಸ್ ಠಾಣೆ ಸಮೀಪ ಕುವೆಂಪುವೃತ್ತದ ಬಳಿ ಸಿಎ ನಿವೇಶನ ಖಾಲಿ ಬಿದ್ದಿದೆ.ಪಾಲಿಕೆ ಅಧಿಕಾರಿಯಾಗಲಿ ಅಥವಾ ಮುಡಾ ಅಧಿಕಾರಿಗಳಾಗಲಿ ಸದರಿ ನಿವೇಶನ ಸಂರಕ್ಷಣೆಗೆ ಯಾವುದೇ ಕ್ರಮಕೈಗೊಂಡಿಲ್ಲ.ಇದನ್ನೇ ದುರುಪಯೋಗ ಮಾಡಿಕೊಂಡ ಭಾರಿ ವಾಹನಗಳನ್ನ ಚಾಲಕರು ರಾಜಾರೋಷವಾಗಿ ಎಲ್ಲೆಂದರಲ್ಲಿ ಪಾರ್ಕ್ ಮಾಡಿದ್ದಾರೆ.ಕೆಲವು ವಾಹನಗಳಂತೂ ರಸ್ತೆಯನ್ನೇ ಆಕ್ರಮಿಸಿಕೊಂಡಿವೆ.ಮತ್ತೆ ಕೆಲವುವಾಹನಗಳು ಹೆಬ್ಬಾಳ್ ಠಾಣೆಗೆ ಹೊಂದಿಕೊಂಡಂತಿರುವ ಕಾಂಪೌಂಡ್ ಒಳಗೇ ನಿಂತಿವೆ.ರಸ್ತೆ ಆಕ್ರಮಿಸಿಕೊಂಡಿರುವ ವಾಹನಗಳಂತೂ ಅಪಾಯಕ್ಕೆ ಆಹ್ವಾನ ನೀಡುತ್ತಿವೆ.ಅನಾಹುತ ಸಂಭವಿಸುವ ಮುನ್ನ ಸಂಭಂಧಪಟ್ಟ ಅಧಿಕಾರಿಗಳು ಟ್ರಕ್ ಟರ್ಮಿನಲ್ ನಂತೆ ಪರಿವರ್ತನೆ ಆಗಿರುವ ಸದರಿ ಸ್ಥಳಕ್ಕೆ ಬೇಲಿ ಹಾಕಿ ಸಂರಕ್ಷಿಸುವರೇ…?