ಸ್ವಾತಂತ್ರ್ಯ ತಂದುಕೊಟ್ಟವರಿಗಿಂತ ಸಿನಿಮಾದವರೇ ಆದರ್ಶವಾಗಿದ್ದಾರೆ… ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ವಿಷಾಧ

ಸ್ವಾತಂತ್ರ್ಯ ತಂದುಕೊಟ್ಟವರಿಗಿಂತ ಸಿನಿಮಾದವರೇ ಆದರ್ಶವಾಗಿದ್ದಾರೆ… ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ವಿಷಾಧ

ಮೈಸೂರು,ಸೆ11,Tv10 ಕನ್ನಡ

ಇಂದಿನ ಯುವ ಪೀಳಿಗೆಗೆ ಗಾಂಧಿ, ನೆಹರು, ಅಂಬೇಡ್ಕರ್ ಆದರ್ಶವಾಗಿರದೆ ಸಿನಿಮಾ ನಟ-ನಟಿಯರು ಆರಾಧ್ಯ ದೈವಗಳಾಗಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ನಾಯಕರಿಗಿಂತ ಸಿನಿಮಾದಲ್ಲಿ ನಟಿರುವವರೇ ನಿಜ ನಾಯಕರಾಗುತ್ತಿರುವುದು ಈ ದೇಶದ ದೊಡ್ಡ ದುರಂತ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ವಿಷಾಧ ವ್ಯಕ್ತಪಡಿಸಿದರು.
ಮೈಸೂರಿನ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ದೈನಂದಿನ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರ್ಯ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮಹತ್ವ ಅರಿಯದ ಯುವಕ-ಯುವತಿಯರು ಸಿನಿಮಾವೇ ಜೀವನ, ನಟ-ನಟಿಯರೇ ಆದರ್ಶ ಎಂದು ಭಾವಿಸಿರುವುದು ಆತಂಕ ಮೂಡಿಸುವ ವಿಷಯವಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಪ್ರಸ್ತುತ ಯುವ ಸಮುದಾಯವು ರೀಲ್ಸ್ ಮಾಡುವುದು, ಟ್ರೋಲ್ ಆಗುವುದೇ ನಿಜವಾದ ಸಾಧನೆ ಎಂದು ಭಾವಿಸಿದೆ.ಶಾಲಾ-ಕಾಲೇಜಿನ ಗುರುಗಳಿಗಿಂತಲೂ ಗೂಗಲ್ ಗುರುವೇ ನಿಜವಾದ ಗುರು ಎಂದುಕೊಂಡಿದೆ. ಆದರೆ, ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹಿರಿಯರು ನಡೆಸಿದ ಹೋರಾಟ, ಸಂವಿಧಾನ ಬರೆಯಲು ಡಾ. ಅಂಬೇಡ್ಕರ್ ಪಟ್ಟ ಶ್ರಮ, ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆಯುತ್ತಿರುವ ಹೋರಾಟಗಳ ಬಗ್ಗೆ ಕಿಂಚಿತ್ತೂ ಅರಿವಿಲ್ಲದಂತ್ತಾಗಿದೆ ಎಂದು ನೊಂದು ನುಡಿದರು.ಇಂದಿನ ಯುವಕ-ಯುವತಿಯರಿಗೆ ನಿಮಗೆ ಇಷ್ಟವಾದ ಹೀರೋ-ಹೀರೋಯಿನ್ ಯಾರು ಎಂದು ಕೇಳಿದರೆ, ಅವರು ಸಿನಿಮಾ ನಟ-ನಟಿಯರ ಹೆಸರನ್ನು ಹೇಳುತ್ತಾರೆ. ಆದರೆ, ಜೀವ ಕೊಟ್ಟ ತಂದೆ-ತಾಯಿ, ಜೀವನ ಕಟ್ಟಿಕೊಡಲು ನೆರವಾಗುವ ಬಂಧು-ಬಳಗ, ಗುರು-ಹಿರಿಯರು ಇವರಿಗೆ ಹೀರೋಗಳಾಗಿ ಕಾಣಿಸುವುದೇ ಇಲ್ಲ. ಆದ್ದರಿಂದ ನಮ್ಮ ಪ್ರತಿಕ್ಷಣದ ಬೆಳವಣಿಗೆಯಲ್ಲಿ ತಮ್ಮ ಜೀವನವನ್ನು ಮುಡುಪಾಗಿಡುವ ತಂದೆ-ತಾಯಿಯೆ ನಿಜವಾದ ಹೀರೋಗಳು ಎಂದು ಭಾವಿಸುವವರು ಮಾತ್ರ ಜೀವನದಲ್ಲಿ ಯಶಸ್ಸು ಕಾಣುತ್ತಾರೆ ಎಂದು ತಿಳಿಸಿದರು.
ಪೋಷಕರು ತಮ್ಮ ಮಕ್ಕಳನ್ನು ಡಾಕ್ಟರ್, ಇಂಜಿನಿಯರ್, ಅಧಿಕಾರಿಗಳನ್ನಾಗಿ ಮಾಡುವುದು ಎಷ್ಟು ಮುಖ್ಯವೋ ಸಮಾಜ ಸೇವಕರನ್ನಾಗಿ ರೂಪಿಸುವುದೂ ಅಷ್ಟೇ ಮುಖ್ಯ. ಏಕೆಂದರೆ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳದ ಡಾಕ್ಟರ್, ಇಂಜಿನಿಯರ್, ಲಾಯರ್ ಮತ್ತು ಅಧಿಕಾರಿಗಳಿಂದ ಈ ದೇಶಕ್ಕೆ ಉಪಯೋಗಕ್ಕಿಂತಲೂ ಅಪಾಯವೇ ಹೆಚ್ಚು. ದೇಶಕ್ಕೆ ಡಾಕ್ಟರ್, ಇಂಜಿನಿಯರ್, ಅಧಿಕಾರಿ ವರ್ಗ ಎಷ್ಟು ಮುಖ್ಯವೋ ಸಮಾಜ ಸೇವೆ ಮಾಡುವ ಮನೋಭಾವ ಉಳ್ಳ ನಾಗರೀಕರೂ ಅಷ್ಟೇ ಮುಖ್ಯ ಎಂದರು.
1969ರಲ್ಲಿ ಆರಂಭಗೊಂಡ ರಾಷ್ಟ್ರೀಯ ಸೇವಾ ಯೋಜನೆಯು ಸಾವಿರಾರು ಯುವಕ-ಯುವತಿಯರಲ್ಲಿ ಸಮಾಜ ಸೇವಾ ಮನೋಭಾವನೆಯನ್ನು ಹುಟ್ಟು ಹಾಕಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯೂ ಆಧುನಿಕ ಆಕರ್ಷಣೆಗಳಿಗೆ ಬಲಿಯಾಗಿ ಸೇವಾ ಮನೋಭಾವನೆಗಿಂತ್ತಲೂ ಸ್ವಾರ್ಥ ಮನೋಭಾವನೆಯನ್ನು ಬೆಳೆಸಿಕೊಳ್ಳುತ್ತಿದೆ. ಶ್ರಮ ಪಡೆದಯೇ ಎಲ್ಲವನ್ನೂ ಪಡೆದುಕೊಳ್ಳಬೇಕೆಂಬ ಭ್ರಮೆಗೆ ಬಿದ್ದಿರುವ ಯುವ ಸಮ್ಮೂಹ, ಅಡ್ಡ ದಾರಿಗಳನ್ನು ಹಿಡಿದು ಬದುಕನ್ನೇ ನರಕ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದರು.
ಇಂದು ಹೆಣ್ಣು ಮಕ್ಕಳಲ್ಲಿ ಶಿಕ್ಷಣದ ಜಾಗೃತಿ ಮೂಡಿರುವುದು ಅತ್ಯಂತ ಸಂತೋಷದ ಸಂಗತಿ. ಆದರೆ, ಶಿಕ್ಷಣ ಪಡೆದು ಮತ್ತೆ ಮನೆ ಮತ್ತು ಕುಟುಂಬಕ್ಕೆ ಸೀಮಿತವಾದರೆ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ನೀವು ಪಡೆಯುವ ಶಿಕ್ಷಣ ನಿಮ್ಮ ಪೋಷಕರಲ್ಲಿ ಸಂತೋಷ ತರಬೇಕು, ಸಮಾಜಕ್ಕೆ ಉಪಕಾರಿಯಾಗಬೇಕು, ದೇಶದ ಬೆಳವಣಿಗೆಗೆ ಕೊಡುಗೆ ನೀಡಬೇಕು. ಆಗಲೇ, ನೀವು ಪಡೆದ ಶಿಕ್ಷಣ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ ಎಂದು ಕರೆ ನೀಡಿದರು…

Spread the love

Related post

ಮೈಸೂರು ಮೃಗಾಲಯದಲ್ಲಿ ಒರಾಂಗೂಟಾನ್ ಸಾವು…

ಮೈಸೂರು ಮೃಗಾಲಯದಲ್ಲಿ ಒರಾಂಗೂಟಾನ್ ಸಾವು…

ಮೈಸೂರು,ಏ4,Tv10 ಕನ್ನಡ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಒರಾಂಗೂಟನ್ ಮೃತಪಟ್ಟಿದೆ. ಸುಮಾರು 10 ವರ್ಷ 8 ತಿಂಗಳ ಮಿನ್ನಿ ಹೆಣ್ಣು ಸಾವನ್ನಪ್ಪಿದೆ.ಪ್ರಾಣಿ ವಿನಿಮಯ ಕಾರ್ಯಕ್ರಮದಡಿ 2021 ರಲ್ಲಿ ಮಲೇಷಿಯಾ…
ಮೊದಲ ಪತ್ನಿ ಇದ್ದರೂ ಎರಡನೇ ಮದುವೆ ಮಾಡಿಕೊಂಡು ವಂಚನೆ…50 ಲಕ್ಷಕ್ಕೆ ಉಂಡೆನಾಮ…ಉಂಡೂಹೋದ ಕೊಂಡೂಹೋದ…

ಮೊದಲ ಪತ್ನಿ ಇದ್ದರೂ ಎರಡನೇ ಮದುವೆ ಮಾಡಿಕೊಂಡು ವಂಚನೆ…50 ಲಕ್ಷಕ್ಕೆ ಉಂಡೆನಾಮ…ಉಂಡೂಹೋದ…

ಮೈಸೂರು,ಏ4,Tv10 ಕನ್ನಡ ಮೊದಲ ಪತ್ನಿ ಇದ್ದರೂ ವಿಚ್ಛೇದನ ನೀಡಿರುವುದಾಗಿ ಫೇಕ್ ಡಾಕ್ಯುಮೆಂಟ್ ಕ್ರಿಯೇಟ್ ಮಾಡಿ ಎರಡನೇ ಮದುವೆಯಾಗಿ ಪತ್ನಿಗೆ 50 ಲಕ್ಷ ರೂ ವಂಚಿಸಿದ ಭೂಪ ಪರಾರಿಯಾದ ಘಟನೆ…
ಕೆರೆಯಲ್ಲಿ ಮುಳುಗಿ ಮೂವರ ಸಾವು ಪ್ರಕರಣ…ಮೃತರ ಮನೆಗೆ ಡಾ.ಯತೀಂದ್ರ ಸಿದ್ದರಾಮಯ್ಯ ಭೇಟಿ…

ಕೆರೆಯಲ್ಲಿ ಮುಳುಗಿ ಮೂವರ ಸಾವು ಪ್ರಕರಣ…ಮೃತರ ಮನೆಗೆ ಡಾ.ಯತೀಂದ್ರ ಸಿದ್ದರಾಮಯ್ಯ ಭೇಟಿ…

ನಂಜನಗೂಡು,ಏ3,Tv10 ಕನ್ನಡ ಹಸು ತೊಳೆಯಲು ಹೋಗಿ ಕೆರೆಯಲ್ಲಿ ಮೂವರು ಸಾವನ್ನಪ್ಪಿದ ಮನೆಗೆ ಡಾ.ಯತೀಂದ್ರ ಸಿದ್ದರಾಮಯ್ಯ ಭೇಟಿ ನೀಡಿ ಸಾಂತ್ವನ ಹೇಳಿದರು.ನಂಜನಗೂಡು ತಾಲ್ಲೂಕಿನ ಕಾಮಳ್ಳಿ ಗ್ರಾಮದ ಕೆರೆಯಲ್ಲಿ ದುರಂತ ಸಂಭವಿಸಿತ್ತು.ಯುಗಾದಿ…

Leave a Reply

Your email address will not be published. Required fields are marked *