TV10 Kannada Exclusive

ಜಂಬೂ ಸವಾರಿ ವೀಕ್ಷಿಸಲು ಹೈ ರಿಸ್ಕ್…ಟ್ರಾನ್ಸ್ಫಾರ್ಮರ್ ಇದ್ದರೂ ಲೆಕ್ಕಿಸದ ಜನ…

ಮೈಸೂರು,ಅ3,Tv10 ಕನ್ನಡ ವಿಶ್ವವಿಖ್ಯಾತ ಜಂಬೂಸವಾರಿ ವೀಕ್ಷಿಸಲು ಕೆಲವು ಮಂದಿ ಹೈ ರಿಸ್ಕ್ ತೆಗೆದುಕೊಂಡಿದ್ದಾರೆ.ಜೀವ ಪಣವಿಟ್ಟ ಕೆಲವು ಮಂದಿ ಟ್ರಾನ್ಸ್ಫಾರ್ಮರ್ ಇದ್ದರೂ ಲೆಕ್ಕಿಸದೆ ಭದ್ರತೆಗಾಗಿ ನಿರ್ಮಿಸಿದ ಕಾಂಪೌಂಡ್ ಮೇಲೆ ಕುಳಿತು ಜಂಬೂ ಸವಾರಿ ವೀಕ್ಷಿಸಿದ್ದಾರೆ.ಕಟ್ಟಡಗಳ ಮೇಲೆ,ಮರಗಳ ಮೇಲೆ,ಹಾಗೂ ಕಂಬಗಳ ಮೇಲೆ ಕುಳಿತು ಮೆರವಣಿಗೆ ವೀಕ್ಷಿಸುವ ಕುರಿತಂತೆ ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಆದೇಶಿಸಿದೆ.ಅಂತಹ ಸ್ಥಳಗಳಲ್ಲಿ ಕುಳಿತುಕೊಳ್ಳಬಾರದೆಂದು ಆದೇಶ ಹೊರಡಿಸಿದೆ.ಆದೇಶದಂತೆ ಕೆಲವು ಕಟ್ಟಡಗಳ ಮೇಲೆ ಜನ ಎಂದಿನಂತೆ ಕುಳಿತುಕೊಳ್ಳದೆ ಆದೇಶ ಪಾಲಿಸಿದ್ದಾರೆ.ಆದ್ರೆ ಸಯ್ಯಾಜಿರಾವ್ ರಸ್ತೆಯಲ್ಲಿರುವ ಹೈ
Read More

50 ಸಾವಿರ ಪೌಂಡ್ ಗಿಫ್ಟ್ ಆಮಿಷ…10.90 ಲಕ್ಷ ಕಳೆದುಕೊಂಡ ಯೋಗ ಶಿಕ್ಷಕಿ…

ಮೈಸೂರು,ಸೆ27,Tv10 ಕನ್ನಡ 50 ಸಾವಿರ ಪೌಂಡ್ ಗಿಫ್ಟ್ ಕಳಿಸುವುದಾಗಿ ಆಮಿಷ ಒಡ್ಡಿದ ಇಂಗ್ಲೆಂಡ್ ಶಿಷ್ಯ ಯೋಗ ಗುರುವಿಗೆ 10.90 ಲಕ್ಷಕ್ಕೆ ಉಂಡೆನಾಮ ಹಾಕಿದ್ದಾನೆ.ಮೈಸೂರಿನ ವಿವೇಕಾನಂದ ನಗರದ ನಿವಾಸಿ ಯೋಗಶಿಕ್ಷಕಿಯಾಗಿರುವ ಸವಿತಾ ಕುಮಾರಿ ಹಣ ಕಳೆದುಕೊಂಡವರು.ಯೋಗತರಬೇತಿ ಬಗ್ಗೆ ಸುನಿತಾ ಕುಮಾರಿ ರವರು YOU TUBE,FASE BOOK ನಲ್ಲಿ ಜಾಹಿರಾತು ನೀಡಿದ್ದಾರೆ.ಎರಡು ತಿಂಗಳ ತರಬೇತಿ ಪಡೆಯುವುದಾಗಿ ಇಂಗ್ಲೆಂಡ್ ನ TOMMY ALISON ಎಂಬ ವ್ಯಕ್ತಿ ಸಂಪರ್ಕಿಸಿ ಎರಡು ತಿಂಗಳ ತರಬೇತಿಗಾಗಿ ಸೇರ್ಪಡೆಯಾಗಿದ್ದಾನೆ.ತರಬೇತಿ ಶುಲ್ಕ
Read More

ಅಕ್ಷರ ಲೋಕದ ಮಾಂತ್ರಿಕ ಎಸ್ ಎಲ್ ಭೈರಪ್ಪ ಇನ್ನಿಲ್ಲ…

ಮೈಸೂರು,ಸೆ24,Tv10 ಕನ್ನಡ ನಾಡಿನ ಹಿರಿಯ ಸಾಹಿತಿ , ಕನ್ನಡ ಸಾಹಿತ್ಯ ಲೋಕದ ಅಕ್ಷರ ಮಾಂತ್ರಿಕ ಎಸ್​ಎಲ್ ಬೈರಪ್ಪ ಅವರು ನಿಧನರಾಗಿದ್ದಾರೆ. 94 ವರ್ಷದ ಬೈರಪ್ಪ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಅವರು ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಭಾಜನರಾಗಿದ್ದರು.ಬೆಂಗಳೂರಿನ ರಾಜರಾಜೇಶ್ವರಿ ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಎಸ್ ಎಲ್ ಬೈರಪ್ಪ ನಿಧನರಾಗಿದ್ದಾರೆ.ಕನ್ನಡ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವ ಇವರ ಕೃತಿಗಳು ಇಂಗ್ಲೀಷ್ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು
Read More

ಯುವ ದಸರಾ ಉದ್ಘಾಟಿಸಲು ಮೈಸೂರಿಗೆ ಆಗಮಿಸಿದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ…

ಮೈಸೂರು,ಸೆ23,Tv10 ಕನ್ನಡ ನಾಳೆಯಿಂದ ಆರಂಭವಾಗಲಿರುವ ಯುವದಸರಾ ಉದ್ಘಾಟಿಸಲು ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೈಸೂರಿಗೆ ಆಗಮಿಸಿದ್ದಾರೆ.ಅರ್ಜುನ್ ಜನ್ಯಾ ರವರನ್ನ ಮೈಸೂರು ಎಂ ಜಿ ರಸ್ತೆಯಲ್ಲಿರುವ ರಾಡಿಸನ್ ಬ್ಲೂ ಹೋಟೆಲ್ ನಲ್ಲಿ ಸ್ವಾಗತಿಸಲಾಯಿತು. ಕಾಂಗ್ರೆಸ್ ಮುಖಂಡರಾದಜಿ ಶ್ರೀನಾಥ್ ಬಾಬು,ಮಾಜಿನಗರ ಪಾಲಿಕಾ ಸದಸ್ಯರಾದ ಕೆ ವಿ ಮಲ್ಲೇಶ್,ಜಿ ರಾಘವೇಂದ್ರ ,ವಿಕ್ರಂ ಅಯ್ಯಂಗಾರ್ ,ಮಹಾನ್ ಶ್ರೇಯಸ್,ಹರೀಶ್ ನಾಯ್ಡು ಹಾಗೂಇನ್ನಿತರರು ಹೂಗುಚ್ಚ ನೀಡಿಸ್ವಾಗತಿಸಿದರು…
Read More

ಶ್ರೀ ಕೃಷ್ಣ ಜನ್ಮಾಷ್ಟಮಿ…ಮಕ್ಕಳ ಛದ್ಮ ವೇಷ ಸ್ಪರ್ಧೆ ಹಾಗೂ ಶ್ರೀ ಕೃಷ್ಣನ ಭವ್ಯ ಮೆರವಣಿಗೆ..

ಶ್ರೀ ಕೃಷ್ಣ ಜನ್ಮಾಷ್ಟಮಿ…ಮಕ್ಕಳ ಛದ್ಮ ವೇಷ ಸ್ಪರ್ಧೆ ಹಾಗೂ ಶ್ರೀ ಕೃಷ್ಣನ ಭವ್ಯ ಮೆರವಣಿಗೆ ಮೈಸೂರು,ಸೆ15,Tv10 ಕನ್ನಡ ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣ ಧಾಮದಲ್ಲಿ ಶ್ರೀ ಕೃಷ್ಣ ಮಿತ್ರ ಮಂಡಳಿ ಹಾಗೂ ಶ್ರೀ ಕೃಷ್ಣ ಟ್ರಸ್ಟ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತಮಕ್ಕಳಿಗೆಛದ್ಮಾ ವೇಷ ಸ್ಪರ್ಧೆ ಆಯೋಜಿಸಲಾಗಿತ್ತು.ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಮಕ್ಕಳು ಕೃಷ್ಣ ರಾಧೆ ವೇಷ ಭೂಷಣ ಧರಸಿ ಉತ್ಸಾಹದಿಂದ ಪಾಲ್ಗೊಂಡಿದ್ದರು,ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಯಿತುನಂತರ
Read More

ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಸಲು ಇಂದು ಕೊನೆ ದಿನ…ಠಾಣೆಗೆ ಮುಗಿಬಿದ್ದ ಜನ…ಗಡುವು ವಿಸ್ತರಣೆಗೆ ಮನವಿ…

ಮೈಸೂರು,ಸೆ12,Tv10 ಕನ್ನಡ ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಸಲು ಇಂದು ಕೊನೆ ದಿನ.ಶೇ50 % ಉಳಿತಾಯ ಮಾಡುವ ಉದ್ದೇಶದಿಂದ ಹಾಗೂ ಯೋಜನೆ ಸದುಪಯೋಗ ಪಡಿಸಿಕೊಳ್ಳಲು ವಾಹನ ಮಾಲೀಕರು ಠಾಣೆಗಳಿಗೆ ಮುಗಿಬಿದ್ದಿದ್ದಾರೆ.ನೂರಾರು ಮಂದಿ ಸರದಿಯಲ್ಲಿ ನಿಂತು ದಂಡ ಪಾವತಿಗೆ ಕಾಯುತ್ತಿದ್ದಾರೆ.ಶೇ50 ಯೋಜನೆ ಗಡುವು ವಿಸ್ತರಣೆ ಮಾಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.ರಾಷ್ಟ್ರಪತಿಗಳು ಮೈಸೂರಿಗೆ ಭೇಟಿ ನೀಡಿದ ದಿನಗಳಲ್ಲಿ ಪೊಲೀಸರು ದಂಡ ಪಾವತಿಸಿಕೊಂಡಿಲ್ಲ.ಮೂರ್ನಾಲ್ಕು ದಿನ ಭದ್ರತೆ ಹೆಸರಿನಲ್ಲಿ ದಂಡ ಪಾವತಿಸಿಕೊಂಡಿಲ್ಲ.ಇದು ಸಾರ್ವಜನಿಕರ ತಪ್ಪಲ್ಲ.ಸಿಬ್ಬಂದಿಗಳ ಕೊರತೆಯಿಂದಾಗ
Read More

ಕಂಪ್ಯೂಟರ್ ಟೀಚರ್ ಗೆ ಲಕ್ಷಾಂತರ ಹಣ ಉಂಡೆನಾಮ ಹಾಕಿದ ಸ್ಟೂಡೆಂಟ್…ನಕಲಿ ದಾಖಲೆಗಳನ್ನ ಸೃಷ್ಟಿಸಿ ಮನಿಲಾಂಡರಿಂಗ್ ಮಾಡಿದ ಆರೋಪ…ದಂಪತಿ ವಿರುದ್ದ ಮೊಕದ್ದಮೆ

ಮೈಸೂರು,ಸೆ12,Tv10 ಕನ್ನಡ ಕಂಪ್ಯೂಟರ್ ಟೀಚರ್ ಗೆ ಸ್ಟೂಡೆಂಟ್ ಲಕ್ಷಾಂತರ ಹಣ ಹಾಗೂ ಚಿನ್ನಾಭರಣ ವಂಚಿಸಿದ ಪ್ರಕರಣವೊಂದು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ವಂಚನೆಗೆ ಒಳಗಾದ ಟೀಚರ್ ಸ್ಟೂಡೆಂಟ್ ಹಾಗೂ ಆತನ ಪತ್ನಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.ಲಕ್ಷಾಂತರ ಹಣ ಕಳೆದುಕೊಂಡ ಟೀಚರ್ ಸ್ಟೂಡೆಂಟ್ ನ ನಯವಾದ ಮಾತುಗಳನ್ನ ನಂಬಿ ಚಿನ್ನಾಭರಣಗಳನ್ನೂ ಸಹ ಕಳೆದುಕೊಂಡಿದ್ದಾರೆ. ಮೈಸೂರಿನ ರೈಲ್ವೆ ಬಡಾವಣೆ ನಿವಾಸಿ ಪ್ರೀತಾ ಹಣ ಹಾಗೂ ಚಿನ್ನಾಭರಣ ಕಳೆದುಕೊಂಡವರು.ಬೋಗಾದಿಯ ವಿಜಯ್ ವಾಸುದೇವನ್ ಹಾಗೂ ಪತ್ನಿ ಜೆನೆಟ್
Read More

ಮೇಟಗಳ್ಳಿ ಠಾಣಾ ಪೊಲೀಸರ ಕಾರ್ಯಾಚರಣೆ…14 ಗೋವುಗಳ ರಕ್ಷಣೆ…ಓರ್ವನ ಬಂಧನ…

ಮೈಸೂರು,ಸೆ8,Tv10 ಕನ್ನಡ ಕಸಾಯಿಖಾನೆಗೆ ಸಾಗಿಸುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿಸಿದ್ದ 14 ವಿವಿದ ತಳಿಯ ರಾಸುಗಳನ್ನ ರಕ್ಷಿಸುವಲ್ಲಿ ಮೇಟಗಳ್ಳಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.ಈ ಸಂಬಂಧ ಫರೂಖ್ ಎಂಬಾತನ್ನ ಬಂಧಿಸಿದ್ದಾರೆ.ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಎಂಶ್ರೀ ನಗರದ ರೈಲ್ವೆ ಟ್ರಾಕ್ ಬಳಿ ಅಕ್ರಮವಾಗಿ ರಾಸುಗಳನ್ನ ಫರೂಕ್ ಎಂಬಾತ ಕಟ್ಟಿಹಾಕಿದ್ದ.ರಾತ್ರಿ ಗಸ್ತು ವೇಳೆ ಪೊಲೀಸರಿಗೆ ಮಾಹಿತಿ ದೊರೆತಿದೆ.ಕೂಡಲೇ ಕಾರ್ಯಾಚರಣೆ ನಡೆಸಿ ಗೋವುಗಳನ್ನ ರಕ್ಷಿಸಿದ್ದಾರೆ.ಫರೂಕ್ ನನ್ನು ಬಂಧಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ರಕ್ಷಿಸಲಾದ ಗೋವುಗಳನ್ನ ಪಿಂಜರಾಪೋಲ್ ವಶಕ್ಕೆ
Read More

ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚಿಸುವ ಮೆಸೇಜ್ ತಂದ ಎಡವಟ್ಟು…ವೃದ್ದನಿಗೆ 21 ಲಕ್ಷ ಪಂಗನಾಮ…

ಮೈಸೂರು,ಸೆ8,Tv10 ಕನ್ನಡ ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚಿಸುವುದಾಗಿ ಬಂದ ಮೆಸೇಜ್ ನಂಬಿದ ವೃದ್ದರೊಬ್ಬರು 21 ಲಕ್ಷ ಕಳೆದುಕೊಂಡಿದ್ದಾರೆ.ಯಾದವಗಿರಿ ವಿವೇಕಾನಂದ ರಸ್ತೆಯ ಗೌಸ್ (76) ಎಂಬುವರೇ ಹಣ ಕಳೆದುಕೊಂಡವರು.ಎರಡು ದಿನಗಳ ಹಿಂದೆ ಕ್ರಡಿಟ್ ಕಾರ್ಡ್ ನ ಲಿಮಿಟ್ ಹೆಚ್ಚಿಸುವುದಾಗಿ ಗೌಸ್ ರವರ ಮೊಬೈಲ್ ಗೆ ಎಸ್ ಎಂ ಎಸ್ ಬಂದಿದೆ.ಇದನ್ನ ನಂಬಿದ ಗೌಸ್ ರವರು ತಮ್ಮ ಇಮೇಲ್,ಕ್ರೆಡಿಟ್ ಕಾರ್ಡ್ ನಂ,ಜನ್ಮದಿನಾಂಕ ವಿವರಗಳನ್ನ ಒದಗಿಸಿದ್ದಾರೆ.ಅದೇ ಸಮಯದಲ್ಲಿ ಹೆಚ್ ಡಿ ಎಫ್ ಸಿ ಕ್ರೆಡಿಟ್
Read More

ಇಂದಿನಿಂದ ಎರಡು ದಿನ ಗಜಪಡೆಗೆ ಬೆಳಗಿನ ತಾಲೀಮಿಗೆ ಬ್ರೇಕ್…

ಮೈಸೂರು,ಸೆ6,Tv10 ಕನ್ನಡ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಬಂದಿರುವ ಗಜಪಡೆಗೆ ಇಂದಿನಿಂದ ಎರಡು ದಿನಗಳ ಕಾಲ ಬೆಳಗಿನ ತಾಲೀಮಿಗೆ ಬ್ರೇಕ್ ನೀಡಲಾಗಿದೆ.ಜಂಬೂಸವಾರಿಗಾಗಿ ಅಂಬಾರಿ ಹೊರಲು ಸಜ್ಜಾಗುತ್ತಿರುವ ಅಭಿಮನ್ಯು ಪಡೆಗೆ ಎರಡು ದಿನಗಳ ಕಾಲ ಬೆಳಗಿನ ತಾಲೀಮಿಗೆ ಬ್ರೇಕ್ ನೀಡಲಾಗಿದೆ.ಪ್ರತಿದಿನ ಸುಮಾರು 12 ಕಿಮೀ ಸಾಗುತ್ತಿರುವಆ‌ನೆಗಳಿಗೆ ಇಂದು ವಿರಾಮ ಬೆಳಗಿನ ತಾಲೀಮಿಗೆ ವಿರಾಮ ನೀಡಲಾಗಿದೆ.ಎಂದಿನಂತೆ ಸಂಜೆ ವೇಳೆಯ ತಾಲೀಮು ಮುಂದುವರಿಯಲಿದೆ ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದ್ದಾರೆ.ಇಂದು ಸಂಜೆ 5:30 ಗಂಟೆಗೆ
Read More