ಪಂಡರಾಪುರದಲ್ಲಿ ವಿಠಲನ ದರುಶನ ಪಡೆದು ಹಿಂದಿರುಗಿದ ದಂಪತಿಗೆ ಶಾಕ್…ಕಾರು,ಬೆಳ್ಳಿ ಪದಾರ್ಥಗಳು ಕಳ್ಳರ ಪಾಲು…

ಪಂಡರಾಪುರದಲ್ಲಿ ವಿಠಲನ ದರುಶನ ಪಡೆದು ಹಿಂದಿರುಗಿದ ದಂಪತಿಗೆ ಶಾಕ್…ಕಾರು,ಬೆಳ್ಳಿ ಪದಾರ್ಥಗಳು ಕಳ್ಳರ ಪಾಲು…

ಮೈಸೂರು,ನ26,Tv10 ಕನ್ನಡ

ಮಹಾರಾಷ್ಟ್ರ ಪಂಡರಾಪುರದ ವಿಠಲನ ದರುಶನ ಪಡೆದು ಮನೆಗೆ ಹಿಂದಿರುಗಿದ ದಂಪತಿಗೆ ಕಳ್ಳರು ಶಾಕ್ ಕೊಟ್ಟಿದ್ದಾರೆ.ಮನೆಯಲ್ಲಿದ್ದ ಬೆಳ್ಳಿ ಪದಾರ್ಥ,ಕಂಚಿನ ಪದಾರ್ಥ ಹಾಗೂ ಕಾರನ್ನ ದೋಚಿ ಪರಾರಿಯಾಗಿದ್ದಾರೆ.ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕೃತಿ ಬಡಾವಣೆಯಲ್ಲಿ ಘಟನೆ ನಡೆದಿದೆ.ವಿದ್ಯುತ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀನಿವಾಸ ಮೂರ್ತಿ ಎಂಬುವರ ಮನೆಯಲ್ಲಿ ಕಳ್ಳರು ಕೈಚಳಕ ನಡೆಸಿದ್ದಾರೆ.

ಶ್ರೀನಿವಾಸ ಮೂರ್ತಿ ಹಾಗೂ ಇವರ ಪತ್ನಿ ಸಂಗೀತಾ ರವರು ನಂಜನಗೂಡಿನಲ್ಲಿ ಮೀಟರ್ ರೀಡಿಂಗ್ ಕೆಲಸ ಮಾಡುತ್ತಿದ್ದಾರೆ.ನಂಜನಗೂಡಿನಲ್ಲೂ ಸಹ ಮನೆ ಬಾಡಿಗೆ ಪಡೆದು ವಾರದಲ್ಲಿ 4 ದಿನ ನಂಜನಗೂಡು 3 ದಿನ ಮೈಸೂರಿನಲ್ಲಿ ಇರುತ್ತಾರೆ.ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಪಂಡರಾಪುರದಲ್ಲಿರುವ ವಿಠಲನ ದರುಶನ ಪಡೆಯಲು ತೆರಳಿದ ದಂಪತಿ ಮೈಸೂರಿನ ನಾಡನಹಳ್ಳಿ ಮನೆಗೆ ಹಿಂದಿರುಗಿದಾಗ ಬಾಗಿಲು ತೆರೆದಿತ್ತು.ಒಳಗೆ ಪ್ರವೇಶಿಸಿ ಪರಿಶಿಲಿಸಿದಾಗ ಬೆಳ್ಳಿ ಪದಾರ್ಥಗಳು,ಕಂಚಿನ ಪದಾರ್ಥಗಳು ಹಾಗೂ ಟಾಟಾ ಇಂಡಿಕಾ ಕಾರನ್ನ ದೋಚಿ ಪರಾರಿಯಾಗಿದ್ದಾರೆ.ಕಳುವಾಗಿರುವ ಪದಾರ್ಥಗಳ ಒಟ್ಟು ಮೌಲ್ಯ 81,600/- ರೂಗಳೆಂದು ಅಂದಾಜಿಸಲಾಗಿದ್ದು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಶ್ರೀನಿವಾಸ ಮೂರ್ತಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *