ಯುವಕನ ಬರ್ಭರ ಕೊಲೆ ಪ್ರಕರಣ…7 ಹಂತಕರ ಬಂಧನ…ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮೈಸೂರು ನಗರ ಪೊಲೀಸರ ಯಶಸ್ವಿ ಕಾರ್ಯಾಚರಣೆ…

ಯುವಕನ ಬರ್ಭರ ಕೊಲೆ ಪ್ರಕರಣ…7 ಹಂತಕರ ಬಂಧನ…ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮೈಸೂರು ನಗರ ಪೊಲೀಸರ ಯಶಸ್ವಿ ಕಾರ್ಯಾಚರಣೆ…

ಯುವಕನ ಬರ್ಭರ ಕೊಲೆ ಪ್ರಕರಣ…7 ಹಂತಕರ ಬಂಧನ…ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮೈಸೂರು ನಗರ ಪೊಲೀಸರ ಯಶಸ್ವಿ ಕಾರ್ಯಾಚರಣೆ…

ಮೈಸೂರು,ಅ8,Tv10 ಕನ್ನಡ
ತಡರಾತ್ರಿ ವೇಳೆ ಯುವಕನಿಗೆ ಚಾಕುವಿನಿಂದ ಇರಿದು ಕೊಂದು ಎಸ್ಕೇಪ್ ಆಗಿದ್ದ ಹಂತಕರನ್ನ ಬಂಧಿಸುವಲ್ಲಿ ಮೈಸೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಹಂತಕ ಹೆಡೆಮುರಿ ಕಟ್ಟುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ.7 ಮಂದಿಯನ್ನ ಬಂಧಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಅ 6, ರ ತಡರಾತ್ರಿ ವೇಳೆ ಮೈಸೂರಿನ ಸಬರ್ಬ್ ಬಸ್ ನಿಲ್ದಾಣದ ಬಳಿ ಸದಾಖತ್ ಎಂಬ ಯುವಕನ ಮೇಲೆ ಅಟ್ಯಾಕ್ ಮಾಡಿದ್ದ 7 ಮಂದಿ ತಂಡ ಭೀಕರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿತ್ತು.ಸದಾಖತ್ ಜೊತೆಗಿದ್ದ ಹನೀಫ್ ಹಾಗೂ ನೌಶದ್ ರವರು ನೀಡಿದ ಮಾಹಿತಿ ಆಧರಿಸಿ ಮೈಸೂರು ನಗರ ಪೊಲೀಸರು ಕಾರ್ಯಾಚರಣೆ ಆರಂಭಿಸಿದರು.ಆರೋಪಿಗಳ ಬಗ್ಗೆ ಮಾಹಿತಿ ಇಲ್ಲದ ಕಾರಣ ಸವಾಲಾಗಿ ಸ್ವೀಕರಿಸಿದ ಮೈಸೂರು ಪೊಲೀಸರು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ.ಬಂಧಿತರು ಇಟ್ಟಿಗೆಗೂಡಿನ ನಿವಾಸಿಗಳು.ನಿತಿನ್,ಧನುಷ್,ಭಾಸ್ಕರ್,ವಿಘ್ನೇಶ್,ಧನುಷ್,ಜಯಕುಮಾರ್ ಹಾಗೂ ಕಿರಣ್ ಬಂಧಿತರು.

ಅದೇ ದಿನ ರಾತ್ರಿ ಸುಮಾರು ಗಂಟೆ ವೇಳೆ ಕ್ಷುಲ್ಲಕ ಕಾರಣಕ್ಕೆ ಅದೇ ಸ್ಥಳದಲ್ಲಿ ಗಲಾಟೆ ನಡೆದಿದೆ.ಈ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ಮಧ್ಯಪ್ರವೇಶಿಸಿ ರಾಜಿ ಮಾಡಿ ಕಳಿಸಿದ್ದಾರೆ.ನಂತರ ಜಿದ್ದು ಬೆಳೆಸಿಕೊಂಡ ಎರಡು ತಂಡಗಳು ಮತ್ತೆ ಗಲಾಟೆ ಮಾಡಿಕೊಂಡಿವೆ.ಮಧ್ಯರಾತ್ರಿ ವೇಳೆ ಸದಾಖತ್,ಹನೀಫ್,ನೌಶದ್ ಮೇಲೆ ನಿತಿನ್ ಹಾಗೂ 7 ಮಂದಿ ತಂಡ ಅಟ್ಯಾಕ್ ಮಾಡಿದೆ.ಈ ವೇಳೆ ಚಾಕುವಿನಿಂದ ಸದಾಖತ್ ಗೆ ಇರಿಯಲಾಗಿದೆ.ಬಿಡಿಸಲು ಬಂದ ಹನೀಫ್ ಹಾಗೂ ನೌಶದ್ ಮೇಲೂ ದಾಳಿ ಮಾಡಿದ ನಿತಿನ್ ತಂಡ ಎಸ್ಕೇಪ್ ಆಗಿದೆ.ತೀವ್ರ ರಕ್ತಸ್ರಾವವಾಗಿ ಅಸ್ವಸ್ಥನಾಗಿದ್ದ ಸದಾಖತ್ ನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಯಿತಾದ್ರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಪ್ರಕರಣವನ್ನ ಸವಾಲಾಗಿ ಸ್ವೀಕರಿಸಿದ ಮೈಸೂರು ಪೊಲೀಸರು ಡಿಸಿಪಿ (ಕಾ&ಸು) ಪ್ರದೀಪ್ ಘುಂಟಿ ಹಾಗೂ (ಅ&ಸಂ) ವಿಭಾಗದ ಗೀತಾಪ್ರಸನ್ನ ಮತ್ತು ದೇವರಾಜ ವಿಭಾಗದ ಎಸಿಪಿ ಶಶಿಧರ್ ಮಾರ್ಗದರ್ಶನದಲ್ಲಿ ಲಷ್ಕರ್ ಪೊಲೀಸ್ ಠಾಣೆಯ ಪಿಐ ಸಂತೋಷ್,ಆಲನಹಳ್ಳಿ ಠಾಣೆಯ ಪಿಐ ಶ್ರೀಕಾಂತ್,ನಜರಬಾದ್ ಠಾಣೆಯ ಪಿಐ ಜೀವನ್,ಉದಯಗಿರಿ ಠಾಣೆಯ ಪಿಐ ರಾಜು ರವರ ಉಸ್ತುವಾರಿಯಲ್ಲಿ ಪಿಎಸ್ಸೈ ಗೌತಮ್ ಗೌಡ,ಧನಲಕ್ಷ್ಮಿ,ಸುನಿಲ್,ಎಎಸ್ಸೈ ಗಳಾದ ಸಿದ್ದರಾಜು,ಕುಮಾರಸ್ವಾಮಿ,ದೊಡ್ಡಯ್ಯ ಮುಖ್ಯಪೇದೆಗಳಾದ ಲಿಂಗರಾಜು,ಮಂಜುನಾಥ್,ಆದಂ,ಮರುಸ್ವಾಮಿ,ಮಧುಕೇಶ್,ರಾಜೇಗೌಡ. ಪೇದೆಗಳಾದ ಚಿನ್ನಪ್ಪ,ಮಂಜುನಾಥ್,ಲಾಳೇಸಾಬ್,ಸತ್ಯ,ಮಹೇಶ್,ರಮೇಶ್,ಶ್ರೀನಿವಾಸ್,ಸಮೀವುಲ್ಲಾ,ಮಹದೇವಪ್ರಸಾದ್,ಗಿರೀಶ್ ಹಾಗೂ ಕುಮಾರ್ ರವರನ್ನೊಳಗೊಂಡ ವಿಶೇಷ ತಂಡ ರಚನೆಯಾಗಿದೆ.ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಹಂತಕರನ್ನ ಸೆದೆಬಡಿದಿದ್ದಾರೆ…

Spread the love

Related post

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ…

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ……

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ… ಮೈಸೂರು,ಆ30,Tv10 ಕನ್ನಡ ಮೈಸೂರು ಮಹಾನಗರ ಪಾಲಿಕೆಯ ಗಾರ್ಬೇಜ್ ಮುಕ್ತ ಪಾಯಿಂಟ್ ಯೋಜನೆ…
ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು… ಮೈಸೂರು,ಆ20,Tv10 ಕನ್ನಡ ಹಳೇ ದ್ವೇಷದ ಹಿನ್ನಲೆ ನಡೆದ ಗಲಾಟೆಯಲ್ಲಿ ಕಾರಿನ ಬ್ಯಾನೆಟ್ ಮೇಲೆ…
50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ… ಮೈಸೂರು,ಆ19,Tv10 ಕನ್ನಡ 14-03-2023 ರ ನಿರ್ದೇಶನ ಉಲ್ಲಂಘಿಸಿ 50-50 ಅನುಪಾತದಡಿ ಹಂಚಿಕೆ ಮಾಡಿರುವ…

Leave a Reply

Your email address will not be published. Required fields are marked *