
ಮಿನಿಲಾರಿ ಬೈಕ್ ಢಿಕ್ಕಿ…ಇಬ್ಬರು ಬೈಕ್ ಸವಾರರ ಸಾವು…ಅಪಘಾತ ರಭಸಕ್ಕೆ ರುಂಡ ಬೇರ್ಪಡೆ…
- Mysore
- May 29, 2025
- No Comment
- 48
ಪಿರಿಯಾಪಟ್ಟಣ,ಮೇ29,Tv10 ಕನ್ನಡ
ಮಿನಿ ಲಾರಿ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪಿರಿಯಾಪಟ್ಟಣ ತಾಲೂಕು ಗೊರೆಹಳ್ಳಿ ಕೆರೆ ಸಮೀಪ ನಡೆದಿದೆ.ಅಪಘಾತದ ರಭಸಕ್ಕೆ ಬೈಕ್ ಸವಾರನ ರುಂಡ ಮುಂಡ ಬೇರ್ಪಡೆಯಾಗಿದೆ.
ಶೇಖರ್ (26) ಶಂಕರ್ (25) ಮೃತ ಬೈಕ್ ಸವಾರರು.
ಪಿರಿಯಾಪಟ್ಟಣ ತಾಲೂಕು ಹಿಟ್ನೆಬಾಗಿಲು ಗ್ರಾಮದ ಯುವಕರು.
ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…