ಗೋಲ್ಡ್,ಸಿಲ್ವರ್,ಕರೆನ್ಸಿ,ಕ್ರೂಡ್ ಆಯಿಲ್ ಬುಸಿನೆಸ್ ನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…19.65 ಲಕ್ಷಕ್ಕೆ ಉಂಡೆನಾಮ…

ಗೋಲ್ಡ್,ಸಿಲ್ವರ್,ಕರೆನ್ಸಿ,ಕ್ರೂಡ್ ಆಯಿಲ್ ಬುಸಿನೆಸ್ ನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…19.65 ಲಕ್ಷಕ್ಕೆ ಉಂಡೆನಾಮ…

ಗೋಲ್ಡ್,ಸಿಲ್ವರ್,ಕರೆನ್ಸಿ,ಕ್ರೂಡ್ ಆಯಿಲ್ ಬುಸಿನೆಸ್ ನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…19.65 ಲಕ್ಷಕ್ಕೆ ಉಂಡೆನಾಮ…

ಮೈಸೂರು,ಏ1,Tv10 ಕನ್ನಡ

ಗೋಲ್ಡ್,ಸಿಲ್ವರ್ ಮತ್ತು ವಿವಿದ ಕರೆನ್ಸಿ,ಕ್ರೂಡ್ ಆಯಿಲ್ ಕುರಿತಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚಿನ ಲಾಭಾಂಶ ಪಡೆಯಬಹುದೆಂಬ ಆಮಿಷವೊಡ್ಡಿದ ಖದೀಮರು ಮೈಸೂರಿನ ವ್ಯಕ್ತಿಯೊಬ್ಬರಿಗೆ 19.65,448/- ರೂ ವಂಚಿಸಿದ್ದಾರೆ.ಮೋಸಕ್ಕೆ ಒಳಗಾದ ಯಾದವಗಿರಿ ನಿವಾಸಿ ಚೆಂಗಪ್ಪ(60) ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಜನವರಿ ತಿಂಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬಂದ ಜಾಹಿರಾತು ಚೆಂಗಪ್ಪರನ್ನ ಆಕರ್ಷಿಸಿದೆ.Money prox ಹೂಡಿಕೆ ಬಗ್ಗೆ ವಿವರ ದೊರೆತಿದೆ.ಮೊಬೈಲ್ ಮೂಲಕ ಸಂಪರ್ಕಿಸಿದಾಗ ಜಸ್ಪ್ರೀತ್ ಎಂಬ ವ್ಯಕ್ತಿ ಮಾತನಾಡಿ ಗೋಲ್ಡ್,ಸಿಲ್ವರ್ ಮತ್ತು ವಿವಿದ ಕರೆನ್ಸಿ,ಕ್ರೂಡ್ ಆಯಿಲ್ ವಹಿವಾಟಿನ ಬಗ್ಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ಮಾಹಿತಿ ಒದಗಿಸಿದ್ದಾನೆ.ಆತನ ಸಲಹೆಯಂತೆ money prox app ಡೌನ್ ಲೋಡ್ ಮಾಡಿಕೊಂಡು ಖಾತೆ ಓಪನ್ ಮಾಡಿಸಿ 19,887/- ರೂಗಳನ್ನ ಹೂಡಿಕೆ ಮಾಡಿದ್ದಾರೆ.ನಂತರ ವಂಚಕ ಜಸ್ಪ್ರೀತ್ ತಾನು ಹೊರದೇಶಕ್ಕೆ ತೆರಳುವುದಾಗಿ ನಂಬಿಸಿ ಸುಮನ್ ರೈ ಎಂಬುವರನ್ನ ಪರಿಚಯಿಸಿ ಮುಂದಿನ ವಹಿವಾಟು ಇವರೇ ನಿರ್ವಹಿಸುವುದಾಗಿ ನಂಬಿಸಿದ್ದಾರೆ.ಕೆಲವೇ ದಿನಗಳಲ್ಲಿ ಚೆಂಗಪ್ಪ ರವರನ್ನ ನಂಬಿಸಿದ ಸುಮನ್ ರೈ 7,45,561/- ರೂ ಹೂಡಿಕೆ ಮಾಡಿಸಿದ್ದಾನೆ.ಇದಾದ ನಂತರ ತುರ್ತು ಕೆಲಸ ಇದೆ ಎಂದು ಕಾರಣ ನೀಡಿದ ಸುಮನ್ ರೈ ಮುಂದಿನ ನಿರ್ವಹಣೆ ನಿಹಾರಿಕಾ ಎಂಬುವರ ಮಾಡುತ್ತಾರೆಂದು ಪರಿಚಯಿಸಿದ್ದಾನೆ.ನಿಹಾರಿಕಾ ಸಹ ಮಾಹಿತಿ ಒದಗಿಸುತ್ತಾ 10 ಲಕ್ಷ ಹಣ ಹಣ ಹೂಡಿಕೆ ಮಾಡಿಸಿದ್ದಾಳೆ.ಹಣ ಹೂಡಕೆ ಮಾಡಿದ ನಂತರ ಮಾರುಕಟ್ಟೆ ಕುಸಿದಿದೆ ಎಂದು ಕಾರಣ ನೀಡಿದ ನಿಹಾರಿಕಾ ಸಂಪರ್ಕಕ್ಕೆ ಸಿಕ್ಕಿಲ್ಲ.ಒಂದು ವಾರದ ನಂತರ ಅನಾಲಿನ್ ಎಂಬ ವ್ಯಕ್ತಿ ಸಂಪರ್ಕಿಸಿ ಇದೀಗ ಮಾರುಕಟ್ಟೆ ಚೇತರಿಸಿಕೊಂಡಿದೆ 2 ಲಕ್ಷ ಹಣ ಹೂಡಿಕೆ ಮಾಡಿದ್ರೆ ಕಳೆದುಕೊಂಡ ಹಣ ಹಿಂದಕ್ಕೆ ಪಡೆಯಬಹುದೆಂದು ನಂಬಿಸಿದ್ದಾನೆ.ಅನಾಲಿನ್ ಮಾತನ್ನ ನಂಬಿದ ಚೆಂಗಪ್ಪ ಮತ್ತೆ 2 ಲಕ್ಷ ಇನ್ವೆಸ್ಟ್ ಮಾಡಿದ್ದಾರೆ.ಲಕ್ಷಾಂತರ ಹಣ ಹೂಡಿಕೆ ಮಾಡಿ ಗೊಂದಲಕ್ಕೆ ಸಿಲುಕಿದ್ದ ಚೆಂಗಪ್ಪ ಮುಂದೇನು ಎಂಬ ಚಿಂತೆಯಲ್ಲಿದ್ದಾಗ neeraj menan insurance ಕಂಪನಿ ಹೆಸರಲ್ಲಿ ವ್ಯಕ್ತಿಯೊಬ್ಬ ಸಂಪರ್ಕಿಸಿ ನಿಮ್ಮ ಹೂಡಿಕೆಯ ಶೇ23 ರಷ್ಟು ಹಣ ಪಾವತಿಸಿದರೆ ಸಂಪೂರ್ಣ ಹಣ ವಾಪಸ್ ದೊರೆಯುವುದಾಗಿ ತಿಳಿಸಿದ್ದಾನೆ.ಈ ಸಂಧರ್ಭದಲ್ಲಿ ಚೆಂಗಪ್ಪ ರವರು ತಾವು ಮೋಸ ಹೋಗಿರುವುದನ್ನ ಖಚಿತಪಡಿಸಿಕೊಂಡು ಸೆನ್ ಠಾಣೆಯಲ್ಲಿ 19,65,448/- ರೂ ವಂಚಿಸಿದ ವ್ಯಕ್ತಿಗಳ ವಿರುದ್ದ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ ಶಂಕೆ…

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ…

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ ಶಂಕೆ… ಮೈಸೂರು,ಅ4,Tv10 ಕನ್ನಡ ಮೈಸೂರಿನ ಗೋಕುಲಂನಲ್ಲಿ ಜನರ ತಂಡ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ…
ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ… ಮೈಸೂರು,ಸೆ30,Tv10 ಕನ್ನಡ ಹಣಕ್ಕಾಗಿ ಮಗನನ್ನೇ ಅಪಹರಿಸಿದ ತಂದೆ ಪತ್ನಿಗೆ 55 ಲಕ್ಷಕ್ಕೆ ಬೇಡಿಕೆ ಇಟ್ಟು…
Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…

Leave a Reply

Your email address will not be published. Required fields are marked *