ಪತ್ನಿಗೆ ಮೆಸೇಜ್ ಮಾಡಿದ ಸ್ನೇಹಿತ ಮಟ್ಯಾಷ್…24 ಗಂಟೆಯಲ್ಲಿ ಆರೋಪಿ ಅಂದರ್…

ಪತ್ನಿಗೆ ಮೆಸೇಜ್ ಮಾಡಿದ ಸ್ನೇಹಿತ ಮಟ್ಯಾಷ್…24 ಗಂಟೆಯಲ್ಲಿ ಆರೋಪಿ ಅಂದರ್…

ಪತ್ನಿಗೆ ಮೆಸೇಜ್ ಮಾಡಿದ ಸ್ನೇಹಿತ ಮಟ್ಯಾಷ್…24 ಗಂಟೆಯಲ್ಲಿ ಆರೋಪಿ ಅಂದರ್…

ಮೈಸೂರು,ಜ2,Tv10 ಕನ್ನಡ
ಸ್ನೇಹಿತನ ಪತ್ನಿಗೆ ಮೆಸೇಜ್ ಮಾಡಿ ಕೊಲೆಯಾದ ಪ್ರಕರಣದ ಆರೋಪಿಯನ್ನ 24 ಗಂಟೆ ಒಳಗೆ ಬಂಧಿಸುವಲ್ಲಿ ವಿಜಯನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಲೋಕೇಶ್ ಬಂಧಿತ ಆರೋಪಿ.ದರ್ಶನ್ ಸ್ನೇಹಿತನಿಂದಲೇ ಕೊಲೆಯಾದ ದುರ್ದೈವಿ.

ಕೊಲೆಯಾದ ದರ್ಶನ್ ಹಾಗೂ ಆರೋಪಿ ಲೋಕೇಶ್ ಸ್ನೇಹಿತರು.ಮೈಸೂರಿನ ಕೂರ್ಗಳ್ಳಿಯಲ್ಲಿ ಒಂದೇ ಮನೆಯಲ್ಲಿ ವಾಸವಿದ್ದರು.ಎರಡನೇ ಮದುವೆಯಾಗಿದ್ದ ಲೋಕೇಶ್ ಸಂಸಾರ ಸಮೇತ ಮನೆಯಲ್ಲಿದ್ದ.ಸ್ನೇಹಿತನ ಪತ್ನಿಯ ಮೇಲೆ ಕಣ್ಣುಹಾಕಿದ್ದ ದರ್ಶನ್ ಆಗಾಗ ಮೆಸೇಜ್ ಮಾಡಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ.ಈ ಹಿನ್ನಲೆ ದರ್ಶನ್ ಮೇಲೆ ದ್ವೇಷ ಬೆಳೆಸಿಕೊಂಡ ಲೋಕೇಶ್ ಚಾಕುವಿನಿಂದ ಇರಿದಿದ್ದ.ಆಸ್ಪತ್ರೆಗೆ ದಾಖಲಾಗಿದ್ದ ದರ್ಶನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.ಕೃತ್ಯ ನಡೆದ 24 ಗಂಟೆ ಒಳಗೆ ವಿಜಯನಗರ ಠಾಣಾ ಪೊಲೀಸರು ಆರೋಪಿ ಲೋಕೇಶ್ ನನ್ನು ಕೆ.ಆರ್.ನಗರದಲ್ಲಿ ಬಂಧಿಸಿದ್ದಾರೆ.ವಿಚಾರಣೆ ವೇಳೆ ತನ್ನ ಎರಡನೇ ಪತ್ನಿಗೆ ಮೆಸೇಜ್ ಮಾಡುತ್ತಿದ್ದ ಕಾರಣ ಕೊಲೆ ಮಾಡಿದ್ದಾಗಿ ತಿಳಿಸಿದ್ದಾನೆ.

ಡಿಸಿಪಿ ಮುತ್ತುರಾಜ್,ಎಸಿಪಿ ಶಿವಶಂಕರ್ ಮಾರ್ಗದರ್ಶನದಲ್ಲಿ ವಿಜಯನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವಿಶಂಕರ್ ನೇತೃತ್ವದಲ್ಕಿ ಪಿಎಸ್ಸೈ ಗಳಾದ ಶಬರೀಶ್,ನಾರಾಯಣ್ ಸಿಬ್ಬಂದಿಗಳಾದ ಶಂಕರ್,ಮುರಳೀಧರ್,ಲೋಕೇಶ್,ಪ್ರಭಾಕರ್,ಸೋಮಾರಾಧ್ಯ,ಮೆಹಬೂಬ್ ಪಾಷ,ಶಿವಕುಮಾರ್,ಶ್ರೀನಿವಾಸ್ ಮೂರ್ತಿ,ಅಣ್ಣಪ್ಪ ದೇವಾಡಿಗ ಹಾಗೂ ಕಾಮಣ್ಣ ರವರು ಆರೋಪಿಯನ್ನ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *