ಲಾರಿ ಹರಿದು ಬೈಕ್ ಸವಾರ ಸಾವು…ರಸ್ತೆಯಲ್ಲೇ ಶವ ಇಟ್ಟು ಆಕ್ರೋಷ…
- TV10 Kannada Exclusive
- December 29, 2024
- No Comment
- 20
ಮೈಸೂರು,ಡಿ29,Tv10 ಕನ್ನಡ
ಲಾರಿ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ
ಮೈಸೂರು ಗದ್ದಿಗೆ ಮುಖ್ಯ ರಸ್ತೆಯ ಮಾರೇಗೌಡನಹಳ್ಳಿ ಗೇಟ್ ಸಮೀಪ ನಡೆದಿದೆ.
ಹೆಚ್ ಡಿ ಕೋಟೆ ತಾಲೂಕಿನ ಕೆ.ಬೆಳ್ತೂರು ಗ್ರಾಮದ ತಿಮ್ಮನಾಯಕ ಪುತ್ರ ಸತೀಶ್ (27) ಮೃತ ದುರ್ದೈವಿ.
ಮೃತ ಸತೀಶ್ ಅಕ್ಕನ ಮಗ ಶಿವು (13) ಗಂಭೀರ ಗಾಯಗೊಂಡಿದ್ದಾನೆ.
ಬೈಕ್ ನಲ್ಲಿ ಅಕ್ಕನ ಮಗನ ಜೊತೆ ಮೈಸೂರಿನಿಂದ ಸ್ವಗ್ರಾಮಕ್ಕೆ ತೆರಳುವಾಗ ದುರ್ಘಟನೆ ನಡೆದಿದೆ.
ರೋಡ್ ರೋಲರ್ ಹೊತ್ತು ಗದ್ದಿಗೆ ಕಡೆಯಿಂದ ಬರುತ್ತಿದ್ದ ಲಾರಿ ತಿರುವಿನಲ್ಲಿ ಬಂದು ಬೈಕ್ ಮೇಲೆ ಹರಿದಿದೆ.
ಚಾಲಕ ಜಾವೀದ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಸ್ತೆಯಲ್ಲೇ ಶವ ಇಟ್ಟು ಮೃತನ ಸಂಬಂಧಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು- ಗದ್ದಿಗೆ ಮುಖ್ಯರಸ್ತೆ ತಡೆದು ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ್ದಾರೆ.
ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸ್ಥಳಕ್ಕೆ ಡಿವೈಎಸ್ಪಿಗಳಾದ ರಘು, ಕರೀಂ ರಾವತರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…