
ಸಾಹಸಸಿಂಹ ವಿಷ್ಣುವರ್ಧನ್ ಪುಣ್ಯಸ್ಮರಣೆ…ಕೋಟಿಗೊಬ್ಬ ಕ್ಯಾಲೆಂಡರ್ ಬಿಡುಗಡೆ…
- TV10 Kannada Exclusive
- December 30, 2024
- No Comment
- 127
ಮೈಸೂರು,ಡಿ30,Tv10 ಕನ್ನಡ
ಸಾಹಸಸಿಂಹ ವಿಷ್ಣುವರ್ಧನ್ ರವರ ಪುಣ್ಯಸ್ಮರಣೆ ಅಂಗವಾಗಿ ಇಂದು ಅಭಿಮಾನಿಗಳ ಬಳಗ ಹೊರತಂದಿರುವ 2025 ವರ್ಷದ ಕೋಟಿಗೊಬ್ಬ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.ಮೈಸೂರಿನ ಹೊರವಲಯದ ಉದ್ಬೂರ್ ಗೇಟ್ ಬಳಿ ಇರುವ ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕದಲ್ಲಿ ಹಿರಿಯನಟಿ ಭಾರತಿ ವಿಷ್ಣುವರ್ಧನ್ ಬಿಡುಗಡೆಗೊಳಿಸಿದರು. 15ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ
ವಿಷ್ಣುವರ್ಧನ್ ಪ್ರತಿಮೆಗೆ ಪೂಜೆ ಸಲ್ಲಿಸಿ ನಂತರ ಮಾಲಾರ್ಪಣೆ ಮಾಡಿ ಬಿಡುಗಡೆಗೊಳಿಸಿದರು. ಈ ವೇಳೆ ನಟ ಅನಿರುದ್ಧ ರವರು ಸಾಥ್ ನೀಡಿದರು. ಕಾರ್ಯಕ್ರಮದ ನಂತರ ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ಆಯೋಜಿಸಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು.
60ಕ್ಕೂ ಹೆಚ್ಚು ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
ಇದೇ ಸಂದರ್ಭದಲ್ಲಿ
ವಿಷ್ಣು ಅಭಿಮಾನಿಗಳ ಸಂಘದ ಒಕ್ಕೂಟದ ಅಧ್ಯಕ್ಷ ಎಂ ಡಿ ಪಾರ್ಥಸಾರಥಿ, ಆಲ್ವಿನ್,
ಸಮಾಜ ಸೇವಕರಾದ ವಿಕ್ರಂ ಅಯ್ಯಂಗಾರ್, ಎಂ ಎನ್ ಚೇತನ್ ಗೌಡ, ಲಕ್ಷ್ಮಣ, ಮಹದೇವ್, ಜೀವದಾರ ರಕ್ತ ನಿಧಿ ಕೇಂದ್ರದ ಸಿಬ್ಬಂದಿಗಳಾದ ಸುರೇಶ್, ಪ್ರಭು,
ಸಂತೋಷ್ ,ಸಿದ್ದಪ್ಪ, ಬಸವರಾಜು, ಹಾಗೂ ಇನ್ನಿತರರು ಹಾಜರಿದ್ದರು..