ಬೋನಿಗೆ ಬಿದ್ದ ಚಿರತೆ…ಗ್ರಾಮಸ್ಥರ ಆತಂಕ ದೂರ…
ಟಿ.ನರಸೀಪುರ,ಜ13,Tv10 ಕನ್ನಡ ಟಿ.ನರಸೀಪುರ ಸೋಸಲಿ ಹೋಬಳಿಯ ಕೊಣಗಹಳ್ಳಿ ಗ್ರಾಮದಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಎಂ ನಾಗೇಂದ್ರ ಅವರ ಜಮೀನಿನಲ್ಲಿ ಇರಿಸಲಾಗಿದ್ದ ಬೋನಿಗೆ ಸೆರೆಸಿಕ್ಕಿದೆ.ಹಲವಾರು ದಿನಗಳಿಂದ ಗ್ರಾಮಸ್ಥರ ಕಣ್ಣಿಗೆ ಬಿದ್ದು ಆತಂಕ ಸೃಷ್ಟಿಸಿತ್ತು.ಅಲ್ಲದೆ ಸಾಕು ಪ್ರಾಣಿಗಳನ್ನ ಬಲಿ ಪಡೆದಿತ್ತು.ಬೋನು ಇರಿಸುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನ ಒತ್ತಾಯಿಸಿದ್ದರು.ಸ್ಥಳೀಯರ ಮನವಿ ಮೇರೆಗೆ ಇರಿಸಲಾದ ಬೋನಿಗೆ ಚಿರತೆ ಸೆರೆಸಿಕ್ಕಿದೆ.ಗ್ರಾಮಸ್ಥರು ನಿರಾಳರಾಗಿದ್ದಾರೆ.ಸೆರೆಸಿಕ್ಕ ಚಿರತೆಯನ್ನ ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ…
Read More