ಗೃಹಿಣಿ ಅನುಮಾನಾಸ್ಪದ ಸಾವು…ಮರ್ಯಾದಾ ಹತ್ಯೆ ಶಂಕೆ…ಸಮಗ್ರ ತೆನಿಖೆ ನಡೆಸುವಂತೆ ಗ್ರಾಮಸ್ಥರ ಆಗ್ರಹ…

ಗೃಹಿಣಿ ಅನುಮಾನಾಸ್ಪದ ಸಾವು…ಮರ್ಯಾದಾ ಹತ್ಯೆ ಶಂಕೆ…ಸಮಗ್ರ ತೆನಿಖೆ ನಡೆಸುವಂತೆ ಗ್ರಾಮಸ್ಥರ ಆಗ್ರಹ…

ನಂಜನಗೂಡು,ಫೆ21,Tv10 ಕನ್ನಡ

ನಂಜನಗೂಡು ತಾಲೂಕಿನ ದುಗ್ಗಹಳ್ಳಿ ಗ್ರಾಮದಲ್ಲಿ ಮರ್ಯಾದಾ ಹತ್ಯೆ ಕೂಗು ಕೇಳಿ ಬರುತ್ತಿದೆ.ಅನುಮಾನಸ್ಪದವಾಗಿ ಸಾವನ್ನಪ್ಪಿದ ಗೃಹಿಣಿ ಸಾವಿನ ಬಗ್ಗೆ ಸಮಗ್ರ ತೆನಿಖೆ ನಡೆಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಪತಿ ಹಾಗೂ ತಮ್ಮ ಇಬ್ಬರೂ ಸೇರಿ ಹತ್ಯೆ ಮಾಡಿರಬಹುದೆಂಬ ಶಂಕೆಯನ್ನ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.ಹುಲ್ಲಹಳ್ಳಿ ಠಾಣೆ ಪೊಲೀಸರು ಕೂಡಲೇ ಈ ಪ್ರಕರಣದ ಬಗ್ಗೆ ತೆನಿಖೆ ಕೈಗೊಳ್ಳಬೇಕಿದೆ.

ದುಗ್ಗಹಳ್ಳಿ ಗ್ರಾಮದ ಸುಚಿತ್ರ(38) ಅನುಮಾನಾಸ್ಪದವಾಗಿ ಮೃತಪಟ್ಟ ಗೃಹಿಣಿ.ಈಕೆಯ ಪತಿ ರವಿ ಹಾಗೂ ಈಕೆಯ ತಮ್ಮ ಸತೀಶ ಸೇರಿ ಕೊಲೆ ಮಾಡಿ ಪ್ರಕರಣವನ್ನ ಮುಚ್ಚಿಹಾಕಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.5 ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಸುಚಿತ್ರಾ ಸಾವನ್ನಪ್ಪಿದ ಬಗ್ಗೆ ಅನುಮಾನದ ಹುತ್ತ ಎದ್ದಿದೆ.ಸುಮಾರು 15 ವರ್ಷಗಳ ಹಿಂದೆ ದುಗ್ಗಹಳ್ಳಿ ಗ್ರಾಮದ ಸುಚಿತ್ರಾಳನ್ನ ಏಚಗುಂಡ್ಲ ಗ್ರಾಮದ ರವಿ ಜೊತೆ ಅದ್ದೂರಿಯಾಗಿ ವಿವಾಹ ನೆರವೇರಿಸಲಾಗಿತ್ತು.ದಂಪತಿಗೆ ಇಬ್ಬರು ಮಕ್ಕಳೂ ಸಹ ಇದ್ದಾರೆ.ಮೂರ್ನಾಲ್ಕು ವರ್ಷಗಳಿಂದ ಸುಚಿತ್ರಾ ನಡತೆಯ ಬಗ್ಗೆ ರವಿಗೆ ಅನುಮಾನ ಬಂದಿದೆ.ಪಕ್ಕದ ಬಡಾವಣೆಯ ಅನ್ಯಕೋಮಿನ ವಿವಾಹಿತ ವ್ಯಕ್ತಿಯೊಂದಿಗೆ ಸಂಪರ್ಕ ಇಟ್ಟುಕೊಂಡಿರುವ ಮಾಹಿತಿ ಪತಿ ರವಿಗೆ ಬಂದಿದೆ.ಈ ವಿಚಾರವನ್ನ ರವಿ ತನ್ನ ಭಾವಮೈದ ಸತೀಶ್ ಜೊತೆ ಹೇಳಿಕೊಂಡಿದ್ದಾನೆ.ಕೆಲವು ದಿನಗಳ ಕಾಲ ಸುಚಿತ್ರಾಳನ್ನ ಫಾಲೋ ಮಾಡಿದ ಪತಿ ಹಾಗೂ ತಮ್ಮನಿಗೆ ಸಂಪರ್ಕ ಇರುವುದು ಖಚಿತವಾಗಿದೆ.ಕಾರಣ ನೀಡಿ ರವಿ,ಸುಚಿತ್ರ ಹಾಗೂ ಮಕ್ಕಳನ್ನ ಸತೀಶ ದುಗ್ಗಹಳ್ಳಿಗೆ ಕರೆಸಿಕೊಂಡಿದ್ದಾನೆ.22-07-2024 ರಂದು ಸತೀಶನ ಮನೆಗೆ ದಂಪತಿ ಮಕ್ಕಳ ಸಮೇತ ಬಂದಿದ್ದಾರೆ.ಸತೀಶ ಹೊಸದಾಗಿ ನಿರ್ಮಿಸಿದ್ದ ಕೋಳಿಫಾರಂ ನಲ್ಲಿ ಸುಚಿತ್ರ ಸಾವನ್ನಪ್ಪಿದ್ದಾಳೆ.ಈ ವಿಚಾರವನ್ನ ಪೊಲೀಸರಿಗೂ ತಿಳಿಸದೆ ಗ್ರಾಮಸ್ಥರ ಗಮನಕ್ಕೂ ತರದೆ ಏಕಾ ಏಕಿ ಮೃತದೇಹವನ್ನ ಏಚಗುಂಡ್ಲ ಗ್ರಾಮಕ್ಕೆ ಕೊಂಡೊಯ್ದು ತರಾತುರಿಯಲ್ಲಿ ಅಂತ್ಯಕ್ರಿಯೆ ಮಾಡಿ ಕೈತೊಳೆದುಕೊಂಡಿದ್ದಾರೆ.ಆರಂಭದಲ್ಲಿ ಕಿಂಚತ್ತು ಸುಳಿವು ನೀಡದ ಸತೀಶ ಕೆಲವು ದಿನಗಳಿಂದ ರಾಜಾರೋಷವಾಗಿ ಸಾಯಿಸಿದ್ದೀನಿ ಎಂದು ಹೇಳಿಕೊಂಡು ತಿರುಗಾಡುತ್ತಿರುವುದು ಗ್ರಾಮದ ಜನರಿಗೆ ತಲುಪಿದೆ.ಸುಚಿತ್ರಾ ಆರೋಗ್ಯವಾಗಿದ್ದರೂ ಸಾವನ್ನಪ್ಪಿದ್ದು ಹೇಗೆ ಎಂಬ ಪ್ರಶ್ನೆ ಸ್ಥಳೀಯರದ್ದು.ಆತ್ಮಹತ್ಯೆ ಆಗಿದ್ದಲ್ಲಿ ಪೊಲೀಸರಿಗೂ ತಿಳಿಸದೆ ತರಾತುರಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದು ಏಕೆ..? ಗ್ರಾಮದ ಜನತೆಯನ್ನ ದೂರವಿರಿಸಿ ಮೃತದೇಹವನ್ನ ಸುಟ್ಟುಹಾಕಿರುವುದು ಅನುಮಾನಗಳಿಗೆ ಪುಷ್ಠಿ ನೀಡುತ್ತಿದೆ.ಈ ಸಾವಿಗೆ ಹೆತ್ತ ಪೋಷಕರಾದ ಶಿವರಾಜಪ್ಪ,ಪ್ರೇಮ ರವರ ಪಾತ್ರವೂ ಇದೆ ಎಂದು ಹೇಳಲಾಗುತ್ತಿದೆ.

ಅನ್ಯಕೋಮಿನ ವ್ಯಕ್ತಿಯೊಡನೆ ಸಂಪರ್ಕ ಬೆಳೆಸಿದ್ದೇ ಸುಚಿತ್ರ ಸಾವಿಗೆ ಕಾರಣವಾಯ್ತೇ…? ತರಾತುರಿಯಲ್ಲಿ ಅಂತ್ಯೆಕ್ರಿಯೆ ನಡೆಸಿದ್ದಾದರೂ ಏಕೆ..?ರಾಜಾರೋಷವಾಗಿ ತಾನೇ ಕೊಲೆ ಮಾಡಿರುವುದಾಗಿ ಹೇಳುತ್ತಿರುವ ಸತೀಶನ ಇಂಗಿತವಾದರೂ ಏನು…? ಇವೆಲ್ಲಾ ಪ್ರಶ್ನೆಗಳಿಗೆ ಪೊಲೀಸರ ತೆನಿಖೆಯಿಂದ ಉತ್ತರ ಸಿಗಬೇಕಿದೆ.ಆದಷ್ಟೂ ಶೀಘ್ರದಲ್ಲಿ ತಮ್ಮ ಸತೀಶ ಹಾಗೂ ಪತಿ ರವಿಯನ್ನ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಬೇಕಿದೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *