ಜೈಲಿನ ಖೈದಿಗ ಮಹಿಳೆಯಿಂದ ಗಾಂಜ ಪೇಸ್ಟ್ ಸರಬರಾಜು
- CrimeTV10 Kannada Exclusive
- December 13, 2025
- No Comment
- 6
ಜೈಲಿನ ಖೈದಿಗ ಮಹಿಳೆಯಿಂದ ಗಾಂಜ ಪೇಸ್ಟ್ ಸರಬರಾಜು
ಮೈಸೂರು,ಡಿ13,Tv10 ಕನ್ನಡ
ಜೈಲಿನ ಖೈದಿಗೆ ಮಹಿಳೆಯೊಬ್ಬಳು ಗಾಂಜಾ ಪೇಸ್ಟ್ ನೀಡುವ ವೇಳೆ ಕೆಎಸ್‌ಐಎಸ್‌ಎಫ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಿಡಿದಿದ್ದಾರೆ.
ಮೈಸೂರು ಕೇಂದ್ರ ಕಾರಾಗೃಹದಲ್ಲಿ ಘಟನೆ ನಡೆದಿದೆ.
ಕರ್ನಾಟಕ ರಾಜ್ಯ ಕೈಗಾರಿಕ ಭದ್ರತಾ ಪಡೆಯಿಂದ ಪತ್ತೆ ಮಾಡಲಾಗಿದೆ.
ಆಕಾಶ್ ಎಂಬ ಖೈದಿಗೆ
ರೂಪಾ ಎಂಬಾಕೆ
ವಿಸಿಟರ್ ಆಗಿ ನೋಡಲು ಬಂದು ನೀಡುವ ವೇಳೆ ಲಾಕ್ ಆಗಿದ್ದಾಳೆ. ರೂಪಾ
ತನ್ನ ಜೀನ್ಸ್ ಪ್ಯಾಂಟ್ ಬೆಲ್ಟ್‌ನಲ್ಲಿ ಅಡಗಿಸಿಕೊಂಡು ಬಂದಿದ್ದಳು.
ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾಳೆ.
6 ಪ್ಯಾಕೇಟ್ ಗಾಂಜಾ ಪೇಸ್ಟ್ ವಶಕ್ಕೆ ಪಡೆಯಲಾಗಿದೆ.
ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ….