ಕುಡಿಬೇಡ ಕೆಲಸಕ್ಕೆ ಹೋಗು ಎಂದ ಪತ್ನಿ ಮೇಲೆ ಬಿಸಿ ಸಾಂಬಾರ್ ಸುರಿದ ಪತಿ

ಕುಡಿಬೇಡ ಕೆಲಸಕ್ಕೆ ಹೋಗು ಎಂದ ಪತ್ನಿ ಮೇಲೆ ಬಿಸಿ ಸಾಂಬಾರ್ ಸುರಿದ ಪತಿ

ಮೈಸೂರು,ಮಾ24,Tv10 ಕನ್ನಡ

ಕುಡಿತದ ಚಟಕ್ಕೆ ದಾಸನಾಗಿ ಕೆಲಸಕ್ಕೆ ಹೋಗದ ಪತಿಗೆ ಬುದ್ದಿವಾದ ಹೇಳಿದ ಪತ್ನಿ ಮೇಲೆ ಬಿಸಿ ಸಾಂಬಾರ್ ಸುರಿದ ಘಟನೆ ಮೈಸೂರಿನ ಹಿನಕಲ್ ನಲ್ಲಿ ನಡೆದಿದೆ.ಗಾಯಗೊಂಡ ಪತ್ನಿಗೆ ಕೆ.ಆರ್.ಆಸ್ಪತ್ರೆಯ ಸುಟ್ಟಗಾಯ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಪತಿ ರಾಜು ವಿಕೃತಿಗೆ ಪತ್ನಿ ಗಾಯಗೊಂಡಿದ್ದಾರೆ.ಸಮೀಪದಲ್ಲೇ ಇದ್ದ ಮಗಳಿಗೂ ಸುಟ್ಟಗಾಯಗಳಾಗಿದೆ.

ಮಂಗಳಮ್ಮ ಹಾಗೂ ಮಗಳು ಸುಮತಿ ಗಾಯಗೊಂಡವರು.ಪತಿ ರಾಜು ವಿಕೃತಿ ಮೆರೆದವನು.ಮೂಲತಃ ನಂಜನಗೂಡು ನಿವಾಸಿಗಳಾದ ರಾಜು ಹಾಗೂ ಮಂಗಳಮ್ಮ ಜೀವನೋಪಾಯಕ್ಕಾಗಿ 4 ತಿಂಗಳ ಹಿಂದೆ ಮೈಸೂರಿಗೆ ಬಂದು ಹಿನಕಲ್ ನಲ್ಲಿ ನೆಲೆಸಿದ್ದರಯ.ಕುಡಿತದ ಚಟಕ್ಕೆ ದಾಸನಾಗಿದ್ದ ರಾಜು ಕೆಲಸಕ್ಕೆ ಹೋಗುತ್ತಿರಲಿಲ್ಲ.ಎರಡು ದಿನಗಳ ಹಿಂದೆ ಕೆಲಸ ಮುಗಿಸಿ ಮಂಗಳಮ್ಮ ಮನೆಗೆ ಹಿಂದಿರುಗಿದಾಗ ರಾಜು ಮನೆಯಲ್ಲೇ ಕುಡಿದು ಬಿದ್ದಿದ್ದ.ಕೆಲಸಕ್ಕೆ ಹೋಗಲಿಲ್ಲ ಅಂದ್ರೆ ಸಂಸಾರ ಹೇಗೆ ನಡೆಯುತ್ತೆ.ಕುಡಿತ ಬಿಟ್ಟು ಕೆಲಸಕ್ಕೆ ಹೋಗು ಎಂದು ಪತಿಗೆ ಬುದ್ದಿವಾದ ಹೇಳಿದ್ದಾರೆ.ಇಷ್ಟಕ್ಕೇ ಸಿಟ್ಟಿಗೆದ್ದ ರಾಜು ನೀನು ಇದ್ರೆ ತಾನೆ ಕೆಲಸಕ್ಕೆ ಹೋಗು ಅಂತೀಯ.ನನ್ನ ಸಂಪಾದನೆಯಲ್ಲಿ ನಾನು ಕುಡೀತೀನಿ ಎಂದು ಅರಚಾಡಿ ಕಿರುಚಾಡಿ ಒಲೆ ಮೇಲೆ ಕುದಿಯುತ್ತಿದ್ದ ಬಿಸಿ ಸಾಂಬಾರ್ ಎತ್ತಿ ಮಂಗಳಮ್ಮ ಮೇಲೆ ಸುರಿದಿದ್ದಾನೆ.ಈ ವೇಳೆ ಮಗಳು ಸುಮತಿ ಸಹ ಇದ್ದಳು.ಇಬ್ಬರಿಗೂ ಸುಟ್ಟಗಾಯಗಳಾಗಿವೆ.ವಿಜಯನಗರ ಪೊಲೀಸ್ ಠಾಣೆಯಲ್ಲಿ ರಾಜು ವಿರುದ್ದ ಮಂಗಳಮ್ಮ ಪ್ರಕರಣ ದಾಖಲಿಸಿದ್ದಾರೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *