ಕೊಲೆ ಆರೋಪಿ ಜೈಲಿಗೆ…ಮೃತನ ಅಣ್ಣನ ಮೇಲೆ ರಿವೆಂಜ್…ಮಾರಣಾಂತಿಕ ಹಲ್ಲೆ…ಕೋಮಾ ಸ್ಥಿತಿಗೆ ತಲುಪಿದ ಅಣ್ಣ…ಕ್ರಮ ಕೈಗೊಳ್ಳದ ನಂಜನಗೂಡು ಗ್ರಾಮಾಂತರ ಪೊಲೀಸರು ಆರೋಪ…

ಕೊಲೆ ಆರೋಪಿ ಜೈಲಿಗೆ…ಮೃತನ ಅಣ್ಣನ ಮೇಲೆ ರಿವೆಂಜ್…ಮಾರಣಾಂತಿಕ ಹಲ್ಲೆ…ಕೋಮಾ ಸ್ಥಿತಿಗೆ ತಲುಪಿದ ಅಣ್ಣ…ಕ್ರಮ ಕೈಗೊಳ್ಳದ ನಂಜನಗೂಡು ಗ್ರಾಮಾಂತರ ಪೊಲೀಸರು ಆರೋಪ…

ಕೊಲೆ ಆರೋಪಿ ಜೈಲಿಗೆ…ಮೃತನ ಅಣ್ಣನ ಮೇಲೆ ರಿವೆಂಜ್…ಮಾರಣಾಂತಿಕ ಹಲ್ಲೆ…ಕೋಮಾ ಸ್ಥಿತಿಗೆ ತಲುಪಿದ ಅಣ್ಣ…ಕ್ರಮ ಕೈಗೊಳ್ಳದ ನಂಜನಗೂಡು ಗ್ರಾಮಾಂತರ ಪೊಲೀಸರು ಆರೋಪ…

ನಂಜನಗೂಡು,ಏ3,Tv10 ಕನ್ನಡ

ತಮ್ಮನ ಕೊಲೆ ಆರೋಪಿ ಜೈಲಿಗೆ ಸೇರಿದ ಹಿನ್ನಲೆ ಧ್ವೇಷ ಬೆಳೆಸಿಕೊಂಡ ಗುಂಪು ಮೃತನ ಅಣ್ಣನನ್ನ ಹಗ್ಗದಿಂದ ಕಟ್ಟಿ ಎಳೆದೊಯ್ದು ಮಾರಕಾಸ್ರ್ತಗಳಿಂದ ಹಲ್ಲೆ ನಡೆಸಿದ ಪರಿಣಾಮ ಕೋಮಾ ಸ್ಥಿತಿಗೆ ತಲುಪಿದ ಅಣ್ಣ ಆಸ್ಪತ್ರಗೆ ದಾಖಲಾದ ಘಟನೆ ನಂಜನಗೂಡಿನ ಕೆಂಪಿಸಿದ್ದನಹುಂಡಿ ಗ್ರಾಮದಲ್ಲಿ ನಡೆದಿದೆ.ತೀವ್ರವಾಗಿ ಗಾಯಗೊಂಡ ಅಣ್ಣ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ.ಬಲವಂತವಾಗಿ ಹೊತ್ತೊಯ್ದು ಹಲ್ಲೆ ನಡೆಸಿದ ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದರೂ ಕಾನೂನು ಕ್ರಮ ಕೈಗೊಳ್ಳದ ನಂಜನಗೂಡು ಗ್ರಾಮಾಂತರ ಪೊಲೀಸರ ವಿರುದ್ದ ಗಾಯಗೊಂಡ ವ್ಯಕ್ತಿ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ.

8 ತಿಂಗಳ ಹಿಂದೆ ಯುವತಿ ವಿಚಾರದಲ್ಲಿ ಕಿರಣ್ ಎಂಬಾತನ ಕೊಲೆ ಆಗಿದೆ.ಘಟನೆ ಸಂಬಂಧ ಸಿದ್ದರಾಜು,ವಸಂತ್ ಕುಮಾರ್ ಸೇರಿದಂತೆ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದೆ.ವಸಂತ್ ಕುಮಾರ್ ಇಂದಿಗೂ ಜೈಲು ವಾಸ ಅನುಭವಿಸುತ್ತಿದ್ದಾನೆ.ಈ ವಿಚಾರದಲ್ಲಿ ಕೊಲೆಯಾದ ಕಿರಣ್ ಅಣ್ಣ ಆನಂದ್ ಮೇಲೆ ವಸಂತ್ ಕುಮಾರ್ ಸಹೋದರ ಸಿದ್ದರಾಜು ದ್ವೇಷ ಬೆಳೆಸಿಕೊಂಡಿದ್ದಾನೆ.ಆಗಾಗ ಗಲಾಟೆಗಳು ನಡೆದಿವೆ.12 ದಿನಗಳ ಹಿಂದೆ ಮನೆಯಲ್ಲಿದ್ದ ಆನಂದ್ ರನ್ನ ಸಿದ್ದರಾಜು,ಶಿವಕುಮಾರ್,ಲೋಕೇಶ್ ಹಾಗೂ ಕೇಶವ ಬಲವಂತವಾಗಿ ಎಳೆದೊಯ್ದು ಹಗ್ಗದಿಂದ ಕಟ್ಟಿಹಾಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.ಗಂಭೀರವಾಗಿ ಗಾಯಗೊಂಡ ಆನಂದ್ ಕೋಮಾ ಸ್ಥಿತಿ ತಲುಪಿದ್ದಾರೆ.ಸಿದ್ದರಾಜು ಮತ್ತು ಇತರರ ವಿರುದ್ದ ಆನಂದ್ ಮನೆಯವರು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.ದೂರು ನೀಡಿ 12 ದಿನಗಳು ಕಳೆದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.ಆನಂದ್ ರನ್ನ ಎಳೆದೊಯ್ದಿರುವ ದೃಶ್ಯ ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದರೂ ಪೊಲೀಸರು ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.ಸಿದ್ದರಾಜು ಡ್ರಾಗರ್ ಹಿಡಿದು ಫೋಸ್ ಕೊಟ್ಟಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭೀತಿ ಸೃಷ್ಟಿಸುತ್ತಿದೆ.ಹೀಗಿದ್ದೂ ಪೊಲೀಸರು ಮೌನಕ್ಕೆ ಶರಣಾಗಿರುವುದು ಭಾರಿ ಅನುಮಾನಕ್ಕೆ ಕಾರಣವಾಗಿದೆ.ಇನ್ನಾದರೂ ಪೊಲೀಸರು ಎಚ್ಚೆತ್ತುಕೊಂಡು ಆರೋಪಿಗಳ ಹೆಡೆಮುರಿ ಕಟ್ಟುವರೇ…?

Spread the love

Related post

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ ಶಂಕೆ…

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ…

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ ಶಂಕೆ… ಮೈಸೂರು,ಅ4,Tv10 ಕನ್ನಡ ಮೈಸೂರಿನ ಗೋಕುಲಂನಲ್ಲಿ ಜನರ ತಂಡ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ…
ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ… ಮೈಸೂರು,ಸೆ30,Tv10 ಕನ್ನಡ ಹಣಕ್ಕಾಗಿ ಮಗನನ್ನೇ ಅಪಹರಿಸಿದ ತಂದೆ ಪತ್ನಿಗೆ 55 ಲಕ್ಷಕ್ಕೆ ಬೇಡಿಕೆ ಇಟ್ಟು…
Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…

Leave a Reply

Your email address will not be published. Required fields are marked *