
ಜನರಿಕ್ ಡ್ರಗ್ ಸ್ಟೋರ್ ನಲ್ಲಿ ಬೆಂಕಿ…ತಪ್ಪಿದ ಭಾರಿ ಹಾನಿ…
- TV10 Kannada Exclusive
- December 29, 2024
- No Comment
- 265

ಮೈಸೂರು,ಡಿ29,Tv10,ಕನ್ನಡ
ಕೆ.ಆರ್.ಆಸ್ಪತ್ರೆ ಸ್ಟೋನ್ ಬಿಲ್ಡಿಂಗ್ ಆವರಣದಲ್ಲಿರುವ ಜನರಿಕ್ ಔಷಧಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪಕ್ಕದಲ್ಲೇ ಕೆ.ಆರ್.ಆಸ್ಪತ್ರೆಗೆ ಸೇರಿದ ಗೋದಾಮಿಗೆ ವ್ಯಾಪಿಸಬೇಕಿದ್ದ ಬೆಂಕಿಯನ್ನ ಹತೋಟಿಗೆ ತಂದಿದ್ದಾರೆ. ಈ ಮೂಲಕ ಸಂಭವಿಸಬೇಕಿದ್ದ ಭಾರಿ ಹಾನಿಯನ್ನ ತಡೆಗಟ್ಟಿದ್ದಾರೆ.ಇಂದು ಭಾನುವಾರ ಕಾರಣ ಜನರಿಕ್ ಡ್ರಗ್ ಹೌಸ್ ಗೆ ರಜೆ ಇತ್ತು.ಈ ವೇಳೆ ಯುಪಿಎಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಕೂಡಲೇ ಸಾರ್ವಜನಿಕರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ಬೆಂಕಿಯನ್ನ ನಂದಿಸಿದ್ದಾರೆ.ದೇವರಾಜ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…