ನನ್ನ ಜೊತೆ ಬರದಿದ್ರೆ ಬಿಲ್ಡಿಂಗ್ ನಿಂದ ಬಿದ್ದು ಸಾಯುತ್ತೇನೆ…ಗೃಹಿಣಿಗೆ ಕಾಮುಕನಿಂದ ಲೈಂಗಿಕ ಕಿರುಕುಳ…ಬಲವಂತವಾಗಿ ಬೈಕ್ ನಲ್ಲಿ ಕರೆದೊಯ್ದು ಅನುಚಿತ ವರ್ತನೆ…ಗೃಹಿಣಿ ಆತ್ಮಹತ್ಯೆಗೆ ಯತ್ನ…
- CrimeTV10 Kannada Exclusive
- December 16, 2025
- No Comment
- 83
ನನ್ನ ಜೊತೆ ಬರದಿದ್ರೆ ಬಿಲ್ಡಿಂಗ್ ನಿಂದ ಬಿದ್ದು ಸಾಯುತ್ತೇನೆ…ಗೃಹಿಣಿಗೆ ಕಾಮುಕನಿಂದ ಲೈಂಗಿಕ ಕಿರುಕುಳ…ಬಲವಂತವಾಗಿ ಬೈಕ್ ನಲ್ಲಿ ಕರೆದೊಯ್ದು ಅನುಚಿತ ವರ್ತನೆ…ಗೃಹಿಣಿ ಆತ್ಮಹತ್ಯೆಗೆ ಯತ್ನ…
ಮೈಸೂರು,ಡಿ16,Tv10 ಕನ್ನಡ
ನನ್ನ ಜೊತೆ ಬಂದು ಸಹಕರಿಸದಿದ್ದರೆ ನಿನ್ನ ಹೆಸರು ಬರೆದು ಬಿಲ್ಡಿಂಗ್ ನಿಂದ ಬಿದ್ದು ಸಾಯುತ್ತೇನೆಂದು ಬೆದರಿಸಿ ಗೃಹಿಣಿಯನ್ನ ಬಲವಂತವಾಗಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಮೈಸೂರಿನ ಪಾಪಣ್ಣ ಲೇಔಟ್ ನಲ್ಲಿ ನಡೆದಿದೆ.ಕಾಮುಕನ ಕಿರುಕುಳಕ್ಕೆ ಬೇಸತ್ತ ಗೃಹಿಣಿ ಮಾತ್ರೆ ಸೇವಿಸಿ ಆತ್ಮಹತ್ಯೆ ಯತ್ನ ಮಾಡಿದ್ದಾರೆ.ಬಾಡಿಗೆ ನೀಡಿದ ಮನೆ ಮಾಲೀಕನ ವಿರುದ್ದ ನೊಂದ ಗೃಹಿಣಿ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಪಾಪಣ್ಣ ಲೇಔಟ್ ನ ಮೋಹನ್ ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ.ಮೋಹನ್ ರವರ ಮನೆಯಲ್ಲಿ 4 ವರ್ಷಗಳಿಂದ ನೊಂದ ಗೃಹಿಣಿ ಸಂಸಾರ ಸಮೇತ ಬಾಡಿಗೆ ಇದ್ದಾರೆ. ಕಳೆದ ವರ್ಷದಿಂದ ಮಾಲೀಕ ಮೋಹನ್ ಗೃಹಿಣಿಗೆ ಮೆಸೇಜ್ ಮಾಡುವಂತೆ ದುಂಬಾಲು ಬಿದ್ದಿದ್ದಾನೆ.ಮೋಹನ್ ನೀಡುತ್ತಿದ್ದ ಕಿರುಕುಳ ಗಂಡನಿಗೆ ಗೊತ್ತಾಗಿದೆ.ಈ ವಿಚಾರದಲ್ಲಿ ಗಲಾಟೆ ಆಗಿದೆ.ಎರಡು ದಿನಗಳ ಹಿಂದೆ ಗೃಹಿಣಿ ದೇವಸ್ಥಾನದ ಬಳಿ ನಿಂತಿದ್ದಾಗ ಬೈಕ್ ನಲ್ಲಿ ಬಂದ ಮೋಹನ್ ಗಾಡಿ ಹತ್ತುವಂತೆ ಒತ್ತಾಯಿಸಿದ್ದಾನೆ.ಬರದೇ ಇದ್ದರೆ ಬಿಲ್ಡಿಂಗ್ ನಿಂದ ಬಿದ್ದು ಸಾಯುವುದಾಗಿ ಬೆದರಿಸಿ ಕರೆದೊಯ್ದು ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ.ಮೋಹನ್ ವರ್ತನೆಗೆ ಬೇಸತ್ತ ಗೃಹಿಣಿ ಮಾತ್ರೆಗಳನ್ನ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ…