ವೈದ್ಯನಿಂದ PWD FDA ಗೆ ಧೋಖಾ…10.50 ಲಕ್ಷ ಕ್ಯಾಶ್,ಚಿನ್ನಾಭರಣ,ಬೆಳ್ಳಿಗೆ ಉಂಡೆನಾಮ…ನೊಂದ ಮಹಿಳೆಯಿಂದ ಪ್ರಕರಣ ದಾಖಲು…

ವೈದ್ಯನಿಂದ PWD FDA ಗೆ ಧೋಖಾ…10.50 ಲಕ್ಷ ಕ್ಯಾಶ್,ಚಿನ್ನಾಭರಣ,ಬೆಳ್ಳಿಗೆ ಉಂಡೆನಾಮ…ನೊಂದ ಮಹಿಳೆಯಿಂದ ಪ್ರಕರಣ ದಾಖಲು…

  • Crime
  • July 20, 2025
  • No Comment
  • 94

ಮೈಸೂರು,ಜು20,Tv10 ಕನ್ನಡ

ಲೋಕೋಪಯೋಗಿ ಇಲಾಖೆಯಲ್ಲಿ ಪ್ರಥಮದರ್ಜೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳೆಗೆ ನಯವಂಚಕ ವೈದ್ಯನೊಬ್ಬ ಮರಳುಮಾತನಾಡಿ 10.50 ಲಕ್ಷ ಹಣ,500 ಗ್ರಾಂ ಚಿನ್ನಾಭರಣ ಹಾಗೂ 2 ಕೆಜಿ ಬೆಳ್ಳಿ ಗೆ ಉಂಡೆನಾಮ ಇಟ್ಟಿದ್ದಾನೆ.ವಂಚನೆಗೆ ಒಳಗಾದ ಮಹಿಳೆ ವೈದ್ಯನ ವಿರುದ್ದ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಶ್ವೇತಾ ಮಹಂತೇಶ್(46) ವಂಚನೆಗೆ ಒಳಗಾದವರು.ಡಾ.ಶಿವಕುಮಾರ್ ವಂಚಿಸಿದ ವೈದ್ಯ.ಕರೊನಾ ಸಂಧರ್ಭದಲ್ಲಿ ಶ್ವೇತಾ ರವರು ತಮ್ಮ ಪತಿ ಮಹಂತೇಶ್ ಹಾಗೂ ಮಗ ಇಕ್ಷುಧನ್ವ ಇಬ್ಬರನ್ನೂ ಕಳೆದುಕೊಂಡಿದ್ದರು.ಮಹಂತೇಶ್ ರವರು ಲೋಕೋಪಯೋಗಿ ಇಲಾಖೆಯಲ್ಲಿ ಎಫ್.ಡಿ.ಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಪತಿಯ ಸಾವಿನ ನಂತೆ ಅನುಕಂಪದ ಆಧಾರದ ಮೇಲೆ ಪತ್ನಿ ಶ್ವೇತಾ ರವರಿಗೆ ಕೆಲಸ ದೊರೆತಿತ್ತು.ಪತಿಯ ಕೆಲಸ ಧಕ್ಕಿಸಿಕೊಂಡ ಶ್ವೇತಾ ರವರ ಬಾಳಿಗೆ ಎಂಟ್ರಿ ಕೊಟ್ಟವನು ಡಾ.ಶಿವಕುಮಾರ್.ಫೇಸ್ ಬುಕ್ ಮೂಲಕ ಪರಿಚಯಿಸಿಕೊಂಡು ಮನೆಗೆ ಬಂದ ಡಾ.ಶಿವಕುಮಾರ್ ನಯವಾದ ಮಾತುಗಳಿಂದ ನಂಬಿಸಿ ಶ್ವೇತಾ ರವರ ಬಳಿ ಇದ್ದ 500 ಗ್ರಾಂ ಚಿನ್ನಾಭರಣ ಹಾಗೂ 2 ಕೆಜಿ ತೂಕದ 110 ಬೆಳ್ಳಿ ನಾಣ್ಯಗಳನ್ನ ತನ್ನ ಹೆಸರಿನಲ್ಲಿ ಆಕ್ಸಿಸ್ ಬ್ಯಾಂಕ್ ಲಾಕರ್ ಓಪನ್ ಮಾಡಿಸಿದರು.ಸುರಕ್ಷತೆ ಹೆಸರ ಹೇಳಿ ಲಾಕರ್ ಕೀ ಗಳನ್ನ ಶ್ವೇತಾ ಬಳಿ ಇರಿಸಿದ್ದರು.ನಂತರ ಹೆಚ್ಚಿನ ಲಾಭದ ಆಮಿಷ ತೋರಿಸಿ ಶ್ವೇತಾ ಬಳಿ ಇದ್ದ 10.50 ಲಕ್ಷ ಹಣವನ್ನ ಡಾ.ಶಿವಕುಮಾರ್ ವರ್ಗಾವಣೆ ಮಾಡಿಸಿಕೊಂಡರು.ಇದಾದ ಕೆಲವೇ ದಿನಗಳಲ್ಲಿ ಲಾಕರ್ ನಲ್ಲಿದ್ದ ವಜ್ರದ ಉಂಗುರ ಡಾ.ಶಿವಕುಮಾರ್ ಬೆರಳಿನಲ್ಲಿ ಕಾಣಿಸಿದೆ.ಲಾಕರ್ ಕೀ ನನ್ನ ಬಳಿ ಇರುವಾಗ ವಜ್ರದ ಉಂಗುರ ಹೇಗೆ ಬಂತು ಎಂದು ಪ್ರಶ್ನಿಸಿದಾಗ ಸಮಂಜಸ ಉತ್ತರ ಬಂದಿಲ್ಲ.ನಂತರ ಪರಿಶೀಲಿಸಿದಾಗ ಲಾಕರ್ ನಲ್ಲಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ಪದಾರ್ಥಗಳು ಡಾ.ಶಿವಕುಮಾರ್ ಪಾಲಾಗಿತ್ತು.ತನ್ನ ಚಿನ್ನಾಭರಣ ಬೆಳ್ಳಿ ಹಾಗೂ ನಗದು ಹಣವನ್ನ ಹಿಂದಿರುಗಿಸುವಂತೆ ಕೇಳಿದಾಗ ಡಾ.ಶಿವಕುಮಾರ್ ಜೀವಬೆದರಿಕೆ ಹಾಕಿದ್ದಾರೆಂದು ಆರೋಪಿಸಿರುವ ಶ್ವೇತಾ ರವರು ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *