ಕೊಟ್ಟ ಸಾಲ ಕೇಳಿದ್ದೇ ತಪ್ಪಾಯ್ತು…ಹೀಗಾ ಹೊಡೆಯೋದು…?
- CrimeMysore
- September 13, 2024
- No Comment
- 39
ಹುಣಸೂರು,ಸೆ13,Tv10 ಕನ್ನಡ
ಕೊಟ್ಟ ಸಾಲ ಕೇಳಿದ್ದೇ ತಪ್ಪಾಯ್ತು ವ್ಯಕ್ತಿಗೆ ಹಿಗ್ಗಾ ಮುಗ್ಗಾ ಥಳಿಸಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿರುವ ಘಟನೆ ಹುಣಸೂರು ತಾಲೂಕು ಬಿಳಿಕೆರೆಯ ಮೂಡಲಕೊಪ್ಪಲು ಗ್ರಾಮದಲ್ಲಿ ನಡೆದಿದೆ.ಘಟನೆಗೆ ಸಂಭಂಧಿಸಿದಂತೆ ಸುಧೀಪ್,ಜಯಣ್ಣ ಹಾಗೂ ಲೋಕೇಶ್ ಎಂಬುವರ ವಿರುದ್ದ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹಲ್ಲೆ ನಡೆಸಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಾಗೇಶ್ ಹಲ್ಲೆಯಿಂದ ತೀವ್ರಗಾಯಗೊಂಡು ಆಸ್ಪತ್ರೆಗೆ ದಾಖಲಾದವರು.ನಾಗೇಶ್ ರವರು ಜಯಣ್ಣ ಗೆ 2500 ರೂ ಸಾಲ ಕೊಟ್ಟಿದ್ರು.1500 ರೂ ಹಿಂದಿರುಗಿಸಿದ್ದ.ಉಳಿದ ಹಣ ವಾಪಸ್ ಕೊಡುವಂತೆ ನಾಗೇಶ್ ಕೇಳಿದ್ರು.ಇಷ್ಟಕ್ಕೆ ಬಾರ್ ಒಂದರ ಬಳಿ ಜಯಣ್ಣ,ಲೋಕೇಶ್ ಹಾಗೂ ಸುಧೀಪ್ ರವರು ಮರದ ಕೊಂಬೆಯಿಂದ ಥಳಿಸಿ ನೆಲದ ಮೇಲೆ ಬೀಳಿಸಿಕೊಂಡು ತುಳಿದಿದ್ದಾರೆ.ತೀವ್ರ ಗಾಯಗೊಂಡ ನಾಗೇಶ್ ರನ್ನ ಹುಣಸೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ…