ಶವಾಗಾರದಲ್ಲಿ ಕೈಕೊಟ್ಟ ಶೀತಲ ಯಂತ್ರ…ಕೊಳೆತು ದುರ್ವಾಸನೆ ಬೀರುತ್ತಿರುವ ಮೃತದೇಹಗಳು…ಕ್ಯಾರೆ ಎನ್ನದ ಅಧಿಕಾರಿಗಳು…
ಮೈಸೂರು,ಮೇ8,Tv10 ಕನ್ನಡ ಮೈಸೂರಿನ ಶವಾಗಾರದಲ್ಲಿ ಶೀತಲ ಯಂತ್ರಗಳು ಕೆಟ್ಟು ನಿಂತಿವೆ.ಶವಪರೀಕ್ಷೆಗಾಗಿ ಬರುವ ಮೃತದೇಹಗಳು ಕೊಳೆತು ದುರ್ವಾಸನೆ ಬೀರುತ್ತಿವೆ.ಶೀತಲಯಂತ್ರಗಳನ್ನ ದುರಸ್ಥುಗೊಳಿಸುವಂತೆ ಶವಾಗಾರದ ಸಿಬ್ಬಂದಿಗಳು ಮುಖ್ಯಸ್ಥರಿಗೆ ಪತ್ರ ಬರೆದಿದ್ದರೂ ಅಧಿಕಾರಿಗಳು ಕ್ಯಾರೆ ಎಂದಿಲ್ಲವೆಂಬ ಆರೋಪ ಕೇಳಿಬಂದಿದೆ.ಶವಪರೀಕ್ಷೆ ನಂತರ ಮೃತದೇಹಗಳನ್ನ ಕೊಂಡೊಯ್ಯಲು ಬರುವ ಸಂಭಂದಿಕರು ಶವಾಗಾರದ ದುಃಸ್ಥಿತಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.ಶವಾಗಾರದ ಸಿಬ್ಬಂದಿಗಳು ದುರ್ವಾಸನೆಯನ್ನ ಸಹಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.ರೋಗರುಜಿನಗಳು ಹರಡುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಮೈಸೂರು ಮೆಡಿಕಲ್ ಕಾಲೇಜು ಆವರಣದಲ್ಲಿ ಶವಾಗಾರವಿದೆ.ಮೈಸೂರು,ಮಂಡ್ಯ,ಚಾಮರಾಜನಗರ,ಮಡಿಕೇರಿ ಸೇರಿದಂತೆ ಹಲವು
Read More