ಮಂಗಳಮುಖಿ ಕಿಡ್ನಾಪ್…ಲೈಂಗಿಕ ಕಿರುಕುಳ…ನಾಲ್ವರು ದುಷ್ಕರ್ಮಿಗಳಿಂದ ಕೃತ್ಯ…ಮೂವರು ಅಂದರ್…24 ಗಂಟೆಯಲ್ಲಿ ಮೇಟಗಳ್ಳಿ ಪೊಲೀಸರ ಯಶಸ್ವಿ ಕಾರ್ಯಾಚರಣೆ…

ಮಂಗಳಮುಖಿ ಕಿಡ್ನಾಪ್…ಲೈಂಗಿಕ ಕಿರುಕುಳ…ನಾಲ್ವರು ದುಷ್ಕರ್ಮಿಗಳಿಂದ ಕೃತ್ಯ…ಮೂವರು ಅಂದರ್…24 ಗಂಟೆಯಲ್ಲಿ ಮೇಟಗಳ್ಳಿ ಪೊಲೀಸರ ಯಶಸ್ವಿ ಕಾರ್ಯಾಚರಣೆ…

ಮಂಗಳಮುಖಿ ಕಿಡ್ನಾಪ್…ಲೈಂಗಿಕ ಕಿರುಕುಳ…ನಾಲ್ವರು ದುಷ್ಕರ್ಮಿಗಳಿಂದ ಕೃತ್ಯ…ಮೂವರು ಅಂದರ್…24 ಗಂಟೆಯಲ್ಲಿ ಮೇಟಗಳ್ಳಿ ಪೊಲೀಸರ ಯಶಸ್ವಿ ಕಾರ್ಯಾಚರಣೆ…

ಮೈಸೂರು,ಏ18,Tv10 ಕನ್ನಡ

ತಡರಾತ್ರಿಯಲ್ಲಿ ಒಂಟಿಯಾಗಿ ಬರುತ್ತಿದ್ದ ಮಂಗಳಮುಖಿಯನ್ನ ನಾಲ್ವರು ದುಷ್ಕರ್ಮಿಗಳು ಬಲವಂತವಾಗಿ ಆಟೋದಲ್ಲಿ ಕಿಡ್ನಾಪ್ ಮಾಡಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸ್ಮಶಾನದ ಬಳಿ ನಡೆದಿದೆ.ಗೀತಾ(ಹೆಸರು ಬದಲಿಸಲಾಗಿದೆ) ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಂಗಳಮುಖಿ.16-04-2026 ರಂದು ಸ್ನೇಹಿತರೊಬ್ಬರ ಬಳಿ ಪಡೆದಿದ್ದ ಸಾಲವನ್ನ ಹಿಂದಿರುಗಿಸಿ ತನ್ನ ಮನೆಗೆ ಒಂಟಿಯಾಗಿ ವಾಪಸ್ ಬರುತ್ತಿದ್ದ ಗೀತಾಳನ್ನ ನಾಲ್ವರು ಯುವಕರು ಗಮನಿಸಿದ್ದಾರೆ.ಹತ್ತಿರ ಬಂದ ಯುವಕರು ಬಲವಂತವಾಗಿ ಆಟೋ ಒಳಗೆ ಹಾಕಿಕೊಂಡು ಹೊತ್ತೊಯ್ದಿದ್ದಾರೆ.ಎಷ್ಟೇ ಕಿರುಚಾಡಿದರೂ ಗೀತಾಳನ್ನ ಬಿಡದೆ ಲೈಂಗಿಕವಾಗಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ.ಅಲ್ಲಿಂದ ರಿಂಗ್ ರಸ್ತೆಯ ಕಾಲೇಜೊಂದರ ಬಳಿ ಕರೆದೊಯ್ದು ದೇಹದ ಹಲವು ಭಾಗಗಳಿಗೆ ಕಿಸ್ ಮಾಡಿ ದೈಹಿಕವಾಗಿ ಹಿಂಸೆ ನೀಡಿದ್ದಾರೆ.ಈ ವೇಳೆ ವ್ಯಕ್ತಿಯೊಬ್ಬರು ಬೈಕ್ ನಲ್ಲಿ ಬರುತ್ತಿದ್ದದನ್ನ ಕಂಡ ಖದೀಮರು ಗೀತಾಳನ್ನ ಬಿಟ್ಟು ಎಸ್ಕೇಪ್ ಆಗಿದ್ದಾರೆ.ಬೈಕ್ ಸವಾರನ ನೆರವಿನಿಂದ ಮನೆ ತಲುಪಿದ ಗೀತಾ ನಂತರ ತಮ್ಮ ಮನೆಯವರ ಜೊತೆ ಮಾತನಾಡಿ ಚರ್ಚಿಸಿ ಕೆ ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮೇಟಗಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.ಕೂಡಲೇ ಎಚ್ಚೆತ್ತ ಪೊಲೀಸರು ಘಟನೆ ನಡೆದ 24 ಗಂಟೆಯಲ್ಲಿ ನಾಲ್ವರು ಆರೋಪಿಗಳ ಪೈಕಿ ಮೂವರನ್ನ ವಶಕ್ಕೆ ಪಡೆದಿದ್ದಾರೆ.ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.ಪವನ್,ಸುಶೀಲ್,ಹರ್ಷ ಹಾಗೂ ಮುರಳಿ ಕೃತ್ಯವೆಸಗಿದ ದುಷ್ಕರ್ಮಿಗಳು.ಇದೀಗ ಪವನ್,ಸುಶೀಲ್ ಹಾಗೂ ಹರ್ಷ ಸಿಕ್ಕಿಬಿದ್ದಿದ್ದು ತಲೆ ಮರೆಸಿಕೊಂಡಿರುವ ಮುರಳಿ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ…

Spread the love

Related post

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ… ಹುಣಸೂರು,ಆ3,Tv10 ಕನ್ನಡ ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ನೇತೃತ್ವದ…
ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ… ಮೈಸೂರು,ಆ3,Tv10 ಕನ್ನಡ ಪೊಲೀಸ್ ಇಲಾಖೆಯ ಮಿಕ್ಕುಳಿದ ವೃಂದ ಹಾಗೂ ಸಿವಿಲ್ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆ ವೇಳೆ…
ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ…

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ…

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ… ಚಾಮರಾಜನಗರ,ಜು28,Tv10 ಕನ್ನಡ ಕಾಡುಹಂದಿ ಬೇಟೆ ಮಾಡಿದ ಆರೋಪದ ಹಿನ್ನಲೆ ಓರ್ವ ಆರೋಪಿಯನ್ನ ಬಂಧಿಸಲಾಗಿದೆ.ಮಹದೇಶ್ವರ ಬೆಟ್ಟ ವನ್ಯಧಾಮದಲ್ಲಿ ಘಟನೆ ನಡೆದಿದೆ.ಕೊಡಗು ಜಿಲ್ಲೆ…

Leave a Reply

Your email address will not be published. Required fields are marked *