ಕಸ್ಟಮ್ಸ್ ಅಧಿಕಾರಿ ಸೋಗಿನಲ್ಲಿ ವಂಚನೆ…ಖದೀಮ ಮೈಸೂರಿನಲ್ಲಿ ಅಂದರ್…

ಕಸ್ಟಮ್ಸ್ ಅಧಿಕಾರಿ ಸೋಗಿನಲ್ಲಿ ವಂಚನೆ…ಖದೀಮ ಮೈಸೂರಿನಲ್ಲಿ ಅಂದರ್…

ಕಸ್ಟಮ್ಸ್ ಅಧಿಕಾರಿ ಸೋಗಿನಲ್ಲಿ ವಂಚನೆ…ಖದೀಮ ಮೈಸೂರಿನಲ್ಲಿ ಅಂದರ್…

ಮೈಸೂರು,ಡಿ9,Tv10

ಕಸ್ಟಮ್ಸ್ ಅಧಿಕಾರಿ ಎಂದು ನಂಬಿಸಿ ಹಲವಾರು ಶಿಕ್ಷಕರಿಗೆ ಹಾಗೂ ಸಾರ್ವಜನಿಕರಿಗೆ ಲಕ್ಷಾಂತರ ರೂ ಪಂಗನಾಮ ಹಾಕಿದ ಖದೀಮ ಮೈಸೂರು ಪೊಲೀಸರ ಅತಿಥಿಯಾಗಿದ್ದಾನೆ.ಗೂಗಲ್ ನಲ್ಲಿ ಸರ್ಚ್ ಮಾಡಿ ಶಾಲೆಗಳನ್ನ ಸಂಪರ್ಕಿಸಿ ಶಿಕ್ಷಕರ ಮೊಬೈಲ್ ನಂಬರ್ ಗಳನ್ನ ಸಂಗ್ರಹಿಸಿ ತಾನು ಹಳೆ ವಿಧ್ಯಾರ್ಥಿ ಎಂದು ನಂಬಿಸಿದ್ದಾನೆ.ನಂತರ ತಾನು ಕಸ್ಟಮ್ಸ್ ಅಧಿಕಾರಿ ಎಂದು ಸುಳ್ಳು ಹೇಳಿ ಕಡಿಮೆ ಬೆಲೆಯಲ್ಲಿ ಚಿನ್ನಾಭರಣ ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನ ಕೊಡಿಸುವುದಾಗಿ ನಂಬಿಸಿ 7,48,000/- ರೂ ವಂಚಿಸಿದ್ದಾನೆ.ಬೆಂಗಳೂರಿನ ವಿವಿದ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ದ 6 ಪ್ರಕರಣಗಳು ದಾಖಲಾಗಿದೆ.ಖರ್ತನಾಕ್ ಆರೋಪಿ ಮೈಸೂರಿನಲ್ಲಿ ಅಡಗಿರುವ ಮಾಹಿತಿ ಅರಿತ ಸೆನ್ ಠಾಣೆ ಪೊಲೀಸರು ಜಾಲ ಬೀಸಿ ಬಂಧಿಸಿದ್ದಾರೆ.ಆರೋಪಿಯಿಂದ ಒಂದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.ಈ ಹಿಂದೆ ಈತ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋದಲ್ಲಿ ಕೆಲಸ ಮಾಡಿದ್ದು ನಂತರ ಅಮೆಜಾನ್ ನಲ್ಲಿ ಸ್ಕ್ಯಾನರ್ ಆಗಿ ಕೆಲಸ ಮಾಡಿರುವುದಾಗಿ ವಿಚಾರಣೆಯಲ್ಲಿ ತಿಳಿದು ಬಂದಿದೆ.

ಡಿಸಿಪಿ ಪ್ರದೀಪ್ ಗುಂಟಿ ಮಾರ್ಗದರ್ಶನದಲ್ಲಿ ಸೆನ್ ಠಾಣೆಯ ಇನ್ಸ್ಪೆಕ್ಟರ್ ಜಯಕುಮಾರ್ ಹಾಗೂ ಸಿಬ್ಬಂದಿಗಳು ಆರೋಪಿಯ ಬಂಧನ ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ…

Spread the love

Related post

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…
ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಕೊಳ್ಳೇಗಾಲ,ಜೂ26,Tv10 ಕನ್ನಡ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳು ಅಸಹಜ ಸಾವಿಗೀಡಾಗಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ…
ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025 ಕಿರೀಟ…

ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025…

ಮೈಸೂರು,ಜೂ26,Tv10 ಕನ್ನಡ ಮೈಸೂರಿನ ಪೀಡಿಯಾಟ್ರಿಕ್ ನ್ಯೂರಾಲಜಿಸ್ಟ್ ಡಾ.ಅನೂಷಾ ರಾಜ್ ರವರು ಮಿಸ್ ಮೆಡಿಕ್ವೀನ್ 2025 ಸ್ಪರ್ಧೆಯಲ್ಲಿ ವಿಜಯಿಯಾಗಿ ಹೊರಹೊಮ್ಮಿದ್ದಾರೆ. ಜೂನ್ 22 ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಸ್ಪರ್ಧೆಯಲ್ಲಿ…

Leave a Reply

Your email address will not be published. Required fields are marked *