TV10 Kannada Exclusive

ಲೋಕಸಮರ…ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ…ಸೂಕ್ತ ಭದ್ರತೆ…

ಮೈಸೂರು,ಏ25,Tv10 ಕನ್ನಡ ನಾಳೆ ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಭಾರಿ ಭದ್ರತೆಯನ್ನು ಕೈಗೊಳ್ಳಲಾಗಿದೆ.ಮೈಸೂರಿನ ನಗರ ವ್ಯಾಪ್ತಿಯಲ್ಲಿ ಅರಸೇನಾ ಪಡೆ ಸೇರಿದಂತೆ ಒಟ್ಟು 2,402 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಮತದಾನ ಪ್ರಕ್ರಿಯೆಯಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿದೆ.ಭದ್ರತೆ ಕುರಿತು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಮಾಹಿತಿ ನೀಡಿದರು. ನಗರದಾದ್ಯಂತ ಸ್ಥಾಪಿಸಿರುವ 2202 ಮತಗಟ್ಟೆಗಳಲ್ಲಿ 41 ಅತಿ ಸೂಕ್ಷ್ಮ ಮತ್ತು 435 ಸೂಕ್ಷ್ಮ ಎಂದು ಗುರುತಿಸಲಾಗಿದೆ ಹಾಗೂ
Read More

ಗುಲಾಬಿ ನೀಡಿ ಮತದಾನ ಜಾಗೃತಿ…ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ವತಿಯಿಂದ ಕಾರ್ಯಕ್ರಮ…

ಮೈಸೂರು,ಏ25,Tv10 ಕನ್ನಡ ನಗರದ ಸಿಟಿ ಬಸ್ ಸ್ಟ್ಯಾಂಡ್ ಆವರಣದಲ್ಲಿಪ್ರಯಾಣಿಕರಿಗೆ ಗುಲಾಬಿ ಹೂ ನೀಡಿ ಹಾಗೂ ಮತದಾನದ ಕರೆಯೋಲೆ ನೀಡಿ ನಾಳೆ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಮನವಿ ಮಾಡಲಾಯಿತು.ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ಸಿ ಎಸ್ ಚಂದ್ರಶೇಖರ್ ಮಾತನಾಡಿ, ಆಮಿಷಕ್ಕೆ ಮತ ಮಾರಿಕೊಳ್ಳುವುದರಿಂದ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆ. ಹೀಗಾಗಿ ಮತದಾರರು ಜಾಗೃತರಾಗುವ ಮೂಲಕ ಅರ್ಹ ಅಭ್ಯರ್ಥಿಗೆ
Read More

ಆನ್ ಲೈನ್ ಧೋಖಾ: 19 ಕೋಟಿ ಆಮಿಷ ತೋರಿಸಿ 99.50 ಲಕ್ಷಕ್ಕೆ ಉಂಡೆನಾಮ…

ಮೈಸೂರು,ಏ25,Tv10 ಕನ್ನಡ ಸ್ಟಾಕ್ಸ್ ಟ್ರೇಡಿಂಗ್ ವ್ಯವಹಾರದಲ್ಲಿ 19 ಕೋಟಿ ಲಾಭಾಂಶ ತೋರಿಸಿ 99.50 ಲಕ್ಷ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.ಮೈಸೂರಿನ ಕನಕದಾಸ ನಗರದ ನಿಚಾಸಿ ಚಿದಾನಂದ್ ಎಂಬುವರು 99.50 ಲಕ್ಷ ಹಣ ಕಳೆದುಕೊಂಡಿದ್ದಾರೆ.ಇನ್ಸ್ಟಾಗ್ರಾಂ ನಲ್ಲಿ ಬಂದ ಜಾಹಿರಾತಿಗೆ ಆಕರ್ಷಿತರಾದ ಚಿದಾನಂದ್ ಲಿಂಕ್ ಓಪನ್ ಮಾಡಿ ಜಾಯಿನ್ ಆಗಿದ್ದಾರೆ.ಚಿದಾನಂದ್ ಅವರನ್ನ ವಾಟ್ಸಾಪ್ ಗ್ರೂಪ್ ಗೆ ಸೇರಿಸಿ ಲಿಂಕ್ ಕಳುಹಿಸಿ ಅಪ್ಲಿಕೇಷನ್ ಇನ್ಸ್ಟಾಲ್ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.ನಂತರ ವಂಚಕರ ಸಲಹೆಯಂತೆ ಪ್ರಾರಂಭದಲ್ಲಿ 60 ಸಾವಿರ
Read More

ಕುವೆಂಪುನಗರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…ಸರಗಳ್ಳನ ಬಂಧನ…3.30 ಲಕ್ಷ ಮೌಲ್ಯದ ಸರ ವಶ…

ಮೈಸೂರು,ಏ24,Tv10 ಕನ್ನಡ ವಾಕಿಂಗ್ ಮಾಡುತ್ತಿದ್ದ ವೃದ್ದೆಯ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಆರೋಪಿಯನ್ನ ಬಂಧಿಸುವಲ್ಲಿ ಕುವೆಂಪುನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಚಾಮರಾಜನಗರ ನಿವಾಸಿ ರಂಗಸ್ವಾಮಿ ಸಿಕ್ಕಿಬಿದ್ದ ಸರಗಳ್ಳ.ಬಂಧಿತನಿಂದ 3.30 ಲಕ್ಷ ಮೌಲ್ಯದ 55 ಗ್ರಾಂ ತೂಕದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಏಪ್ರಿಲ್ 23 ರ ಬೆಳಿಗ್ಗೆ ಮಧುವನ ಪಾರ್ಕ್ ಬಳಿ ಮಹದೇವಮ್ಮ ಎಂಬ ವೃದ್ದೆ ವಾಕಿಂಗ್ ಮಾಡುತ್ತಿದ್ದಾಗ ಬೈಕ್ ನಲ್ಲಿ ಬಂದ ರಂಗಸ್ವಾಮಿ ಚಿನ್ನದ ಸರ
Read More

ಮನೆಗೆ ನುಗ್ಗಿ ಮಹಿಳೆ ಅಪಹರಣ…6 ಮಂದಿ ತಂಡದಿಂದ ದುಷ್ಕೃತ್ಯ…ತಂಡದಲ್ಲಿ ಓರ್ವ ಮಹಿಳೆ ಭಾಗಿ…ಮಕ್ಕಳ ಮುಂದೆಯೇ ಕೃತ್ಯ…

ಮೈಸೂರು,ಏ23,Tv10 ಕನ್ನಡ ಮಹಿಳೆ ಸೇರಿದಂತೆ 6 ಮಂದಿ ತಂಡವೊಂದು ಮನೆಗೆ ನುಗ್ಗಿ ಗೃಹಿಣಿಯನ್ನ ಬಲವಂತವಾಗಿ ಎಳೆದೊಯ್ದ ಘಟನೆ ಮೈಸೂರಿನ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯ ಎಜೆ ಬ್ಲಾಕ್ ನಲ್ಲಿ ನಡೆದಿದೆ.ಮಗ ಹಾಗೂ ಮಗಳ ಮುಂದೆಯೇ ತಾಯಿಯನ್ನ ದುಷ್ಕರ್ಮಿಗಳ ತಂಡ ಅಪಹರಿಸಿದೆ.ಸವಿತಾ(42) ಅಪಹರಣಕ್ಕೆ ಒಳಗಾದವರು. .ಮಗ ಶಶಾಂಕ್ ಹಾಗೂ ಮಗಳು ಅರುಣ ಕಣ್ಣೆದುರೇ ಬಲವಂತವಾಗಿ ಕಾರಿನಲ್ಲಿ ಅಪಹರಿಸಿದ್ದಾರೆ.ಏ.21 ರಂದು ಘಟನೆ ನಡೆದಿದ್ದು ಎನ್.ಆರ್.ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಮಹಿಳೆಯನ್ನ ರಕ್ಷಿಸಿದ್ದಾರೆ.ಏ21 ರ ರಾತ್ರಿ
Read More

ಹುಣಸೂರು: ಹುಲಿ ದಾಳಿ…ಹಸು ಬಲಿ…

ಹುಣಸೂರು,ಏ23,Tv10 ಕನ್ನಡ ಹುಲಿದಾಳಿಗೆ ಹಸು ಬಲಿಯಾದ ಘಟನೆ ಹುಣಸೂರು ತಾಲೂಕಿನ ಕಿಕ್ಕೇರಿಕಟ್ಟೆ ಗ್ರಾಮದಲ್ಲಿ ನಡೆದಿದೆ.ಮನೋಹರ್ ಎಂಬುವರಿಗೆ ಸೇರಿದ ಹಸು ಬಲಿಯಾಗಿದೆ.ಕಾಡು ಪ್ರಾಣಿಗಳ ಹಾವಳಿಯಿಂದ ರಕ್ಷಣೆ ಇಲ್ಲವೆಂದು ಕಿಕ್ಕೇರಿಕಟ್ಟೆ ಗ್ರಾಮಸ್ಥರು ಇತ್ತೀಚೆಗಷ್ಟೆ ತಾಲೂಕು ಆಡಳಿತದ ವಿರುದ್ದ ಆಕ್ರೋಷ ವ್ಯಕ್ತಪಡಿಸಿದ್ದರು.ಇದರ ಬೆನ್ನ ಹಿಂದೆಯೇ ಹುಲಿ ದಾಳಿಗೆ ಹಸು ಬಲಿಯಾಗಿದೆ.ಶೀಘ್ರದಲ್ಲೇ ಆತಂಕ ಸೃಷ್ಟಿಸಿರುವ ವ್ಯಾಘ್ರನನ್ನ ಸೆರೆಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ…
Read More

ಮನೆ ತಾರಸಿ ಮೇಲೆ ಪತಿ ಶವ ಪತ್ತೆ…ಶಂಕೆ ವ್ಯಕ್ತಪಡಿಸಿ ದೂರು ನೀಡಿದ ಪತ್ನಿ…

ನಂಜನಗೂಡು,ಏ21,Tv10 ಕನ್ನಡ ಸಂಭಂಧಿಕರ ಮನೆಯಿಂದ ತನ್ನ ಮನೆಗೆ ಬಂದ ವ್ಯಕ್ತಿ ಶವ ತಾರಸಿ ಮೇಲೆ ಪತ್ತೆಯಾದ ಘಟನೆ ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.ನಾಗೇಂದ್ರ(36) ತನ್ನ ಮನೆ ತಾರಸಿ ಮೇಲೆ ಶವವಾಗಿ ಪತ್ತೆಯಾದ ವ್ಯಕ್ತಿ.ಪತಿಯ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಪತ್ನಿ ಮಂಗಳಾ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಂಬದ ಕೆಲಸ ಮಾಡುವ ನಾಗೇಂದ್ರ ಮನೆ ಬಿಟ್ಟರೆ ತಿಂಗಳುಗಳ ಕಾಲ ಬರುತ್ತಿರಲಿಲ್ಲ.ಎರಡು ದಿನಗಳ ಹಿಂದೆ ಸಂಭಂಧಿಕರ ಮನೆಗೆ ತೆರಳಿ
Read More

ದೇವರಾಜ ಮಾರುಕಟ್ಟೆಯಲ್ಲಿ ಯದುವೀರ್ ಪರ ಪ್ರಚಾರ…ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರ ಹಂಚಿ ಮತಯಾಚನೆ…

ಮೈಸೂರು,ಏ19,Tv10 ಕನ್ನಡ ಮೈಸೂರಿನ ವಾರ್ಡ್ ನಂ 23 ರ ದೇವರಾಜ ಮಾರುಕಟ್ಟೆ,ಡಿ.ದೇವರಾಜ ಅರಸ್ ರಸ್ತೆ,ಸಯ್ಯಾಜಿರಾವ್ ರಸ್ತೆ,ಕೆ.ಟಿ.ಸ್ಡ್ರೀಟ್,ಶ್ರೀರಾಂಪೇಟೆಯಲ್ಲಿ ಬಿಜೆಪಿ ಮುಖಂಡರು ಯದುವೀರ್ ಪರ ಮತಯಾಚಿಸಿದರು.ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರಗಳನ್ನ ಹಂಚಿ ಯದುವೀರ್ ರನ್ನ ಲೋಕಸಭೆಗೆ ಆಯ್ಕೆ ಮಾಡುವಂತೆ ಮನವಿ ಮಾಡಿದರು.ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಯದುವೀರ್ ಇಬ್ಬರೂ ಇರುವ ಭಿತ್ತಿಚಿತ್ರಗಳನ್ನ ಪ್ರದರ್ಶಿಸಿ ಪ್ರಚಾರ ನಡೆಸಿದರು. ಬಿಜೆಪಿ ಮುಖಂಡರಾದ ಮೈ. ಕಾ. ಪ್ರೇಮ್ ಕುಮಾರ್, ಆರ್ ಪರಮೇಶ , ಸುರೇಂದ್ರ ಕಿರಣ್,
Read More

ಯದುವೀರ್ ಗೆ ಪಾದತೊಳೆದು ಸ್ವಾಗತ…ಅಗ್ರಹಾರದಲ್ಲಿ ಅದ್ದೂರಿ ಪ್ರಚಾರ…

ಮೈಸೂರು,ಏ19,Tv10 ಕನ್ನಡ ಲೋಕಸಭೆ ಚುನಾವಣೆ ಕಾವು ಏರುತ್ತಿದೆ.ಅಭ್ಯರ್ಥಿಗಳು ಮತಬೇಟೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.ನೆಚ್ಚಿನ ಅಭ್ಯರ್ಥಿಗಳ ಪರ ಅಭಿಮಾನಿಗಳು ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ.ಇಂದು ಅಗ್ರಹಾರ 50 ನೇ ವಾರ್ಡ್ ನಲ್ಲಿ ಪ್ರಚಾರಕ್ಕೆ ಬಂದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ಪಾದ ತೊಳೆದು ಜನ ಸ್ವಾಗತಿಸಿದ್ದಾರೆ.ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಯದುವೀರ್ ರನ್ನ ಹಸೆ ಮಣೆಯ ಮೇಲೆ ನಿಲ್ಲಿಸಿಅವರ ಪಾದವನ್ನು ತೊಳೆದು
Read More

ಮೈಸೂರು:ನಕಲಿ ಫೆವಿಕ್ವಿಕ್ ಮಾರಾಟ…ಓರ್ವನ ಬಂಧನ…ದೇವರಾಜ ಠಾಣೆ ಪೊಲೀಸರ ಕಾರ್ಯಾಚರಣೆ…

ಮೈಸೂರು,ಏ18,Tv10 ಕನ್ನಡ ಮೈಸೂರಿನಲ್ಲಿ ನಕಲಿ ಫೆವಿಕ್ವಿಕ್ ಮಾರಾಟ ಮಾಡುತ್ತಿದ್ದ ಏಜೆನ್ಸಿ ಮೇಲೆ ದೇವರಾಜ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.ದಾಳಿ ವೇಳೆ ನಕಲಿ ಫೆವಿಕ್ವಿಕ್ ಗಳು ದೊರೆತಿದ್ದು ಏಜೆನ್ಸಿಯ ಮಾಲೀಕನನ್ನ ಬಂಧಿಸಿದ್ದಾರೆ.ಸಂತೆಪೇಟೆಯಲ್ಲಿರುವ ಮಹೇಶ್ ಎಜೆನ್ಸಿ ಮಾರ್ಕೆಟಿಂಗ್ ಅಂಗಡಿಯಲ್ಲಿ pidilite ಕಂಪನಿ ಯ ನಕಲಿ Fevikwik ಗಳನ್ನ ಮಾರಾಟ ಮಾಡುತ್ತಿರುವ ಬಗ್ಗೆ ಕಂಪನಿಯ ಅಧಿಕೃತ ಪ್ರತಿನಿಧಿ ಯಾದ ಜಿ ಪೂಬಾಲನ್ ಹಾಗೂ ಶೇಕ್ ಖಾಸಿಂ ರವರಿಗೆ ಮಾಹಿತಿ ದೊರೆತಿದ್ದು ಎರಡು ದಿನಗಳ ಹಿಂದೆ
Read More