
ಖಾಸಗಿ ಜಾಗಕ್ಕೆ ಅತಿಕ್ರಮ ಪ್ರವೇಶ ಆರೋಪ…ಗ್ರಾ.ಪಂ.ಉಪಾಧ್ಯಕ್ಷ ಸೇರಿದಂ ನಾಲ್ವರ ವಿರುದ್ದ FIR…ನ್ಯಾಯಾಲಯದ ಆದೇಶದಂತೆ ಕ್ರಮ…
- TV10 Kannada Exclusive
- March 11, 2025
- No Comment
- 201
ಮೈಸೂರು,ಮಾ11,Tv10 ಕನ್ನಡ
ಖಾಸಗಿ ಜಾಗಕ್ಕೆ ಅತಿಕ್ರಮವಾಗಿ ಪ್ರವೇಶ ಮಾಡಿ ಮಾಲೀಕರಿಗೆ ನಿಂದನೆ, ಕೊಲೆ ಬೆದರಿಕೆ ಆರೋಪದ ಹಿನ್ನಲೆ ನ್ಯಾಯಾಲಯದ ಆದೇಶದಂತೆ
ಚಾಮುಂಡಿ ಬೆಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೈ.ಎಸ್. ರವಿ ಕುಮಾರ್, ಇವರ ಸಹೋದರ ವೈ.ಎಸ್. ರಮೇಶ್ ಬಾಬು, ತಾವರೆಕಟ್ಟೆ ಗ್ರಾಮದ ನಿವಾಸಿ ಕೆಸ್ಸಾರ್ಟಿಸಿ ನಿವೃತ್ತ ನೌಕರ ವಿ. ಶ್ರೀನಿವಾಸ್ ಹಾಗೂ ರಘು ವಿರುದ್ದ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್.ದಾಖಲಾಗಿದೆ.ಕುರುಬಾರಹಳ್ಳಿ ಸರ್ವೇ ನಂಬರ್ 91ರ 1.20 ಎಕರೆ ಗುಂಟೆ ಜಮೀನು ಎಂ. ಮಂಜೀತ್ ಅವರ ಖಾಸಗಿ ಸ್ವತ್ತಾಗಿದೆ.
ಪೋಡಿ ಮತ್ತು ಹದ್ದು ಬಸ್ತ್ ಬಳಿಕ ಕಾಂಪೌಂಡ್ ನಿರ್ಮಾಣಕ್ಕೆ ಹೋದಾಗ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಅಡ್ಡಿಪಡಿಸಿ ಗಲಾಟೆ ಎಬ್ಬಿಸಿದ್ದರು.
ಕಳೆದ ವರ್ಷ ನವೆಂಬರ್ 26ರಂದು ಘಟನೆ ನಡೆದಿತ್ತು.ಕಾಂಪೌಂಡ್ ನಿರ್ಮಾಣ ಕಾರ್ಯಕ್ಕೆ ಅಡ್ಡಿಪಡಿಸಿ ಜಾಗದ ಮಾಲೀಕರಿಗೆ ಅವಾಚ್ಯ ಅವಾಚ್ಯ ಶಬ್ದಗಳಿಂದ ನಿಂದಿಸಿ , ಕೊಲೆ ಬೆದರಿಕೆ ಹಾಕಿದ್ದರು.ಇದರ ವಿರುದ್ದ ಕೆ.ಆರ್. ಪೊಲೀಸ್ ಠಾಣೆಗೆ ಜಾಗದ ಮಾಲೀಕರು ದೂರು ನೀಡಿದ್ದರು.ಈ ಬಗ್ಗೆ ಕೆ.ಆರ್. ಪೊಲೀಸರು ಎನ್.ಸಿ.ಆರ್ ಮಾತ್ರ ಮಾಡಿದ್ದರು.ಈ ಬಗ್ಗೆ ಮಾಲೀಕರು 4ನೇ ಜೆ.ಎಂ.ಎಫ್.ಸಿ ಕೋರ್ಟ್ ನ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಅರೋಪಿಗಳ ವಿರುದ್ದ FIR ದಾಖಲಿಸುವಂತೆ ಕೆ.ಅರ್. ಪೊಲೀಸರಿಗೆ ಆದೇಶಿಸಿದೆ.ಕೋರ್ಟ್ ಅದೇಶದನ್ವಯ ನಾಲ್ವರು ಆರೋಪಿಗಳ ವಿರುದ್ದ ವಿವಿಧ ಸೆಕ್ಷನ್ ಗಳಡಿ ಎಫ್.ಐ.ಆರ್. ದಾಖಲಿಸಿದ್ದಾರೆ…