ಕಾನೂನು ವಿಧ್ಯಾರ್ಥಿನಿಗೆ ಲಾ ಸ್ಟೂಡೆಂಟ್ ಟಾರ್ಚರ್ ಆರೋಪ…ಯಡಿಯೂರಪ್ಪ,ಸಿದ್ದರಾಮಯ್ಯ ಹೆಸರು ಬಳಕೆ…ಫೋಟೋ ಎಡಿಟ್ ಮಾಡಿ ಬ್ಲಾಕ್ ಮೇಲ್…ಹಣ ಚಿನ್ನಾಭರಣ ವಸೂಲಿ…ಮಾನಸಿಕ ಹಿಂಸೆ…ಖಾಲಿ ಚೆಕ್ ದುರುಪಯೋಗ ಆರೋಪ…ಜಾತಿ ವಿಷಯದಲ್ಲೂ ಕಿರುಕುಳ…ರಕ್ಷಣೆ ಕೋರಿ ಪೊಲೀಸರ ಮೊರೆಹೋದ ವಿಧ್ಯಾರ್ಥಿನಿ…

ಕಾನೂನು ವಿಧ್ಯಾರ್ಥಿನಿಗೆ ಲಾ ಸ್ಟೂಡೆಂಟ್ ಟಾರ್ಚರ್ ಆರೋಪ…ಯಡಿಯೂರಪ್ಪ,ಸಿದ್ದರಾಮಯ್ಯ ಹೆಸರು ಬಳಕೆ…ಫೋಟೋ ಎಡಿಟ್ ಮಾಡಿ ಬ್ಲಾಕ್ ಮೇಲ್…ಹಣ ಚಿನ್ನಾಭರಣ ವಸೂಲಿ…ಮಾನಸಿಕ ಹಿಂಸೆ…ಖಾಲಿ ಚೆಕ್ ದುರುಪಯೋಗ ಆರೋಪ…ಜಾತಿ ವಿಷಯದಲ್ಲೂ ಕಿರುಕುಳ…ರಕ್ಷಣೆ ಕೋರಿ ಪೊಲೀಸರ ಮೊರೆಹೋದ ವಿಧ್ಯಾರ್ಥಿನಿ…

ಕಾನೂನು ವಿಧ್ಯಾರ್ಥಿನಿಗೆ ಲಾ ಸ್ಟೂಡೆಂಟ್ ಟಾರ್ಚರ್ ಆರೋಪ…ಯಡಿಯೂರಪ್ಪ,ಸಿದ್ದರಾಮಯ್ಯ ಹೆಸರು ಬಳಕೆ…ಫೋಟೋ ಎಡಿಟ್ ಮಾಡಿ ಬ್ಲಾಕ್ ಮೇಲ್…ಹಣ ಚಿನ್ನಾಭರಣ ವಸೂಲಿ…ಮಾನಸಿಕ ಹಿಂಸೆ…ಖಾಲಿ ಚೆಕ್ ದುರುಪಯೋಗ ಆರೋಪ…ಜಾತಿ ವಿಷಯದಲ್ಲೂ ಕಿರುಕುಳ…ರಕ್ಷಣೆ ಕೋರಿ ಪೊಲೀಸರ ಮೊರೆಹೋದ ವಿಧ್ಯಾರ್ಥಿನಿ…

ಮೈಸೂರು,ಏ2,Tv10 ಕನ್ನಡ

ಕಾನೂನು ವಿಧ್ಯಾರ್ಥಿನಿಗೆ ಲಾ ಸ್ಟೂಡೆಂಟ್ ಒಬ್ಬರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿ ಫೋಟೋಗಳನ್ನ ಎಡಿಟ್ ಮಾಡಿ ಬ್ಲಾಕ್ ಮೇಲ್ ಮಾಡಿ ವಂಚನೆ ಮಾಡಿರುವುದಾಗಿ ಆರೋಪಿಸಿದ್ದಾರೆ.ಮಾಜಿ ಮುಖ್ಯಮಂತ್ರಿ ಯೆಡಿಯೂರಪ್ಪ,ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಹೆಸರನ್ನ ಬಳಸಿ ಕೆಲಸ ಮಾಡಿಕೊಡುವುದಾಗಿ ನಂಬಿಸಿ ಹಣ ವಸೂಲಿ ಮಾಡಿದ್ದಲ್ಲದೆ ಎಮೋಷನಲ್ ಬ್ಲಾಕ್ ಮೇಲ್ ಮಾಡಿ ಚಿನ್ನಾಭರಣ ಹಾಗೂ ಹಣ ಪಡೆದಿರುವುದಾಗಿ ವಿಧ್ಯಾರ್ಥಿನಿ ಆರೋಪಿಸಿದ್ದಾರೆ.ಈ ಸಂಬಂಧ ಲಾಸ್ಟೂಡೆಂಟ್ ಪ್ರದೀಪ್ ಸೋಲೆಮನ್ ಹಾಗೂ ಇವರ ತಾಯಿ ಕಲಾವತಿ ವಿರುದ್ದ ವಿಧ್ಯಾರ್ಥಿನಿ ನಯನ ಎಂಬುವರು ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

2018-2023 ರ ಅವಧಿಯಲ್ಲಿ ಇವರಿಬ್ಬರಿಗೆ ಪರಿಚಯವಾಗಿದೆ.ವಿಧ್ಯಾವಿಕಾಸ್ ಕಾನೂನು ಕಾಲೇಜಿನಲ್ಲಿ ನಯನ ಎಲ್ ಎಲ್ ಬಿ ವ್ಯಾಸಂಗ ಮಾಡುತ್ತಿದ್ದ ವೇಳೆ ಪ್ರದೀಪ್ ಸೋಲೆಮನ್ ಸಹ ಇದೇ ಕಾಲೇಜಿನಲ್ಲಿ ಎಲ್ ಎಲ್ ಬಿ ವ್ಯಾಸಂಗ ಮಾಡುತ್ತಿದ್ದು ಪರಿಚಯವಾಗಿದೆ.ಸ್ನೇಹಿತರೊಂದಿಗೆ ಇರುವಾಗ ನಯನ ರವರ ಫೋಟೋಗಳನ್ನ ಪ್ರದೀಪ್ ತೆಗೆದುಕೊಂಡಿದ್ದಾರೆ.ಆತ್ಮೀಯತೆಯನ್ನ ಬೆಳೆಸಿಕೊಂಡು ನಯನ ರವರ ತಂದೆ ಸುಬ್ರಹ್ಮಣ್ಯ ರನ್ನ ಪರಿಚಯಿಸಿಕೊಂಡಿದ್ದಾನೆ ಪ್ರದೀಪ್.ಸುಬ್ರಹಣ್ಯಸ್ವಾಮಿ ದೇವಸ್ಥಾನದ ಸಮಸ್ಯೆ ಬಗೆಹರಿಸುವುದಾಗಿ ನಂಬಿಸಿ ತನಗೆ ಸಿದ್ದರಾಮಯ್ಯ,ಯಡಿಯೂರಪ್ಪ ಪರಿಚಯ ಎಂದು ಹೇಳಿಕೊಂಡು ನಂಬಿಸಿ 5 ಲಕ್ಷ ಪಡೆದಿದ್ದಾನೆ.ನಂತರ ಕರೊನಾ ವೇಳೆ ಒಡವೆಗಳನ್ನ ಗಿರವಿ ಇಡಿಸಿ ಮೂರು ಲಕ್ಷ ಪಡೆದಿದ್ದಾನೆ.ಸ್ನೇಹಿತೆಯರೊಂದಿಗೆ ಇದ್ದ ಫೋಟೋಗಳನ್ನ ಎಡಿಟ್ ಮಾಡಿ ತನ್ನ ಜೊತೆ ಇರುವಂತೆ ಕ್ರಿಯೇಟ್ ಮಾಎಇ ಬ್ಲಾಕ್ ಮೇಲ್ ತಂತ್ರ ಪ್ರಯೋಗಿಸಿ ಹಣ ವಸೂಲಿಗೆ ಇಳಿದಿದ್ದಾನೆ.ಓವನ್,ಮೊಬೈಲ್ ಹಾಗೂ ಬುಲೆಟ್ ಬೈಕ್ ಗಳನ್ನ ನಯನ ಹೆಸರಲ್ಲಿ ಇಎಂಐ ಮಾಡಿಸಿ ಖರೀದಿಸಿದ್ದಾನೆ.ಕೆಲವು ಖಾಲಿ ಚೆಕ್ ಗಳನ್ನೂ ಸಹ ಪಡೆದಿದ್ದಾನೆ.ಚರ್ಚ್ ಗೆ ಕರೆದೊಯ್ದು ಕುಂಕುಮ‌ ಅಳಿಸಿಹಾಕಿ ಸಂಪ್ರದಾಯಕ್ಕೆ ಧಕ್ಕೆ ತರುವ ಕೆಲಸ ಮಾಡಿರುತ್ತಾನೆ.ಬುಲೆಟ್ ಬೈಕ್ ಸಾಲ ಪಡೆಯುವಾಗ ರಿಲಿಜಿಯನ್ ಕಾಲಂ ನಲ್ಲಿ ಕ್ರಿಶ್ಚಿಯನ್ ಎಂದು ನಮೂದಿಸಿರುವುದಲ್ಲದೆ ಮ್ಯಾರೀಡ್ ಎಂದು ಉಲ್ಕೇಖಿಸಿರುವುದಾಗಿ ನಯನ ದೂರಿನಲ್ಲಿ ದಾಖಲಿಸಿದ್ದಾರೆ.ಹಂತಹಂತವಾಗಿ ಹಣ ಪಡೆದ ಪ್ರದೀಪ್ ಫೋಟೋಗಳನ್ನ ಇಟ್ಟುಕೊಂಡು ಬ್ಲಾಕ್ ಮೇಲ್ ತಂತ್ರಗಾರಿಕೆ ಉಪಯೋಗಿಸಿರುವುದಾಗಿ ಆರೋಪಿಸಿರುವ ನಯನ ಈತನಿಂದ ರಕ್ಷಣೆ ಬೇಕೆಂದು ಪೊಲೀಸರ ಮೊರೆ ಹೋಗಿದ್ದಾರೆ.ಇದೀಗ ಜೆಎಸ್ ಎಸ್ ಕಾನೂನು ಕಾಲೇಜಿನಲ್ಲಿ ಎರಡನೇ ವರ್ಷದ ಎಂಎಲ್ ಎಂ ವ್ಯಾಸಂಗ ಮಾಡುತ್ತಿರುವ ನಯನ ತನಗೆ ಪ್ರಾಣ ಬೆದರಿಕೆ ಇದೆ ಎಂದು ದೂರಿದ್ದಾರೆ.ತನ್ನದಲ್ಲದ ತಪ್ಪಿಗೆ ಬ್ಯಾಂಕ್ ಏಜೆಂಟರು ನೀಡುತ್ತಿರುವ ಮಾನಸಿಕ ಕಿರುಕುಳ ತಪ್ಪಿಸಿ ಪ್ರದೀಪ್ ನಿಂದ ರಕ್ಷಣೆ ನೀಡುವಂತೆ ಕೆ.ಆರ್.ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾರೆ.ಇವೆಲ್ಲ ಅನ್ಯಾಯಕ್ಕೆ ತಾಯಿ ಕಲಾವತಿ ಸಹಕರಿಸಿರುವುದಾಗಿ ಆರೋಪಿಸಿ FIR ನಲ್ಲಿ ದಾಖಲಿಸಿದ್ದಾರೆ…

Spread the love

Related post

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ…

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು ಮೈಸೂರು, ಆ.4: ಮೈಸೂರಿನ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ…
ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ… ಹುಣಸೂರು,ಆ3,Tv10 ಕನ್ನಡ ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ನೇತೃತ್ವದ…
ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ… ಮೈಸೂರು,ಆ3,Tv10 ಕನ್ನಡ ಪೊಲೀಸ್ ಇಲಾಖೆಯ ಮಿಕ್ಕುಳಿದ ವೃಂದ ಹಾಗೂ ಸಿವಿಲ್ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆ ವೇಳೆ…

Leave a Reply

Your email address will not be published. Required fields are marked *