
ಗಣಪತಿ ಶ್ರೀ ಗಳ ಹುಟ್ಟುಹಬ್ಬ ಅಂಗವಾಗಿ ಶೋಭಾಯಾತ್ರೆ…ಪ್ರಚಾರ ಪೋಸ್ಟರ್ ಬಿಡುಗಡೆ…ದತ್ತಸೇನೆಯಿಂದ ಕಾರ್ಯಕ್ರಮ…
- TV10 Kannada Exclusive
- May 31, 2025
- No Comment
- 34
ಮೈಸೂರು,ಮೇ31,Tv10 ಕನ್ನಡ
ಗಣಪತಿ ಸಚ್ಚಿದಾನಂದ ಶ್ರೀಗಳ 83ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಮೈಸೂರಿನಲ್ಲಿ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ.ಶಾಸಕ ಟಿಎಸ್. ಶ್ರೀವತ್ಸ ರವರು ಶೋಭಾಯಾತ್ರೆಯ ಪ್ರಚಾರ ಪೋಸ್ಟರ್ ಬಿಡುಗಡೆ ಮಾಡಿದರು.ದತ್ತಸೇನೆ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಜೂನ್ 1ರಂದು ಬೆಳಗ್ಗೆ 10ಘಂಟೆಗೆ ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ವರೆಗೂ ಬೃಹತ್ ಶೋಭಾಯತ್ರೆ ಸಾಗಲಿದೆ.ಶೋಭಾಯಾತ್ರೆಯಲ್ಲಿ ಮಂಗಳವಾದ್ಯ ನಾದಸ್ವರ, ವೇದಬಳಗ, ಭಜನಾಮಂಡಳಿ, ಸ್ವಾಮೀಜಿ ರವರ ಸಾರೋಟು ರಥ ಸಾಗಲಿದ್ದು ಮೈಸೂರಿನ ಸಂಘ ಸಂಸ್ಥೆಗಳು ಭಾಗವಹಿಸುವಂತೆ ಶ್ರೀವತ್ಸ ಮನವಿ ಮಾಡಿದರು.
ಈ ವೇಳೆ ಮುಖಂಡರಾದ ಜೋಗಿ ಮಂಜು, ಜಿ. ರಾಘವೇಂದ್ರ, ದತ್ತಸೇನೆ ಅಧ್ಯಕ್ಷ ಕೆ.ಆರ್ ಸತ್ಯನಾರಾಯಣ, ನಿರೂಪಕ ಅಜಯ್ ಶಾಸ್ತ್ರಿ, ಶ್ರೀಕಾಂತ್ ಕಶ್ಯಪ್, ಹರೀಶ್ ನಾಯ್ಡು, ಶರೀಫ್ ಇನ್ನಿತರರು ಹಾಜರಿದ್ದರು…