ಧುಮ್ಮಿಕ್ಕುವ ಜಲಪಾತದಲ್ಲಿ ಬಣ್ಣಬಣ್ಣಗಳ ಬೆಳಕಿನ ನರ್ತನ…ರಂಗುರಂಗಿನ ಚುಂಚನಕಟ್ಟೆ ಜಲಪಾತೋತ್ಸವ ಕಣ್ತುಂಬಿಕೊಂಡ ಸಹಸ್ರಾರು ಮಂದಿ… ಕಣ್ತುಂಬಿಕೊಂಡ
- TV10 Kannada Exclusive
- November 30, 2024
- No Comment
- 13
ಕೆ.ಆರ್.ನಗರ,ನ30,Tv10 ಕನ್ನಡ
ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ಚುಂಚನಕಟ್ಟೆ ಜಲಪಾತೋತ್ಸವ ಸಹಸ್ರಾರು ಜನರನ್ನ ತನ್ಮತ್ತ ಸೂಜಿಗಲ್ಲಿನಂತೆ
ಆಕರ್ಷಿಸುತ್ತಿದೆ.ಧುಮ್ಮಿಕ್ಕಿ ಹರಿಯುವ ನೀರಿನ ಮೇಲೆ ಬೆಳಕಿನ ನರ್ತನ ಸಾವಿರಾರು ಮಂದಿಯನ್ನ ಸೆಳೆಯುತ್ತಿದೆ.ಜಲಪಾತೋತ್ಸವದಲ್ಲಿ ನಡೆಯುವ ಬೆಳಕಿನ ಚಿತ್ತಾರಗಳನ್ನ ಸವಿಯಲು ಜನಸಾಗರವೇ ಹರಿದುಬಂದಿದೆ.ಕೆ.ಆರ್.ನಗರ ತಾಲೂಕು ಚುಂಚನಕಟ್ಟೆಯಲ್ಲಿ ಎತ್ತ ನೋಡಿದರು ಜಗಮಗಿ ಸುವ ವಿದ್ಯುತ್ ದೀಪಾಲಂಕಾರ, ರಸ ದೌತಣ ನೀಡಲು ಬೃಹತ್ ವೇದಿಕೆ.ಹರಿಯುವ ನೀರಿನಲ್ಲಿ ಕಂಗೊಳಿಸುವ ಲೇಸರ್ ಕಿರಣಗಳು ಮನಸೂರೆಗೊಳ್ಳುವಂತೆ ಮಾಡಿದೆ. ವಿದ್ಯುತ್ ದೀಪಾಲಂಕೃತ ಧನುಷ್ಕೋಟಿಯಲ್ಲಿ ಅಲೆ ಅಲೆಯಾಗಿ ತೇಲಿಬಂದ ಸಂಗೀತ ನಿಸರ್ಗ ಪ್ರೇಮಿಗಳ ಹೃದಯ ಗೆದ್ದಿದೆ.ಜಲಪಾತೋತ್ಸವದ ಮೊದಲನೇ ದಿನವಾದ ಇಂದು ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ರಾಜ್ಯದ ನಾನಾ ಜಿಲ್ಲೆಗಳಿಂದ ಪ್ರವಾಹೋಪಾದಿಯಲ್ಲಿ ಹರಿದು ಬಂದಿದ್ದು ಬೆಳಕಿನ ಸಾಗರದಲ್ಲಿ ಮಿಂದೆದ್ದಿದ್ದಾರೆ.ಜಲಪಾತೋತ್ಸವದ ಬೆಳಕಿನ ಸೊಬಗನ್ನ ಮನಸಾರೆ ಅಸ್ವಾದಿಸುತ್ತಿದ್ದಾರೆ.
ನವ ವಧುವಿನಂತೆ ಸಿಂಗಾರಗೊಂಡಿರುವ ಚುಂಚನಕಟ್ಟೆಯ ಶ್ರೀರಾಮ ದೇವಾಲಯ, ಬಸವನ ವೃತ್ತ ಸೇರಿದಂತೆ ವಿವಿದೆಡೆಗಳಲ್ಲಿ ವಿದ್ಯುತ್ ದೀಪಾಲಂಕಾರ ಜನರನ್ನ ಮಂತ್ರ ಮುಗ್ಧರನ್ನಾಗಿಸಿದೆ…