ಉದಯಗಿರಿ ಠಾಣೆ ಮೇಲೆ ಕಲ್ಲು ಬೀಸಿದಂತೆ ಎನ್.ಆರ್.ಠಾಣೆಗೂ ಕಲ್ಲು ಹೊಡೀತೀವಿ…ದುರ್ಗಾದೇವಿ ಮೆರವಣಿಗೆಯಲ್ಲಿ ಪುಂಡರ ಆವಾಜ್…ಗಲಾಟೆ ಬಿಡಿಸಲು ಬಂದ ಮುಖ್ಯಪೇದೆ ಮೇಲೆ ಹಲ್ಲೆ…12 ಮಂದಿ ವಿರುದ್ದ FIR…

ಉದಯಗಿರಿ ಠಾಣೆ ಮೇಲೆ ಕಲ್ಲು ಬೀಸಿದಂತೆ ಎನ್.ಆರ್.ಠಾಣೆಗೂ ಕಲ್ಲು ಹೊಡೀತೀವಿ…ದುರ್ಗಾದೇವಿ ಮೆರವಣಿಗೆಯಲ್ಲಿ ಪುಂಡರ ಆವಾಜ್…ಗಲಾಟೆ ಬಿಡಿಸಲು ಬಂದ ಮುಖ್ಯಪೇದೆ ಮೇಲೆ ಹಲ್ಲೆ…12 ಮಂದಿ ವಿರುದ್ದ FIR…

ಮೈಸೂರು,ಏ3,Tv10 ಕನ್ನಡ

ದುರ್ಗಾದೇವಿ ಮೆರವಣಿಗೆ ವೇಳೆ ಎರಡು ಯುವಕರ ಗುಂಪುಗಳ ನಡುವೆ ನಡೆಯುತ್ತಿದ್ದ ಗಲಾಟೆಯನ್ನ ಬಿಡಿಸಲು ಬಂದ ಮುಖ್ಯಪೇದೆ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಠಾಣೆಯ ಮೇಲೆ ಕಲ್ಲು ಹೊಡೆಯುವುದಾಗಿ ಧಂಕಿ ಹಾಕಿದ ಘಟನೆ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿನಗರದಲ್ಲಿ ನಡೆದಿದೆ.ಘಟನೆ ಸಂಭಂಧ ಎನ್.ಆರ್.ಪೊಲೀಸ್ ಠಾಣೆಯಲ್ಲಿ 12 ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ.ಹಲ್ಲೆಗೊಳಗಾದ ಠಾಣೆಯ ಮುಖ್ಯಪೇದೆ ಮೋಹನ್ ರವರು ಪ್ರಕರಣ ದಾಖಲಿಸಿದ್ದಾರೆ.

ಯುಗಾದಿ ಹಬ್ಬದ ದಿನದಂದು ಗಾಂಧಿನಗರದ ಶ್ರೀ ದುರ್ಗಾದೇವಿ ದೇವಸ್ಥಾನದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.ಮೆರವಣಿಗೆ ಜೊತೆ ಸಾಗಲು ಎನ್.ಆರ್.ಠಾಣೆ ಪೊಲೀಸರನ್ನ ನಿಯೋಜಿಸಲಾಗಿತ್ತು.ಈ ಪೈಕಿ ಮುಖ್ಯಪೇದೆ ಮೋಹನ್ ಸಹ ಒಬ್ಬರು.ಮಧ್ಯರಾತ್ರಿ ವೇಳೆ ಗಾಂಧಿನಗರದ ಶಿವಯೋಗಿ 3 ನೇ ಮುಖ್ಯರಸ್ತೆ ಬಳಿ ಬರುವಾಗ ಎರಡು ಗುಂಪಿನ ಯುವಕರು ಪರಸ್ಪರ ಗಲಾಟೆ ಮಾಡಿಕೊಳ್ಳುತ್ತಿದ್ದರು.ಈ ವೇಳೆ ಮೋಹನ್ ರವರು ಜಗಳ ಬಿಡಿಸಲು ಬಂದಾಗ ಯುವಕರು ಗುಂಪು ತಿರುಗಿ ಬಿದ್ದಿದೆ.ಅವಾಚ್ಯಶಬ್ದಗಳಿಂದ ನಿಂದಿಸಿ ಸಮವಸ್ತ್ರವನ್ನ ಹಿಡಿದು ಎಳೆದಾಡಿ ಹಲ್ಲೆ ನಡೆಸಿದ್ದಲ್ಲದೆ. ಉದಯಗಿರಿ ಠಾಣೆ ಮೇಲೆ ಕಲ್ಲು ಎಸೆದಂತೆ ಎನ್.ಆರ್.ಠಾಣೆ ಮೇಲೂ ಕಲ್ಲು ಹೊಡೆಯುತ್ತೇವೆ ಎಂದು ವಾರ್ನಿಂಗ್ ನೀಡಿ ಧಂಕಿ ಹಾಕಿದ್ದಾರೆ.ಯುವಕರ ಗಪಿನ ನಡುವೆ ಸಿಲುಕಿ ಹಲ್ಲೆಗೆ ಒಳಗಾದ ಮೋಹನ್ ಸಹದ್ಯೋಗಿಗಳು ಹಾಗೂ ಕೆಲವು ಸ್ಥಳೀಯರ ನೆರವಿನಿಂದ ರಕ್ಷಿಸಲ್ಪಟ್ಟಿದ್ದಾರೆ.

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿ ಠಾಣೆ ಮೇಲೆ ಕಲ್ಲು ಹೊಡೆಯುವುದಾಗಿ ವಾರ್ನಿಂಗ್ ಕೊಟ್ಟ ಮಾದೇಶ್,ಗಿರೀಶ್.ಆ.ಬ್ಲೇಡ್,ರವಿಕುಮಾರ್,ಕಿರಣ್.ಆ.ಬಾತು,ರಾಘವೇಂದ್ರ,ದಾದಾ,ಕೀರ್ತಿ,ನಾಗೇಂದ್ರ ಸೇರಿದಂತೆ 12 ಮಂದಿ ವಿರುದ್ದ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *