ಮೈಸೂರು ನಗರ ಪೊಲೀಸರ ವಾರ್ಷಿಕ ಕ್ರೀಡಾಕೂಟ…ನ.27 ರಿಂದ 3 ದಿನಗಳ ಕಾಲ ನಡೆಯಲಿರುವ ಸ್ಪೋರ್ಟ್ಸ್…

ಮೈಸೂರು ನಗರ ಪೊಲೀಸರ ವಾರ್ಷಿಕ ಕ್ರೀಡಾಕೂಟ…ನ.27 ರಿಂದ 3 ದಿನಗಳ ಕಾಲ ನಡೆಯಲಿರುವ ಸ್ಪೋರ್ಟ್ಸ್…

ಮೈಸೂರು,ನ26,Tv10 ಕನ್ನಡ

ನವೆಂಬರ್ 27 ರಿಂದ 3 ದಿನಗಳ ಕಾಲ ಮೈಸೂರು ನಗರ ಪೊಲೀಸರ 2024 ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಪೊಲೀಸ್ ಕವಾಯತು ಸಿಎಆರ್ ಮೈದಾನದಲ್ಲಿ ನಡೆಯಲಿದೆ. ನವೆಂಬರ್ 27 ರಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿಗಳಾದ ಲಕ್ಷ್ಮೀಕಾಂತ ರೆಡ್ಡಿ ರವರು ಕ್ರೀಡಾಕೂಟವನ್ನ ಉದ್ಘಾಟಿಸಲಿದ್ದಾರೆ.ನವೆಂಬರ್ 29 ರಂದು ಸಂಜೆ 4 ಗಂಟೆಗೆ ಸಿಎಆರ್ ಮೈದಾನದಲ್ಲಿ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಲಿದ್ದು ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ.ಮಾಲತಿಪ್ರಿಯಾ ರವರು ಅಧ್ಯಕ್ಷತೆ ವಹಿಸಲಿದ್ದಾರೆ.

ಮೂರು ದಿನಗಳ ಕ್ರೀಡಾಕೂಟದಲ್ಲಿ 100 ಮೀ ಓಟದ ಸ್ಪರ್ಧೆ,ಹಗ್ಗ ಜಗ್ಗಾಟ,ಆಹ್ವಾನಿತರಿಗೆ ಜಮಖಾನ ಕ್ರೀಡೆಗಳನ್ನ ಹಮ್ಮಿಕೊಳ್ಳಲಾಗಿದೆ.ಕೈಲಿ ಲಾಠಿ ಹಿಡಿದು ಸಮಾಜಘಾತುಕ ಶಕ್ತಿಗಳ ಹೆಡೆಮುರಿ ಕಟ್ಟಲು ನಿರಂತರವಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಮೈಸೂರು ನಗರ ಖಾಕಿ ಪಡೆ ತಮ್ಮೆಲ್ಲಾ ಒತ್ತಡಗಳನ್ನ ಬದಿಗಿಟ್ಟು ಮೂರು ದಿನಗಳ ಕಾಲ ಕ್ರೀಡಾಕೂಟದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಲಿದೆ.ಲಾಠಿ ಹಿಡಿಯಲೂ ಸೈ…ಮೈದಾನದಲ್ಲಿ ಮಿಂಚಿನಂತೆ ಆಟವಾಡುವಲ್ಲೂ ಸೈ…ಎಂಬುದನ್ನ ಪೊಲೀಸರು ಮೂರು ದಿನಗಳ ಕ್ರೀಡಾಕೂಟದಲ್ಲಿ ನಿರೂಪಿಸಲಿದ್ದಾರೆ.ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ರವರ ನೇತೃತ್ವದಲ್ಲಿ ಕ್ರೀಡಾಕೂಟ ನಡೆಯಲಿದೆ…

Spread the love

Related post

ಡಿಜಿಟಲ್ ಅರೆಸ್ಟ್ ಭೀತಿ…ನಿವೃತ್ತ ಅಧಿಕಾರಿಗೆ 1.64 ಕೋಟಿ ಪಂಗನಾಮ…ಸೆನ್ ಪೊಲೀಸ್ ಠಾಣೆಯಲ್ಲಿ FIR ದಾಖಲು…

ಡಿಜಿಟಲ್ ಅರೆಸ್ಟ್ ಭೀತಿ…ನಿವೃತ್ತ ಅಧಿಕಾರಿಗೆ 1.64 ಕೋಟಿ ಪಂಗನಾಮ…ಸೆನ್ ಪೊಲೀಸ್ ಠಾಣೆಯಲ್ಲಿ…

ಡಿಜಿಟಲ್ ಅರೆಸ್ಟ್ ಭೀತಿ…ನಿವೃತ್ತ ಅಧಿಕಾರಿಗೆ 1.64 ಕೋಟಿ ಪಂಗನಾಮ…ಸೆನ್ ಪೊಲೀಸ್ ಠಾಣೆಯಲ್ಲಿ FIR ದಾಖಲು… ಮೈಸೂರು,ಅ23,Tv10 ಕನ್ನಡ ನಿಮ್ಮ ಮೊಬೈಲ್ ನಲ್ಲಿ ಮಕ್ಕಳ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳು…
ಎಣ್ಣೆ ಬಿಲ್ ವಿಚಾರದಲ್ಲಿ ಕಿರಿಕ್…ಓರ್ವನ ಕೊಲೆಯಲ್ಲಿ ಅಂತ್ಯ…

ಎಣ್ಣೆ ಬಿಲ್ ವಿಚಾರದಲ್ಲಿ ಕಿರಿಕ್…ಓರ್ವನ ಕೊಲೆಯಲ್ಲಿ ಅಂತ್ಯ…

ಎಣ್ಣೆ ಬಿಲ್ ವಿಚಾರದಲ್ಲಿ ಕಿರಿಕ್…ಓರ್ವನ ಕೊಲೆಯಲ್ಲಿ ಅಂತ್ಯ… ಮೈಸೂರು,ಅ19,Tv10 ಕನ್ನಡ ಕುಡಿದ ನಂತರ ಬಿಲ್ ಪಾವತಿಸುವ ವಿಚಾರದಲ್ಲಿ ಶುರುವಾದ ಗಲಾಟೆ ಓರ್ವನ ಕೊ* ಯಲ್ಲಿ ಅಂತ್ಯವಾಗಿದೆ.ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್…
ಬೆಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ…ಕಾಮುಕನಿಗೆ ಶಿಕ್ಷೆ ಪ್ರಕಟ..

ಬೆಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ…ಕಾಮುಕನಿಗೆ ಶಿಕ್ಷೆ ಪ್ರಕಟ..

ಬೆಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ…ಕಾಮುಕನಿಗೆ ಶಿಕ್ಷೆ ಪ್ರಕಟ.. ಮೈಸೂರು,ಅ15,Tv10 ಕನ್ನಡ ಬಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪ ಸಾಬೀತಾದ ಹಿನ್ನಲೆ ಕಾಮುಕನಿಗೆ ಶಿಕ್ಷೆ ಪ್ರಕಟವಾಗಿದೆ.ಮೈಸೂರು…

Leave a Reply

Your email address will not be published. Required fields are marked *