2025ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರಕಟ: ರಾಜ್ಯದ 153 ಪೊಲೀಸರಿಗೆ ಗೌರವ
- TV10 Kannada Exclusive
- March 29, 2026
- No Comment
- 24
2025ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರಕಟ: ರಾಜ್ಯದ 153 ಪೊಲೀಸರಿಗೆ ಗೌರವ
ಬೆಂಗಳೂರು: 2025ನೇ ಸಾಲಿನ ಮುಖ್ಯಮಂತ್ರಿ ಪದಕ (CM Medal) ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ವಿವಿಧ ಜಿಲ್ಲೆಗಳ ಒಟ್ಟು 153 ಪೊಲೀಸ್ ಸಿಬ್ಬಂದಿಯನ್ನು ಈ ಬಾರಿ ಆಯ್ಕೆ ಮಾಡಲಾಗಿದೆ.
ಮೈಸೂರು ಜಿಲ್ಲೆಯ ನಾಲ್ವರು ಪೊಲೀಸ್ ಸಿಬ್ಬಂದಿಗೂ ಈ ಪ್ರತಿಷ್ಠಿತ ಗೌರವ ಲಭಿಸಿದೆ. ಪ್ರಶಸ್ತಿ ಪಡೆದವರ ವಿವರ ಹೀಗಿದೆ:
ಸುರೇಶ್ ಕುಮಾರ್ – ಇನ್ಸ್‌ಪೆಕ್ಟರ್, ವಿಜಯನಗರ ಪೊಲೀಸ್ ಠಾಣೆ
ಕೆ. ಸಣ್ಮುಗ ವರ್ಮ – ಇನ್ಸ್‌ಪೆಕ್ಟರ್, ಪೊಲೀಸ್ ತರಬೇತಿ ಶಾಲೆ
ಜಯಕುಮಾರ್ – ಹೆಡ್ ಕಾನ್ಸ್‌ಟೇಬಲ್, ಸಿಎಆರ್ (CAR)
ಎಸ್. ಶಿವಕುಮಾರ್ – ಎಎಸ್ಐ, ಅಶೋಕಪುರಂ ಪೊಲೀಸ್ ಠಾಣೆ (ನಗರ ವಿಶೇಷ ವಿಭಾಗ)
ಸಾಮಾಜಿಕ ಭದ್ರತೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಕರ್ತವ್ಯನಿಷ್ಠ ಸೇವೆ ಸಲ್ಲಿಸಿರುವ ಪೊಲೀಸ್ ಸಿಬ್ಬಂದಿಗೆ ಈ ಪದಕವನ್ನು ಪ್ರದಾನ ಮಾಡಲಾಗುತ್ತದೆ.
ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆಯಾದ ಸಿಬ್ಬಂದಿಗೆ ಈ ಗೌರವ ನೀಡಿರುವುದು ಪೊಲೀಸ್ ಇಲಾಖೆಯಲ್ಲಿ ಉತ್ತೇಜನ ಮೂಡಿಸಿದೆ.