ತುತ್ತು ನೀಡಿದ ವೃದ್ದೆಯ ಸಾವಿಗೆ ಮಿಡಿದ ವಾನರ…ಮೃತದೇಹದ ಬಳಿ ಕುಳಿತು ಅಂತಿಮ ನಮನ…ರಾಮನಗರದಲ್ಲೊಂದು ಹೃದಯಸ್ಪರ್ಶಿ ಘಟನೆ…

ತುತ್ತು ನೀಡಿದ ವೃದ್ದೆಯ ಸಾವಿಗೆ ಮಿಡಿದ ವಾನರ…ಮೃತದೇಹದ ಬಳಿ ಕುಳಿತು ಅಂತಿಮ ನಮನ…ರಾಮನಗರದಲ್ಲೊಂದು ಹೃದಯಸ್ಪರ್ಶಿ ಘಟನೆ…

ತುತ್ತು ನೀಡಿದ ವೃದ್ದೆಯ ಸಾವಿಗೆ ಮಿಡಿದ ವಾನರ…ಮೃತದೇಹದ ಬಳಿ ಕುಳಿತು ಅಂತಿಮ ನಮನ…ರಾಮನಗರದಲ್ಲೊಂದು ಹೃದಯಸ್ಪರ್ಶಿ ಘಟನೆ…

ರಾಮನಗರ,ಏ1,Tv10 ಕನ್ನಡ

ಒಂದೆಡೆ ಮಾನವ ಪ್ರಾಣಿ ಸಂಘರ್ಷ ತಾರಕಕ್ಕೆ ಏರುತ್ತಿದೆ.ಮತ್ತೊಂದೆಡೆ ಮಾನವ ಪ್ರಾಣಿಯ ಅವಿನಾನುಭಾವ ಸಂಬಂಧಕ್ಕೆಬೆಲೆಯೇ ಕಟ್ಟಲಾಗದಂತಹ ಸನ್ನಿವೇಶಗಳು ಕಾಣಿಸುತ್ತವೆ.ಅಂತಹದ್ದೊಂದು ಹೃದಯಸ್ಪರ್ಶಿ ಸನ್ನಿವೇಶ ರಾಮನಗರದಲ್ಲಿ ಕಂಡುಬಂದಿದೆ.ಪುಟಾಣಿ ಮರಿಯಿಂದ ಮಂಗವೊಂದಕ್ಕೆ ವೃದ್ದೆ ಪಾರ್ವತಮ್ಮ ತುತ್ತು ನೀಡಿದ್ದಾರೆ.ಅಕ್ಕರೆಯಿಂದ ಕೋತಿಯನ್ನ ನೋಡಿಕೊಂಡಿದ್ದಾರೆ.ವಾನರ ಮತ್ತು ಪಾರ್ವತಮ್ಮನ ನಡುವಿನ ಒಡನಾಟ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.ಸ್ಥಳೀಯರಿಗಂತೂ ಇಬ್ಬರ ಸಂಬಂಧ ನೋಡಿ ಸಂತಸ ವ್ಯಕ್ತಪಡಿಸುವುದೇ ಒಂದು ಖುಷಿ.ವಾನರನಿಗೆ ತುತ್ತು ನೀಡಿ ಆರೈಕೆ ಮಾಡಿದ್ದ ಪಾರ್ವತಮ್ಮ ಕೊನೆ ಉಸಿರೆಳೆದಿದ್ದಾರೆ.ಬದುಕಿನ ಪಯಣ ಮುಗಿಸಿದ ಪಾರ್ವತಮ್ಮನಿಗೆ ಸಾಕಿ ಸಲುಹಿದ ವಾನರ ಅಂತಿಮ ವಿದಾಯ ಹೇಳುವ ದೃಶ್ಯ ಮನಮಿಡಿಯುವಂತೆ ಮಾಡಿದೆ.ಪಾರ್ವತಮ್ಮ ರವರ ಮೃತದೇಹದ ಬಳಿ ಕುಳಿತ ಮಂಗ ಕಂಬನಿ ಮಿಡಿದು ಹೊರಳಾಡಿದೆ.ಇಂತಹ ಅಪೂರ್ವ ಸನ್ನಿವೇಶಕ್ಕೆ ಸ್ಥಳೀಯ ಜನ ಮೂಕಸಾಕ್ಷಿಯಾಗಿದ್ದಾರೆ.ಮೂಲತಃ ಚನ್ನಪಟ್ಟಣ ತಾಲ್ಲೂಕಿನ ಬಿ.ವಿ. ಹಳ್ಳಿ ಗ್ರಾಮದ ಪಾರ್ವತಮ್ಮ ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ.
ರಾಮನಗರದ ರಾಯರದೊಡ್ಡಿಯಲ್ಲಿರುವ ತನ್ನ ಮಗಳ ಮನೆಯಲ್ಲಿ ಪಾರ್ವತಮ್ಮ ವಾಸವಿದ್ದರು.ಪಾರ್ವತಮ್ಮನ ಅಗಲಿಕೆ ವಾನರನಿಗೆ ನೋವನ್ನ ತಂದಿದೆ.ತನಗೆ ತುತ್ತು ನೀಡಿದ ಪಾರ್ವತಮ್ಮರ ಸಾವಿಗೆ ಮರುಗಿದೆ.ಮೃತದೇಹದ ಮೇಲೆ ಹೊರಳಾಡಿ ಅಂತಿಮ ವಿದಾಯ ಹೇಳಿದ ಸನ್ನಿವೇಶ ಮನಕಲುಕುವಂತೆ ಮಾಡಿದೆ…

Spread the love

Related post

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ ಶಂಕೆ…

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ…

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ ಶಂಕೆ… ಮೈಸೂರು,ಅ4,Tv10 ಕನ್ನಡ ಮೈಸೂರಿನ ಗೋಕುಲಂನಲ್ಲಿ ಜನರ ತಂಡ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ…
ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ… ಮೈಸೂರು,ಸೆ30,Tv10 ಕನ್ನಡ ಹಣಕ್ಕಾಗಿ ಮಗನನ್ನೇ ಅಪಹರಿಸಿದ ತಂದೆ ಪತ್ನಿಗೆ 55 ಲಕ್ಷಕ್ಕೆ ಬೇಡಿಕೆ ಇಟ್ಟು…
Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…

Leave a Reply

Your email address will not be published. Required fields are marked *