ಪ್ರೀತಿಸಿ ಮದುವೆ ಆದರು…ಸಾವಿನಲ್ಲೂ ಒಂದಾದರು…ಮೈಸೂರಿನಲ್ಲೊಂದು ದಾರುಣ ಘಟನೆ…

ಪ್ರೀತಿಸಿ ಮದುವೆ ಆದರು…ಸಾವಿನಲ್ಲೂ ಒಂದಾದರು…ಮೈಸೂರಿನಲ್ಲೊಂದು ದಾರುಣ ಘಟನೆ…

ಪ್ರೀತಿಸಿ ಮದುವೆ ಆದರು…ಸಾವಿನಲ್ಲೂ ಒಂದಾದರು…ಮೈಸೂರಿನಲ್ಲೊಂದು ದಾರುಣ ಘಟನೆ…

ಮೈಸೂರು,ನ5,Tv10 ಕನ್ನಡ
ಪ್ರೀತಿಸಿ ಮದುವೆಯಾದ ಜೋಡಿ ಸಾವಿನಲ್ಲೂ ಒಂದಾದ ದುರಂತ ಘಟನೆ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.ನಾಲೆಯ ಬಳಿ ಬಟ್ಟೆ ಒಗೆಯುತ್ತಿರುವಾಗ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದ ಪತ್ನಿಯನ್ನ ರಕ್ಷಿಸಲು ನಾಲೆಗೆ ಹಾರಿದ ಪತಿಯೂ ಸಹ ನೀರು ಪಾಲಾಗಿದ್ದಾನೆ.ಪ್ರೀತಿಸಿ ವಿವಾಹವಾದ ಜೋಡಿ ಸಾವಿನಲ್ಲೂ ಸಹ ಒಂದಾಗಿದ್ದಾರೆ.ಶಿವಕುಮಾರ್(29) ಹಾಗೂ ಕವಿತಾ(25) ಮೃತ ದಂಪತಿ.ಶಾದನಹಳ್ಳಿ ಗ್ರಾಮದ ನಿವಾಸಿಗಳಾದ ಪ್ರೇಮಿಗಳು 5 ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.ಶ್ರೀರಂಗಪಟ್ಟಣ ಮೊಗರಳ್ಳಿ ಗ್ರಾಮದಲ್ಲಿ ನೆಲೆಸಿದ್ದರು.ಕೆ.ಆರ್.ಎಸ್.ಬಳಿಯ ವರುಣಾ ಚಾನೆಲ್ ಕಟ್ಟೆ ಮೇಲೆ ಕುಳಿತು ಬಟ್ಟೆ ಒಗೆಯುತ್ತಿದ್ದ ಕವಿತಾ ಆಕಸ್ಮಿಕವಾಗಿ ನೀರಿಗೆ ಜಾರಿ ಬಿದ್ದಿದ್ದಾಳೆ.ಪತ್ನಿಯನ್ನ ರಕ್ಷಿಸಲು ಪತಿ ಶಿವಕುಮಾರ್ ಸಹ ನೀರಿಗೆ ಹಾರಿದ್ದಾನೆ.ಆದರೆ ಇಬ್ಬರೂ ಸಹ ನೀರಿನಿಂದ ಮೇಲೆ ಬಂದಿಲ್ಲ.ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಕಾಮನಕೆರೆಹುಂಡಿ ಬಳಿಯ ವರುಣಾ ಚಾನೆಲ್ ನಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ.ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *