
ಕುರಿದೊಡ್ಡಿಯಾದ ಟ್ರಿಣ್ ಟ್ರಿಣ್ ಸೈಕಲ್ ಸ್ಟ್ಯಾಂಡ್…ಹಳ್ಳ ಹಿಡಿಯುತ್ತಿರುವ ಸಿಎಂ ಸಿದ್ದರಾಮಯ್ಯ ಮಹತ್ತರ ಯೋಜನೆ…
- TV10 Kannada Exclusive
- June 2, 2025
- No Comment
- 45


ಮೈಸೂರು,ಜೂ2,Tv10 ಕನ್ನಡ
ಟ್ರಿಣ್ ಟ್ರಿಣ್ ಸೈಕಲ್ ಗಳು ತುಂಬಿರಬೇಕಾದ ಸ್ಟ್ಯಾಂಡ್ ಇದೀಗ ಕುರಿದೊಡ್ಡಿಯಾಗಿ ಪರಿವರ್ತನೆಯಾಗಿದೆ.ಪರಿಸರ ಉಳಿವಿಗಾಗಿ ತಂದ ಯೋಜನೆ ನೈರ್ಮಲ್ಯಕ್ಕೆ ಕಾರಣವಾಗುತ್ತಿದೆ.ಸೈಕಲ್ ಗಳು ತುಂಬಿರಬೇಕಿದ್ದ ಸ್ಥಳದಲ್ಲಿ ಕುರಿಗಳನ್ನ ತುಂಬಿದ್ದರೂ ಅಧಿಕಾರಿಗಳ ಗಮನಕ್ಕೂ ಬಂದಿಲ್ಲ.ಸಿಎಂ ಸಿದ್ದರಾಮಯ್ಯ ರವರ ಮಹತ್ತರ ಯೋಜನೆ ಈ ಮೂಲಕ ಹಳ್ಳ ಹಿಡಿಯುವ ಸೂಚನೆ ತೋರಿಸುತ್ತಿದೆ.
ಪರಿಸರ ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಸಿದ್ದರಾಮಯ್ಯ ನವರು ಈ ಯೋಜನೆಯನ್ನ 2016 ರಲ್ಲಿ ಜಾರಿಗೆ ತಂದರು.ಪ್ರಾಯೋಗಿಕವಾಗಿ ಆರಂಭವಾದ ಯೋಜನೆಗೆ ಸಾರ್ವಜನಿಕರೂ ಸಹ ಉತ್ತಮವಾಗಿ ಸ್ಪಂದಿಸಿ ಸೈಕಲ್ ಬಳಕೆಯತ್ತ ಗಮನ ಹರಿಸಿದ್ರು.ಲಕ್ಷಾಂತರ ಮಂದಿ ಟ್ರಿಣ್ ಟ್ರಿಣ್ ಸೈಕಲ್ ವ್ಯವಸ್ಥೆಯನ್ನ ಸಮರ್ಪಕವಾಗಿಯೂ ಬಳಸಿಕೊಂಡ್ರು.ಇತ್ತೀಚೆಗೆ ಯೋಜನೆ ಹಳ್ಳ ಹಿಡಿಯುವ ಸೂಚನೆ ಕಾಣುತ್ತಿದೆ.ಸೈಕಲ್ ಗಳ ಬದಲಾಗಿ ಕುರಿಗಳನ್ನ ತುಂಬಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.ಸೈಕಲ್ ಗಳನ್ನ ಖರೀದಿಸುವತ್ತ ಪಾಲಿಕೆ ಗಮನ ಹರಿಸದ ಕಾರಣ ಸಂಖ್ಯೆ ಕ್ಷೀಣಿಸುತ್ತಿದೆ.ಸೈಕಲ್ ಗಳ ಕೊರತೆಯಿಂದಾಗ ನಿಲ್ದಾಣಗಳು ಖಾಲಿಯಾಗುತ್ತಿವೆ.ಇದನ್ನೇ ಖಾಸಗಿ ವ್ಯಕ್ತಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.ನಿಲ್ದಾಣದಲ್ಲಿ ಕುರಿಗಳನ್ನ ತುಂಬಿಸಿಕೊಂಡು ದೊಡ್ಡಿ ಮಾಡಿಕೊಂಡಿದ್ದಾರೆ.ಮೈಸೂರಿನ ಒಂಟಿಕೊಪ್ಪಲಿನ ಮಾತೃ ಮಂಡಳಿ ವೃತ್ತದ ಬಳಿ ಇರುವ ಟ್ರಿಣ್ ಟ್ರಿಣ್ ಸೈಕಲ್ ನಿಲ್ದಾಣದ ಪರಿಸ್ಥಿತಿ ಇದು.
ಸಿಎಂ ಸಿದ್ದರಾಮಯ್ಯ ನವರು 2016 ರಲ್ಲಿ ಖುದ್ದು ಸೈಕಲ್ ಸವಾರಿ ಮಾಡುವ ಮೂಲಕ ಈ ಯೋಜನೆಗೆ ಅದ್ದೂರಿ ಚಾಲನೆ ನೀಡಿದ್ರು.ಸಿದ್ದರಾಮಯ್ಯ ರವರ ಮಹತ್ತರ ಯೋಜನೆಗಳಲ್ಲಿ ಒಂದಾದ ಟ್ರಿಣ್ ಟ್ರಿಣ್ ಸೈಕಲ್ ಯೋಜನೆ ಮತ್ತಷ್ಟು ಅಧೋಗತಿಗೆ ಇಳಿಯುವ ಮುನ್ನ ಪಾಲಿಕೆ ಅಧಿಕಾರಿಗಳು ಗಮನ ಹರಿಸಬೇಕಿದೆ.ಅಧಿಕಾರಿಗಳ ದಿವ್ಯನಿರ್ಲಕ್ಷ್ಯಕ್ಕೆ ಒಳಗಾದ ಟ್ರಿಣ್ ಟ್ರಿಣ್ ಸೈಕಲ್ ಯೋಜನೆಗೆ ಅಧಿಕಾರಿಗಳು ಚುರುಕು ನೀಡಬೇಕಿದೆ…