
ಮೈಸೂರು ಮಹಾಸಂಸ್ಥಾನದ 27 ನೇ ಮಹಾರಾಜರಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟಾಭಿಷಕ್ತರಾಗಿ ಇಂದಿಗೆ 10 ವರ್ಷ…ಶುಭಾಶಯಗಳ ಸುರಿಮಳೆ…
- TV10 Kannada Exclusive
- May 29, 2025
- No Comment
- 32
ಮೈಸೂರು,ಮೇ29,Tv10 ಕನ್ನಡ
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಯದುಕುಲದ ಅರಸರಾಗಿ ಹಾಗೂ 27 ನೇ ಮಹಾರಾಜರಾಗಿ ಪಟ್ಟಾಭಿಷಿಕ್ತರಾಗಿ ಇಂದಿಗೆ 10 ವರ್ಷ ಪೂರ್ಣಗೊಂಡಿದೆ.28 ಮೇ 2015 ರಂದು ಅರಮನೆಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಯದುವೀರ್ ರವರಿಗೆ ಪಟ್ಟಾಭಿಷೇಕ ನೆರವೇರಿಸಲಾಗಿತ್ತು.ನಾಡಿನ ಹಾಗೂ ದೇಶವಿದೇಶಗಳಿಂದ ಆಗಮಿಸಿದ್ದ ಗಣ್ಯರು ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.ಇದೀಗ ಹತ್ತು ವರ್ಷ ಪೂರೈಸಿರುವ ಯದುವೀರ್ ರವರಿಗೆ ಶುಭಾಶಯಗಳ ಸುರಿಮಳೆಯಾಗುತ್ತಿದೆ.
ಈ ಶುಭ ಸಂದರ್ಭದಲ್ಲಿ ಯದುಕುಲದ ಅರಸರಿಗೆ ತಾಯಿ ಚಾಮುಂಡೇಶ್ವರಿ ಸಕಲ ಸನ್ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸಲಾಗುತ್ತಿದೆ.