
ಬೆಳ್ಳಿ ಆಭರಣ ತಯಾರಿಸುವ ಘಟಕದಲ್ಲಿ ದರೋಡೆ…ಭದ್ರತಾ ಸಿಬ್ಬಂದಿಗಳನ್ನ ಕಟ್ಟಿಹಾಕಿ ಕೃತ್ಯ…10 ಕೆಜಿ ಬೆಳ್ಳಿ ಕಳುವು…
- TV10 Kannada Exclusive
- July 30, 2025
- No Comment
- 12
ಮೈಸೂರು,ಜು29,Tv10 ಕನ್ನಡ
ಬೆಳ್ಳಿ ಪದಾರ್ಥಗಳನ್ನ ತಯಾರಿಸುವ ಘಟಕಕ್ಕೆ ನುಗ್ಗಿದ ದರೋಡೆಕೋರರು ಭದ್ರತಾ ಸಿಬ್ಬಂದಿಯನ್ನು ಕಟ್ಟಿ ಹಾಕಿ ಸುಮಾರು 10 ಕೆ.ಜಿ. ಬೆಳ್ಳಿ ಆಭರಣ ದೋಚಿ ಪರಾಕಿಯಾಗಿರುವ ಘಟನೆ ಮೈಸೂರಿನ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ ರಾಕೇಶ್ ಎಂಬವರಿಗೆ ಸೇರಿದ ಬೆಳ್ಳಿಯ ಪದಾರ್ಥ ತಯಾರಿಸುವ ಗೋಡನ್ ಇದೆ.ಮಂಗಳವಾರ ಮಧ್ಯರಾತ್ರಿ ಗೋಡನ್ ಗೆ ನುಗ್ಗಿದ ದರೋಡೆಕೋರರು ಹುಡುಕಾಟ ನಡೆಸಿದ್ದಾರೆ. ಅಲ್ಲಿ ಸುಮಾರು 350 ಕೆ.ಜಿ ಕಚ್ಛಾ ಬೆಳ್ಳಿ ಇತ್ತು ಎಂದು ಹೇಳಲಾಗಿದೆ.
ಸೋಮವಾರ ರಾತ್ರಿಯಷ್ಟೇ 30 ಕೆ.ಜಿ ಬೆಳ್ಳಿಯನ್ನು ಆಭರಣವನ್ನಾಗಿ ಮಾಡಿ ಮಾಲೀಕರು ಮನೆಗೆ ಕೊಂಡೊಯ್ದಿದ್ದರು. ಉಳಿದದನ್ನು ಲಾಕರ್ ಇರಿಸಿದ್ದರು. ದರೋಡೆಕೋರರ ಕೈಗೆ 10 ಕೆ.ಜಿ. ಬೆಳ್ಳಿ ಮಾತ್ರ ಸಿಕ್ಕಿದೆ. ಉಳಿದದ್ದು ಲಾಕರ್ ನಲ್ಲಿ ಸೇಫ್ ಆಗಿದೆ ಎಂದು ತಿಳಿದು ಬಂದಿದೆ.ಈ ಸಂಬಂಧ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದರೋಡೆಕೋರರ ಬಂಧನಕ್ಕಾಗಿ ನಾಲ್ಕು ತಂಡ ರಚಿಸಲಾಗಿದೆ. ಕಾರಿನಲ್ಲಿ ಬಂದ ಮೂವರು ವ್ಯಕ್ತಿಗಳು ಕೃತ್ಯವೆಸಗಿದ್ದಾರೆ. ಕಟ್ಟಡದ ಮೇಲ್ಛಾವಣಿ ಓಪನ್ ಮಾಡಿ ಗೋಡೌನ್ ಪ್ರವೇಶ ಮಾಡಿದ್ದಾರೆ. ಇಬ್ಬರು ಸೆಕ್ಯುರಿಟಿಗಳನ್ನ ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿದ್ದಾರೆ. ಸದ್ಯದ ಮಾಹಿತಿ ಪ್ರಕಾರ 10 ಕೆ.ಜಿ. ಬೆಳ್ಳಿ ಕಳ್ಳತನವಾಗಿದೆ.
ರಾಕೇಶ್ ಅವರ ಸಂಸ್ಥೆಯಲ್ಲಿ 30 ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಕೆಲಸ ಬಿಟ್ಟು ತೆರಳಿದವರ ಪಟ್ಟಿ ಮಾಡಲಾಗಿದ್ದು, ಆ ಮೂಲಕ ತನಿಖೆ ಆರಂಭಿಸಿದ್ದಾರೆ. ಭದ್ರತಾ ಸಿಬ್ಬಂದಿಯಲ್ಲಿ ಒಬ್ಬರು ಸ್ಥಳೀಯರಾಗಿದ್ದು, ಮತ್ತೊಬ್ಬರು ಹೊರ ರಾಜ್ಯದವರು. ಎಲ್ಲಾ ಆಯಾಮದಿಂದಲೂ ತನಿಖೆ ನಡೆಯುತ್ತಿದೆ. ಸಿಸಿಟಿವಿ ದೃಶ್ಯ ಆಧರಿಸಿ ಶೀಘ್ರವೇ ಕಳ್ಳರನ್ನು ಬಂಧಿಸುವ ವಿಶ್ವಾಸ ಪೊಲೀಸರು ವ್ಯಕ್ತಪಡಿಸಿದ್ದಾರೆ…