ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಮಗು ಸಾವು…
- Crime
- December 20, 2025
- No Comment
- 16

ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಮಗು ಸಾವು…
ಹುಣಸೂರು,ಡಿ20,Tv10 ಕನ್ನಡ
ಸುಡುತ್ತಿರುವ ಬಿಸಿನೀರಿನ ಪಾತ್ರೆಗೆ ಬಿದ್ದು ಹೆಣ್ಣುಮಗು ಸಾವನ್ನಪ್ಪಿದ ಘಟನೆ ಹುಣಸೂರು ತಾಲೂಕಿನ ವಿಜಯಗಿರಿ ಹಾಡಿಯಲ್ಲಿ ನಡೆದಿದೆ. ಆದಿವಾಸಿ ಜೇನುಕುರುಬ ದಂಪತಿ ರಮ್ಯಾ ಮತ್ತು ಬಸಪ್ಪನವರ ಒಂದೂವರೆ ವರ್ಷದ ಹೆಣ್ಣುಮಗು ಸ್ನಾನ ಮಾಡಿಸುವಾಗ ದುರ್ಘಟನೆ ನಡೆದಿದೆ.ನೀರು ಸುಡುತ್ತಿದ್ದರಿಂದ ತಣ್ಣೀರು ತರಲು ಮನೆಯೊಳಗೆ ಹೋದ ಸಂದರ್ಭದಲ್ಲಿ ಮಗು ಸುಡುವ ನೀರಿನ ಪಾತ್ರೆಗೆ ಬಿದ್ದು ಮೈ ಕಾಲು ಕೈ ಸುಟ್ಟು ಗಂಭೀರ ಸ್ಥಿತಿ ಯಲ್ಲಿದ್ದು ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದೆ…