ಚೆಕ್ ಬೌನ್ಸ್ ಕೇಸ್ ಹಾಕಿದ್ರೆ ಹುಷಾರ್…ಶಾಲೆ ಕಾರ್ಯದರ್ಶಿಗೆ ಕೊಲೆ ಬೆದರಿಕೆ…ಕಿಟಕಿ ಗಾಜು ಪುಡಿಪುಡಿ…ಇಬ್ಬರ ವಿರುದ್ದ FIR
- CrimeTV10 Kannada Exclusive
- December 15, 2025
- No Comment
- 168
ಚೆಕ್ ಬೌನ್ಸ್ ಕೇಸ್ ಹಾಕಿದ್ರೆ ಹುಷಾರ್…ಶಾಲೆ ಕಾರ್ಯದರ್ಶಿಗೆ ಕೊಲೆ ಬೆದರಿಕೆ…ಕಿಟಕಿ ಗಾಜು ಪುಡಿಪುಡಿ…ಇಬ್ಬರ ವಿರುದ್ದ FIR
ಮೈಸೂರು,ಡಿ15,Tv10 ಕನ್ನಡ
ಚೆಕ್ ಬೌನ್ಸ್ ಕೇಸ್ ಹಾಕಿದ್ರೆ ಹುಷಾರ್ ಮರ್ಡರ್ ಮಾಡ್ತೀನಿ ಎಂದು ಶಾಲೆ ಕಾರ್ಯದರ್ಶಿಗೆ ಇಬ್ಬರು ವ್ಯಕ್ತಿಗಳು ಬೆದರಿಕೆ ಹಾಕಿರುವ ಘಟನೆ ಮೈಸೂರಿನ ರಾಘವೇಂದ್ರ ನಗರದ ಸುಮನ್ ವಿಧ್ಯಾಸಂಸ್ಥೆಯಲ್ಲಿ ನಡೆದಿದೆ.ಕೊಲೆ ಬೆದರಿಕೆ ಹಾಕಿದ್ದಲ್ಲದೆ ಕಿಟಕಿ ಗಾಜುಗಳನ್ನ ಪುಡಿ ಪುಡಿ ಮಾಡಿ ಪುಂಡಾಟ ನಡೆಸಿದ ಅಬ್ದುಲ್ ಶಾಹಿದ್ ಹಾಗೂ ಸದಾಕತ್ ಎಂಬುವರ ಮೇಲೆ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶಾಲೆ ಕಾರ್ಯದರ್ಶಿ ಅನ್ಸರ್ ಪಾಷಾ ಪ್ರಕರಣ ದಾಖಲಿಸಿದವರು.ಅನ್ಸರ್ ಪಾಷಾ ರವರು 2023 ರಲ್ಲಿ ದೊಡ್ಡಮ್ಮ ಸುಲ್ತಾನಾ ರವರಿಗೆ 3 ಲಕ್ಷ ಸಾಲ ನೀಡಿದ್ದರು.ಸಾಲ ಮರುಪಾವತಿಸಲು 2.40 ಲಕ್ಷಕ್ಕೆ ಚೆಕ್ ನೀಡಿದ್ದರು.ಚೆಕ್ ನಗದೀಕರಿಸಲು ಅನ್ಸರ್ ಪಾಷಾ ಬ್ಯಾಂಕ್ ಗೆ ಸಲ್ಲಿಸಿದಾಗ ಬೌನ್ಸ್ ಆಗಿದೆ.ಹಣ ವಸೂಲಿಗಾಗಿ ಅನ್ಸರ್ ಪಾಷಾ ನೋಟಿಸ್ ನೀಡಿದ್ದಾರೆ.ಈ ವೇಳೆ ಶಾಲೆಗೆ ಬಂದ ಸಂಬಂಧಿಕರಾದ ಅಬ್ದುಲ್ ಶಾಹಿದ್ ಹಾಗೂ ಸದಾಕತ್ ಚೆಕ್ ಬೌನ್ಸ್ ಕೇಸ್ ಹಾಕಿದ್ರೆ ಮರ್ಡರ್ ಮಾಡಿಸುವುದಾಗಿ ಬೆದರಿಕೆ ಹಾಕಿ ಅನ್ಸರ್ ಪಾಷಾ ಜೊತೆ ಅನುಚಿತವಾಗಿ ನಡೆದುಕೊಂಡು ಶಾಲೆಯಿಂದ ಹೊರಗೆ ತಳ್ಳಿ ಕಿಟಕಿ ಗಾಜುಗಳನ್ನ ಪುಡಿ ಪುಡಿ ಮಾಡಿ ಪುಂಡಾಟ ನಡೆಸಿದ್ದಾರೆ.ಇಬ್ಬರ ವಿರುದ್ದ ಕಾನೂನ ಕ್ರಮ ಕೈಗೊಳ್ಳುವಂತೆ ಅನ್ಸರ್ ಪಾಷಾ ಪ್ರಕರಣ ದಾಖಲಿಸಿದ್ದಾರೆ…