TV10 Kannada Exclusive

ಮುಂದಿನ ಕ್ಯಾಬಿನೆಟ್ ನಲ್ಲಿ ಬರ ಘೋಷಣೆ ಮಾಡುತ್ತೇವೆ…ಸಿಎಂ ಸಿದ್ದರಾಮಯ್ಯ…

ಮೈಸೂರು,ಸೆ11,Tv10 ಕನ್ನಡ ರಾಜ್ಯದಲ್ಲಿ ಬರ ಘೋಷಣೆ ವಿಚಾರಕ್ಕೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.ಮುಂದಿನ ಕ್ಯಾಬಿನೆಟ್‌ನಲ್ಲಿ ಬರ ಬಗ್ಗೆ ಘೋಷಣೆ ಮಾಡುತ್ತೇವೆ.ಸದ್ಯಕ್ಕೆ 61 ತಾಲ್ಲೂಕುಗಳು ಪಟ್ಟಿಯಾಗಿದೆ.ಇನ್ನೂ 136 ತಾಲ್ಲೂಕುಗಳ ಬರ ಅಧ್ಯಯನ ನಡೆಯುತ್ತಿದೆ.ಅದರ ವರದಿಯೂ ಸೇರಿಸಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ…
Read More

ಬಳ್ಳಿಗಳ ಕಾಟದಿಂದ ಮುಕ್ತವಾದ ಒಂಟಿಕೊಪ್ಪಲ್ ಬಡಾವಣೆ ಸ್ವಾಗತ ಕಮಾನು ಗೇಟ್…Tv10 ಕನ್ನಡ ಇಂಪ್ಯಾಕ್ಟ್…

ಮೈಸೂರು,ಸೆ10,Tv10 ಕನ್ನಡ ಕೊನೆಗೂ ವಲಯ ಕಚೇರಿ 4 ರ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.ಬಳ್ಳಿಗಳಿಂದ ಆವರಸಿಕೊಂಡಿದ್ದ ಒಂಟಿಕೊಪ್ಪಲ್ ಬಡಾವಣೆ ಸ್ವಾಗತ ಕಮಾನು ಗೇಟ್ ಸ್ವಚ್ಛಗೊಳಿಸಿದ್ದಾರೆ.ಬಳ್ಳಿಗಳ ಕಾಟದಿಂದ ಕಮಾನು ಗೇಟ್ ಮುಕ್ತವಾಗಿದೆ.ಇದು Tv10 ಕನ್ನಡ ವಾಹಿನಿಯ ವರದಿಯ ಇಂಪ್ಯಾಕ್ಟ್ ಆಗಿದೆ. ನಿನ್ನೆಯಷ್ಟೇ ಈ ಕುರಿತಂತೆ Tv10 ಕನ್ನಡ ವಾಹಿನಿ ವರದಿ ಮಾಡಿ ಎಚ್ಚರಿಸಿತ್ತು.ಕೆ.ಆರ್.ಎಸ್.ಮುಖ್ಯರಸ್ತೆಯ ಚಲುವಾಂಬ ಪಾರ್ಕ್ ಬಳಿ ಲಕ್ಷಾಂತರ ರೂಪಾಯಿ ವೆಚ್ಚಮಾಡಿ ನಿರ್ಮಿಸಲಾಗಿದ್ದ ಒಂಟಿಕೊಪ್ಪಲ್ ಬಡಾವಣೆ ಕಮಾನು ಗೇಟ್ ನ್ನ ಬಳ್ಳಿಗಳು ಆವರಿಸಿಕೊಂಡಿತ್ತು.ಸೂಕ್ತ ನಿರ್ವಹಣೆ
Read More

ಒಂಟಿಕೊಪ್ಪಲ್ ಸ್ವಾಗತ ಕಮಾನುಗೇಟ್ ಬಳ್ಳಿ ಕಾಟ…ಕಣ್ಮುಚ್ಚಿ ಕುಳಿತ ವಲಯ 4 ರ ಅಧಿಕಾರಿಗಳು…

ಮೈಸೂರು,ಸೆ9,Tv10 ಕನ್ನಡ ಮೈಸೂರಿನ ಪ್ರತಿಷ್ಠಿತ ಬಡಾವಣೆ ಒಂಟಿಕೊಪ್ಪಲ್ ಗೆ ಸ್ವಾಗತ ಕೋರುವ ಕಮಾನು ಗೇಟ್ ಗೆ ಬಳ್ಳಿ ಕಾಟ ಶುರುವಾಗಿದೆ.ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಲಕ್ಷಾಂತರ ಹಣ ಖರ್ಚುಮಾಡಿ ನಿರ್ಮಿಸಲಾದ ಕಮಾನುಗೇಟು ತುಕ್ಕು ಹಿಡಿಯತ್ತಿದೆ.ಜೊತೆಗೆ ಗೇಟ್ ನ ಅರ್ಧ ಭಾಗವನ್ನ ಗಿಡಬಳ್ಳಿಗಳು ಆವರಿಸಿಕೊಂಡಿದೆ.ವಲಯ 4 ರ ಕಚೇರಿಯ ಕೂಗಳತೆ ದೂರದಲ್ಲಿದ್ದರೂ ಅಧಿಕಾರಿಗಳ ಕಣ್ಣಿಗೆ ಬೀಳದಿರುವುದು ಶೋಚನೀಯ.ಸೂಕ್ತ ನಿರ್ವಹಣೆ ಇಲ್ಲದ ಕಾರಣ ಅಕ್ಷರಗಳು ಬಣ್ಣ ಕಳೆದುಕೊಂಡಿ ನಿರ್ಜೀವ ಸ್ಥಿತಿ ತಲುಪಿದೆ.ಕೆ.ಆರ್.ಎಸ್ ಗೆ
Read More

ಮಾಹಿತಿ ಹಕ್ಕು ಅಧಿನಿಯಮ ಹಾಗೂ ಅನುಷ್ಠಾನ ಕುರಿತಂತೆ ಸಂವಾದ… ವಿಕಾಸಸೌಧದಲ್ಲಿ ಕಾರ್ಯಕ್ರಮ…

ಮೈಸೂರು,ಸೆ9,Tv10 ಕನ್ನಡ ಸೆಪ್ಟೆಂಬರ್ 26 ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ವಿಕಾಸಸೌಧ ನಾಲ್ಕನೇ ಮಹಡಿ ಕೊಠಡಿ ಸಂಖ್ಯೆ 419 ರಲ್ಲಿ ಮಾಹಿತಿಹಕ್ಕು ಅಧಿನಿಯಮ ಅನುಷ್ಠಾನ ಕುರಿತಂತೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಚರ್ಚೆ ನಡೆಯಲಿದೆ.ಚರ್ಚೆಯಲ್ಲಿ ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ರವೀಂದ್ರ ಧಾಕಪ್ಪ ಭಾಗವಹಿಸಲಿದ್ದಾರೆ.ಸಂವಾದ ಕಾರ್ಯಕ್ರದಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯ,ಕರ್ನಾಟಕ ವಿಧಾನಸಭೆ,ಪರಿಷತ್ತು ಸಚಿವಾಲಯ,ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ
Read More

ಶಾಲೆಗೆ ಮೀಸಲಾದ ಜಾಗದಲ್ಲಿ ಅಕ್ರಮ ಕಟ್ಟಡ…ಒತ್ತುವರಿ ತೆರುವು…

ಶಾಲೆಗೆ ಮೀಸಲಾದ ಜಾಗದಲ್ಲಿ ಅಕ್ರಮ ಕಟ್ಟಡ…ಒತ್ತುವರಿ ತೆರುವು… ಮೈಸೂರು,ಸೆ8,Tv10 ಕನ್ನಡ ಪ್ರೌಢಶಾಲೆ ಹಾಗೂ ಅಂಗನವಾಡಿ ಕೇಂದ್ರಕ್ಕಾಗಿ ಮಂಜೂರಾದ ಜಮೀನಿನಲ್ಲಿ ತಲೆ ಎತ್ತಿದ್ದ ಅಕ್ರಮ ಕಟ್ಟಡಗಳನ್ನ ಇಂದು ತೆರುವುಗೊಳಿಸಲಾಗಿದೆ.ಮೈಸೂರು ತಾಲೂಕು ಜಯಪುರ ಹೋಬಳಿ ಉದ್ಭೂರು ಗ್ರಾಮ ಸರ್ವೆ ನಂ.467 ರ 4 ಎಕ್ರೆ 32 ಗುಂಟೆ ಜಮೀನು ಪ್ರೌಢಶಾಲೆ ಮತ್ತು ಅಂಗನವಾಡಿ ಕೇಂದ್ರಕ್ಕಾಗಿ ಮಂಜೂರು ಮಾಡಲಾಗಿದೆ.ಸದರಿ ಜಮೀನಿನ 30 ಗುಂಟೆ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳು ನಿರ್ಮಾಣವಾಗಿತ್ತು.ಸದರಿ ಆಸ್ತಿಯ ದಾಖಲೆಗಳನ್ನ ಪರಿಶೀಲನೆ ನಡೆಸಿದ
Read More

ಧರ್ಮದ ಉಳಿವಿಗೆ ಭಗವಂತನ ಅವತಾರ ನಿಶ್ಚಿತ…ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಮೈಸೂರು,ಸೆ8,Tv10 ಕನ್ನಡ ದುಷ್ಟರ ಶಿಕ್ಷೆ, ಶಿಷ್ಟರ ರಕ್ಷಣೆಗೆ ಯುಗಯುಗಗಳಲ್ಲೂ ಅವತಾರ ಎತ್ತಿ ಬರುತ್ತೇನೆ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವ ಮಾತು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ. ಧರ್ಮದ ಉಳಿವಿಗೆ ಭಗವಂತನ ಅವತಾರ ಬೇರೆ ಬೇರೆ ರೂಪದಲ್ಲಿ ಆಗುತ್ತಲೇ ಇರುತ್ತದೆ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.ಕೆ ಆರ್ ಮೊಹಲ್ಲಾದ ನಾಲಾ ಬೀದಿಯಲ್ಲಿರುವ ವೈಷ್ಣವಿ ಸೇವಾ ಪರಿಷತ್ ಹಮ್ಮಿಕೊಂಡಿದ್ದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ
Read More

ವಿಧ್ಯಾರ್ಥಿ ನಿಲಯ ಸ್ವಂತ ಕಟ್ಟಡಕ್ಕೆ ಮಂಜೂರು ಮಾಡಿದ ಜಾಗ ಹೇಗಿದೆ ಗೊತ್ತಾ !?…ನೋಡಿದ್ರೆ ಶಾಕ್ ಆಗ್ತೀರಾ…

ವಿಧ್ಯಾರ್ಥಿ ನಿಲಯ ಸ್ವಂತ ಕಟ್ಟಡಕ್ಕೆ ಮಂಜೂರು ಮಾಡಿದ ಜಾಗ ಹೇಗಿದೆ ಗೊತ್ತಾ !?…ನೋಡಿದ್ರೆ ಶಾಕ್ ಆಗ್ತೀರಾ… ನಂಜನಗೂಡು,ಸೆ8,Tv10 ಕನ್ನಡ ವಿಧ್ಯಾರ್ಥಿ ನಿಲಯ ಸ್ವಂತ ಕಟ್ಟಡಕ್ಕಾಗಿ ಸುಮಾರು ವರ್ಷಗಳ ಮನವಿಗೆ ಸ್ಪಂದಿಸಿದ ಸರ್ಕಾರ ನೀಡಿದ ಜಾಗ ಎಂಥದ್ದು ಗೊತ್ತಾ..? ಶಾಕ್ ಆಗೋದು ಗ್ಯಾರೆಂಟಿ.ಜಾಗ ನೋಡಿದ್ರೆ ಸ್ವಂತ ಕಟ್ಟಡ ನಿರ್ಮಾಣ ಕನಸೇ..? ಬಾಡಿಗೆ ಕಟ್ಟಡದಿಂದ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಗಗನ ಕುಸುಮವೇ… ಹೌದು…ಇದು ನಂಜನಗೂಡಿನಲ್ಲಿರುವಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ವಿಧ್ಯಾರ್ಥಿನಿಯರ ನಿಲಯದ ಸ್ಥಿತಿ.
Read More

ಉಪನ್ಯಾಸಕನ ಪರಿಸರ ಪ್ರೇಮ…ಸಸ್ಯಕಾಶಿಯಾದ ಕಾಲೇಜು ಆವರಣ…

ಉಪನ್ಯಾಸಕನ ಪರಿಸರ ಪ್ರೇಮ…ಸಸ್ಯಕಾಶಿಯಾದ ಕಾಲೇಜು ಆವರಣ… ನಂಜನಗೂಡು,ಸೆ7,Tv10 ಕನ್ನಡ ವಿಧ್ಯಾರ್ಥಿಗಳ ಪ್ರಗತಿಗೆ ಕಾಲೇಜಿನ ಉತ್ತಮ ವಾತಾವರಣ ಸಹಕಾರಿ ಎಂಬ ಮಾತಿಗೆ ಸಾಕ್ಷಿಯಾಗಿದೆ ನಂಜನಗೂಡು ತಾಲೂಕಿನ ದೊಡ್ಡಕವಲಂದೆಯ ಸರ್ಕಾರಿ ಪದವಿ ಪೂರ್ವ ಕಾಲೇಜು.ಬರಡು ಬಯಲಾಗಿದ್ದ ಕಾಲೇಜಿನ ಆವರಣವೀಗ ಸಸ್ಯಕಾಶಿಯಾಗಿದೆ.ಕಾಲೇಜು ಉಪನ್ಯಾಸ ಹಾಗೂ ಎನ್.ಎಸ್.ಎಸ್.ಅಧಿಕಾರಿಯೂ ಆಗಿರುವ ವೆಂಕಟರಮಣ ಮತ್ತು ವಿಧ್ಯಾರ್ಥಿಗಳು,ಪ್ರಾಶುಪಾಲರು,ಸಹದ್ಯೋಗಿಗಳ ಸಹಕಾರದಿಂದ ಬರಡು ನೆಲವೀಗ ಕೆಲವೇ ವರ್ಷಗಳಲ್ಲಿ ಹಸಿರಿನಿಂದ ಕಂಗೊಳಿಸುತ್ತಿದೆ.ಎಲ್ಲರ ಪರಿಶ್ರಮದಿಂದಾಗಿ ಕಾಲೇಜಿನ ಆವರಣ ಮಲೆನಾಡಿನ ವಾತಾವರಣವನ್ನ ಸೃಷ್ಟಿಸಿದೆ. ಕಾಲೇಜಿನ ವಿಧ್ಯಾರ್ಥಿಗಳ ಪಠ್ಯೇತರ
Read More

ದಸರಾ2023:ಅರಮನೆ ಪ್ರವೇಶಿಸಿದ ಗಜಪಡೆ…ಜಿಲ್ಲಾಡಳಿತದಿಂದ ಅದ್ದೂರಿ ಸ್ವಾಗತ…

ಮೈಸೂರು,ಸೆ5,Tv10 ಕನ್ನಡ ಜಗತ್ಪ್ರಸಿದ್ಧ ಮೈಸೂರು ಅರಮನೆಯಲ್ಲಿ ದಸರಾ ವೈಭವ ಮನೆ ಮಾಡುತ್ತಿದೆ.ದಸರಾಗೆ ಕಳೆ ಕಟ್ಟುವ ಗಜಪಡೆ ಇಂದುಅರಮನೆಗೆ ಆಗಮಿಸಿದೆ. ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಂ ಅರಮನೆಗೆ ಎಂಟ್ರಿ ಕೊಟ್ಟಿದೆ. ಜಯಮಾರ್ತಾಂಡ ದ್ವಾರದ ಬಳಿ ಗಜಪಡೆಗೆ ಅದ್ಧೂರಿ ಸ್ವಾಗತ ಕೋರಲಾಗಿದೆ.ಜನಪದ ಕಲಾತಂಡಗಳೊಂದಿಗೆ ಆನೆಗಳು ಅರಮನೆಗೆ ಆಗಮಿಸಿವೆ.ನಗರದ ಅಶೋಕಪುರಂನ ಅರಣ್ಯ ಭವನದಲ್ಲಿ ಸಾಂಪ್ರದಾಯಿಕ ಪೂಜೆ ನಂತರ ಕಾಲ್ನಡಿಗೆಯಲ್ಲಿ ಮೆರವಣಿಗೆ ಮೂಲಕ ಬರುತ್ತಿದ್ದ ಆನೆಗಳನ್ನ ಸಾರ್ವಜನಿಕರು ಕಣ್ತುಂಬಿಕೊಂಡಿದ್ದಾರೆ.ಕಳೆದ ಸೆಪ್ಟೆಂಬರ್ 1 ರಂದು ಹುಣಸೂರಿನ ವೀರನಹೊಸಹಳ್ಳಿಯಿಂದ
Read More

ಶಿಕ್ಷಕರ ದಿನಾಚರಣೆ..ಶಾಸಕ ಜಿಟಿಡಿ ರಿಂದ ಕಾರ್ಯಕ್ರಮ ಉದ್ಘಾಟನೆ…ನಿವೃತ್ತ ಶಿಕ್ಷಕರಿಗೆ ಅಭಿನಂದನೆ…

ಶಿಕ್ಷಕರ ದಿನಾಚರಣೆ..ಶಾಸಕ ಜಿಟಿಡಿ ರಿಂದ ಕಾರ್ಯಕ್ರಮ ಉದ್ಘಾಟನೆ…ನಿವೃತ್ತ ಶಿಕ್ಷಕರಿಗೆ ಅಭಿನಂದನೆ… ಮೈಸೂರು,ಸೆ5,Tv10 ಕನ್ನಡ ಮೈಸೂರಿನ ಹೂಟಗಳ್ಳಿಯಲ್ಲಿರುವ ಸರಸ್ವತಿ ಕನ್ವೆನ್ಷನ್ ಹಾಲ್ ನಲ್ಲಿ ತಾಲೂಕು ಆಡಳಿತ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಶಿಕ್ಷಕರ ದಿನಾಚರಣೆಯನ್ನ ಅರ್ಥಪೂರ್ಣವಾಗಿ ಆಚರಿಸಲಾಯಿತು.ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ರವರು ಕಾರ್ಯಕ್ರಮವನ್ನ ಉದ್ಘಾಟಿಸಿದರು.ಸಂಸದ ಪ್ರತಾಪ್ ಸಿಂಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಅತಿಥಿಗಳನ್ನ ಜಾನಪದ ಕಲಾತಂಡಗಳೊಂದಿಗೆ ಗೌರವಯುತವಾಗಿ ವೇದಿಕೆಗೆ ಕರತರಲಾಯಿತು.ಎಸ್ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಯನ್ನ ಸನ್ಮಾನಿಸಲಾಯಿತು.ನಿವೃತ್ತಗೊಂಡ 50 ಶಿಕ್ಷಕರಿಗೆ ಅಭಿನಂದಿಸಿ
Read More