TV10 Kannada Exclusive

ರಾಜಕಾರಣವನ್ನು ಉದ್ಯೋಗ ಮಾಡಿಕೊಳ್ಳುವ ಪರಿಪಾಠ ಅಪಾಯಕಾರಿ…ಸಾ.ರಾ.ಮಹೇಶ್…

ಮೈಸೂರು,ಆ6,Tv10 ಕನ್ನಡನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ನ ವತಿಯಿಂದ ನಗರದ ರುಚಿ ದಿ ಪ್ರಿನ್ಸ್ ಹೋಟೆಲ್ ನಲ್ಲಿ ಉದ್ಯಮಿ ಹಾಗೂ ವೃತ್ತಿಪರರ ಸಮ್ಮಿಲನ ಕಾರ್ಯಕ್ರಮಆಯೋಜಿಸಲಾಗಿತ್ತು.ಮಾಜಿ ಸಚಿವ ಸಾ.ರಾ.ಮಹೇಶ್ ಕಾರ್ಯಕ್ರಮವನ್ನ ಉದ್ಘಾಟಿಸಿದರು.ನಂತರ ಮಾತನಾಡಿ ಉದ್ಯೋಗ ಮತ್ತು ರಾಜಕಾರಣವನ್ನು ಪ್ರತ್ಯೇಕವಾಗಿ ನಿರ್ವಹಣೆ ಮಾಡಬೇಕಾದ ಅವಶ್ಯಕತೆ ಇದೆ. ರಾಜಕಾರಣಿಗಳು ಜೀವನೋಪಾಯಕ್ಕೆ ಒಂದು ಉದ್ಯೋಗವನ್ನು ಆಶ್ರಯಿಸಿ ಇದರಿಂದ ಪ್ರತ್ಯೇಕವಾಗಿ ರಾಜಕಾರಣ ಮಾಡುವುದನ್ನು ಒಂದು ಸೇವೆಯನ್ನಾಗಿ ರೂಢಿ ಮಾಡಿಕೊಳ್ಳಬೇಕು. ಆದರೆ ಬಹಳಷ್ಟು ಜನರು ರಾಜಕಾರಣವನ್ನೇ ತಮ್ಮ ಉದ್ಯೋಗ
Read More

ಸಿಎಂ ರಾಜಿನಾಮೆಗೆ ಬಿಜೆಪಿ ಜೆಡಿಎಸ್ ಪಾದಯಾತ್ರೆ…ಮೈಸೂರಲ್ಲಿ ಸಿದ್ದರಾಮಯ್ಯ ಇನ್ ರಿಲ್ಯಾಕ್ಸ್ ಮೂಡ್…

ಮೈಸೂರು,ಆ6,Tv10 ಕನ್ನಡಒಂದೆಡೆ ಸಿಎಂ ರಾಜೀನಾಮೆಗಾಗಿ ಬಿಜೆಪಿ ಜೆಡಿಎಸ್ ಪಾದಯಾತ್ರೆ ನಡೆಸುತ್ತಿದೆ.ಮತ್ತೊಂದೆಡೆಸಿದ್ದರಾಮಯ್ಯ ಇದ್ಯಾವುದನ್ನೂ ತಲೆ ಕೆಡಿಸಿಕೊಳ್ಳದೆ ಮೈಸೂರಿನಲ್ಲಿ ರಿಲಾಕ್ಸ್ ಮೂಡ್‌ನಲ್ಲಿದ್ದಾರೆ.ಮುಡಾ ಹಗರಣ ಆರೋಪ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗಾಗಿ ಬಿಜೆಪಿ ಜೆಡಿಎಸ್ ಜಂಟಿಯಾಗಿ ಪಾದಯಾತ್ರೆ ನಡೆಸುತ್ತಿದೆ.ಸಿದ್ದರಾಮಯ್ಯ ಡೋಂಟ್ ಕೇರ್ ಎನ್ನುತ್ತಾಮಾಜಿ ಶಾಸಕ ಹೆಚ್ ಪಿ ಮಂಜುನಾಥ್ ಕಾರಿನಲ್ಲಿ ಸಿಟಿ ರೌಂಡ್ಸ್ ನಲ್ಲಿದ್ದಾರೆ.ಯಾವುದೇ ಅಂಗ ರಕ್ಷಕರಿಲ್ಲದೆ ಮೈಸೂರು ನಗರ ಸಂಚಾರ ಮಾಡಿದ್ದಾರೆ.ಸಿಎಂ ಸಿದ್ದರಾಮಯ್ಯಗೆ ಮಾಜಿ ಶಾಸಕ ಹೆಚ್ ಪಿ ಮಂಜುನಾಥ್ ಚಾಲಕರಾಗಿದ್ದಾರೆ.ಕಾರಿನಲ್ಲೇ ಕುಳಿತು
Read More

ಸ್ವಾಮಿ ಶ್ರೀಕಂಠೇಶ್ವರ…ನಿನ್ನ ನೋಡಲು ಬರುವ ಭಕ್ತರಿಗೆ ಕೆಟ್ಟ ವ್ಯವಸ್ಥೆಯಿಂದ ಪರಿಹಾರ ಕೊಡು…ನಂಜುಂಡೇಶ್ವರನ ಹುಂಡಿಗೆ ಪರಮ ಭಕ್ತರಿಂದ ಪತ್ರಗಳು…

ನಂಜನಗೂಡು,ಆ6,Tv10 ಕನ್ನಡ ದಕ್ಷಿಣಕಾಶಿ ನಂಜನಗೂಡಿನ ನಂಜುಂಡೇಶ್ವರನ ಹುಂಡಿ ಎಣಿಕೆ ಕಾರ್ಯ ಇಂದು ನಡೆದಿದೆ.ಹುಂಡಿಯಲ್ಲಿ ಕೋಟಿ ಕೋಟಿ ಹಣ ಸಂಗ್ರಹಿಸುವ ನಂಜುಂಡೇಶ್ವರನಿಗೆ ಈ ಬಾರಿ ಪರಮ ಭಕ್ತರಿಂದ ಪತ್ರಗಳೂ ಸಹ ಸಲ್ಲಿಕೆಯಾಗಿದೆ.ನಿನ್ನ ನೋಡಲು ಬರುವ ಲಕ್ಷಾಂತರ ಭಕ್ತರಿಗೆ ಕಟ್ಟ ವ್ಯವಸ್ಥೆಯಿಂದ ಪರಿಹಾರ ನೀಡುವಂತೆ ಪತ್ರ ಬರೆದಿದ್ದಾರೆ.ಎಣಿಕೆ ವೇಳೆ ಅಧಿಕಾರಿಗಳಿಗೆ ಪತ್ರ ದೊರೆತಿದೆ. ಒಂದು ಪತ್ರದಲ್ಲಿ ನನ್ನ ತಾತ,ನನ್ನ ತಂದೆ ನಾನು ಹಾಗೂ ನನ್ನ ಮಗ ಎಲ್ಲರೂ ನಿನ್ನ ಭಕ್ತರೇ.ಬಹಳ ದೂರದಿಂದ ನಿನ್ನ
Read More

ಮನೆ ಬಿಟ್ಟುಹೋದ ಅಪ್ಪನಿಗಾಗಿ ಕಾಯುತ್ತಿರುವ ಮಗಳ ಮೃತದೇಹ…ಎಲ್ಲೇ ಇದ್ದರೂ ಬನ್ನಿ…ಕುಟುಂಬಸ್ಥರ ಕಣ್ಣೀರು…ಮೈಸೂರಿನಲ್ಲೊಂದ ಮನಕಲುಕುವ ಘಟನೆ…

ಮೈಸೂರು,ಆ5,Tv10 ಕನ್ನಡಮನೆ ಬಿಟ್ಟುಹೋದ ತಂದೆಗಾಗಿ ಮಗಳ ಮೃತದೇಹ ಕಾಯುತ್ತಿರುವ ಮನಕಲುಕುವ ಘಟನೆ ಮೈಸೂರಿನ ಕನಕಗಿರಿಯಲ್ಲಿ ನಡೆದಿದೆ.ಅಪಘಾತದಲ್ಲಿ ಮೃತಪಟ್ಟಯುವತಿಯ ಮೃತದೇಹವನ್ನ ಇಟ್ಟುಕೊಂಡ ಕುಟುಂಬ ಹೆತ್ತ ತಂದೆಯ ಬರುವಿಕೆಗಾಗಿ ಕಾದು ಕುಳಿತಿದೆ.ತಂದೆ ಬರುವಿಕೆಗಾಗಿ ಅಂತ್ಯಕ್ರಿಯೆಯನ್ನ ಒಂದು ದಿನ ಮುಂದೂಡಿದ್ದು ಇಡೀ ಕುಟುಂಬ ಮನೆ ಬಿಟ್ಟುಹೋದ ವ್ಯಕ್ತಿಗಾಗಿ ಕಾತುರದಿಂದ ಎದುರು ನೋಡುತ್ತಿದೆ.ನಾಗರಾಜ್.ಆ.ಕೆಂಚಪ್ಪ ಹಾಗೂ ಇಂದಿರಮ್ಮ ದಂಪತಿಯ ಪುತ್ರಿ ಕವನಾ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.ಹೂಟಗಳ್ಳಿಯಲ್ಲಿ ಸ್ನೇಹಿತರ ಜೊತೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಡಿವೈಡರ್ ಗೆ ಢಿಕ್ಕಿ
Read More

ಹೆತ್ತ ತಾಯಿಗೆ ಮಗಳ ಅಶ್ಲೀಲ ಫೋಟೋ ರವಾನಿಸಿದ ಪ್ರಿಯಕರ…ಮದುವೆ ನಿರಾಕರಿಸಿದ್ದಕ್ಕೆ ಸೇಡು…!

ಯುವಕನ ದುರ್ವರ್ತನೆಗೆ ಬೇಸತ್ತು ಮದುವೆ ನಿರಾಕರಿಸಿದ ಹಿನ್ನಲೆ ಪ್ರಿಯಕರ ತನ್ನ ಪ್ರಿಯಕರಳ ಅಶ್ಲೀಲ ಫೋಟೋವನ್ನ ಹೆತ್ತ ತಾಯಿಗೆ ರವಾನಿಸಿ ಸೇಡು ತೀರಿಸಿಕೊಂಡ ಘಟನೆ ಎನ್.ಆರ್.ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ನಾಯ್ಡುನಗರದಲ್ಲಿ ನಡೆದಿದೆ.ಮಗಳ ಅಶ್ಲೀಲ ಫೋಟೋ ನೋಡಿ ದಂಗಾದ ಹೆತ್ತ ತಾಯಿ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಅಳಿಯನಾಗಬೇಕಿದ್ದ ಪ್ರಿಯಕರನ ಮೇಲೆ ಪ್ರಕರಣ ದಾಖಲಿಸಿದ್ದಾರೆ.ಕಲ್ಯಾಣಗಿರಿ ನಿವಾಸಿ ಮೊಹಮದ್ ವಾಸೀಂ ಮೇಲೆ ಎಫ.ಐ.ಆರ್.ದಾಖಲಾಗಿದೆ. ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ನೊಂದ ಯುವತಿಗೆ ಮೊಹಮದ್ ವಾಸೀಂ ಪರಿಚಯವಾಗಿದ್ದಾನೆ.ಇಬ್ಬರೂ
Read More

ಮುಡಾ ದೈನಂದಿನ ಕೆಲಸಗಳಿಗೆ ಗ್ರೀನ್ ಸಿಗ್ನಲ್…ನಿಯಮಾನುಸಾರ ಕಾರ್ಯನಿರ್ವಹಿಸುವಂತೆ ಆದೇಶ…

ಮೈಸೂರು,ಆ4,Tv10 ಕನ್ನಡ ಸಾರ್ವಜನಿಕರ ದೈನಂದಿನ ಕೆಲಸ ಕಾರ್ಯಗಳನ್ನ ನಿಯಮಾನುಸಾರ ಕೈಗೊಳ್ಳುವಂತೆ ಮುಡಾ ಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.ಈ ಹಿಂದೆ ವಿಧಿಸಲಾದ ಕೆಲವು ಷರತ್ತುಗಳನ್ನ ಹೊರತು ಪಡಿಸಿ ಕಂದಾಯ ಪಾವತಿ,ಕಟ್ಟಡ ವಿನ್ಯಾಸ ನಕ್ಷೆ ಅನುಮೋದನೆ,ನ್ಯಾಯಾಲಯದ ಕಡತಗಳು,ಅನ್ಯಕ್ರಾಂತ ಅಭಿಪ್ರಾಯ ನೀಡುವ ಕಡತಗಳು,ಲೋಕ ಅದಾಲತ್ ಪ್ರಕರಣಗಳು ಹಾಗೂ ಮಾಹಿತಿ ಹಕ್ಕು ಪ್ರಕರಣಗಳಿಗೆ ಸಂಭಂಧಿಸಿದಂತೆ ಸಾರ್ವಜನಿಕರಿಂದ ಬರುತ್ತಿರುವ ದೂರು ಮತ್ತು ಅಹವಾಲು ಸ್ವೀಕರಿಸುವ ವಿಚಾರದಲ್ಲಿ ನೀಡಿರುವ ನಿರ್ದೇಶನಗಳಿಗೆ ವಿನಾಯಿತಿ ನೀಡುವ ವಿಚಾರದಲ್ಲಿ ಸರ್ಕಾರ ಸ್ಪಂದಿಸಿದೆ.ನಗರಾಭಿವೃದ್ದಿ
Read More

ರೈತನ ಮೇಲೆ ಚಿರತೆ ದಾಳಿ…ಆಸ್ಪತ್ರೆಗೆ ದಾಖಲು…

ನಂಜನಗೂಡು,ಆ3,Tv10 ಕನ್ನಡ ಜಮೀನಿನಲ್ಲಿ ಮೇವು ಕಟಾವು ಮಾಡಲು ತೆರಳಿದ ರೈತನ ಮೇಲೆ ಚಿರತೆ ದಾಳಿ ಮಾಡಿದ ಘಟನೆ ನಂಜನಗೂಡು ತಾಲೂಕಿನ ಸಿಂಧುವಳ್ಳಿ ಗ್ರಾಮದಲ್ಲಿ ನಡೆದಿದೆ. ಬಸವಣ್ಣ ಚಿರತೆ ದಾಳಿಗೆ ಸಿಲುಕಿ ಗಾಯಗೊಂಡ ರೈತ. ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಂಧುವಳ್ಳಿ ಗ್ರಾಮದ ಸುತ್ತಮುತ್ತ ಚಿರತೆ ಮತ್ತು ಕಾಡುಪ್ರಾಣಿಗಳ ಕಾಟ ಹೆಚ್ಚಾಗಿದೆ.ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ…
Read More

ಸಿದ್ದರಾಮಯ್ಯ ನಿವಾಸದಲ್ಲಿ ಧಿಢೀರ್ ಸಭೆ…ಪಾದಯಾತ್ರೆ,ಶೋಕಾಸ್ ನೋಟೀಸ್ ಹಿನ್ನಲೆ ಚರ್ಚೆ…

ಮೈಸೂರು,ಆ3,Tv10 ಕನ್ನಡ ಸಿದ್ದರಾಮಯ್ಯಗೆ ರಾಜ್ಯಪಾಲರ ಶೋಕಾಸ್ ನೋಟೀಸ್ ಹಾಗೂ ಬಿಜೆಪಿ ಪಾದಯಾತ್ರೆ ಹಿನ್ನಲೆ ಮೈಸೂರು ನಿವಾಸದಲ್ಲಿ ದಿಢೀರ್ ಸಭೆ ನಡೆದಿದೆ. ಮೈಸೂರು ಭಾಗದ ಸಚಿವರು, ಶಾಸಕರು ಸಭೆಯಲ್ಲಿ ಭಾಗವಹಿಸಿದ್ದಾರೆ. ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಶಾಸಕರಾದ ರವಿಶಂಕರ್, ಹರೀಶಗೌಡ, ಅನಿಲ್ ಚಿಕ್ಕಮಾದು, ಎ.ಆರ್.ಕೃಷ್ಣಮೂರ್ತಿ, ಸೇರಿ ಹಲವು ಶಾಸಕರು ಭಾಗಿ‌ಯಾಗಿದ್ದಾರೆ. ಸಿದ್ದರಾಮಯ್ಯ ಕಾನೂನು ಕಾರ್ಯದರ್ಶಿ, ಶಾಸಕ ಪೊನ್ನಣ್ಣ ಸಹ ಸಭೆಯಲ್ಲಿ ಭಾಗಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ದಿಢೀರ್ ಸಭೆ ಕುತೂಹಲ ಕೆರಳಿಸಿದೆ…
Read More

ವೆಲ್ಲೆಸ್ಲಿ ಸೇತುವೆ ತಡೆಗೋಡೆ ಕುಸಿತ…ಸಚಿವ ಚೆಲುವರಾಯಸ್ವಾಮಿ ಭೇಟಿ ಪರಿಶೀಲನೆ…

ಮಂಡ್ಯ,ಆ3,Tv10 ಕನ್ನಡಕಾವೇರಿ ನದಿ ಪ್ರವಾಹದಿಂದಾಗಿ ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ ಕುಸಿತಗೊಂಡಿದ್ದ ತಡೆಗೋಡೆ,ಹಾನಿಗೊಳಗಾದ ಡಾಂಬಾರ್ ರಸ್ತೆ ಪ್ರದೇಶಗಳನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಚಲುವರಾಯ ಸ್ವಾಮಿ ಹಾಗೂ ಸ್ಥಳೀಯ ಶಾಸಕ ರಮೇಶ ಬಂಡಿಸಿದ್ದೇಗೌಡ ಇತರ ಅಧಿಕಾರಿಗಳ ತಂಡ ವೀಕ್ಷಣೆ ಮಾಡಿದರು.ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಬಳಿ ನದಿಗೆ ಕಟ್ಟಲಾಗಿದ್ದ ಬಾರಿ ತಡೆಗೋಡೆ ಸಹ ನೀರಿನ ರಭಸಕ್ಕೆ ಕುಸಿದು ಕೊಚ್ಚಿ ಹೋಗಿತ್ತು ಇದರ ಜೊತೆ ಸಂಪರ್ಕ ಡಾಂಬಾರ್ ರಸ್ತೆ ಸಹಿತ
Read More

ಸುತ್ತೂರು ಮಠದಲ್ಲಿ ಕೊನೆ ಆಷಾಢ ಶುಕ್ರವಾರದ ಸಂಭ್ರಮ…ಚಾಮುಂಡೇಶ್ವರಿಗೆ ವಿಶೇಷ ಪೂಜೆ…ಸುತ್ತೂರು ಶ್ರೀಗಳ ನೇತೃತ್ವದಲ್ಲಿ ಕಾರ್ಯಕ್ರಮ…

ಮೈಸೂರು,ಆ2,Tv10 ಕನ್ನಡ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಆಷಾಢಮಾಸದ ಕೊನೆ ಶುಕ್ರವಾರವಾದ ಇಂದು ವಿಶೇಷ ಪೂಜೆ ನೆರವೇರಿತು.ಸುತ್ತೂರು ಮಠದ ಆವರಣದಲ್ಲಿರುವ ತಾಯಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸುತ್ತೂರು ಶ್ರೀಗಳ ನೇತೃತ್ವದಲ್ಲಿ ನಾಡದೇವಿಗೆ ಪೂಜಾ ಕೈಂಕರ್ಯಗಳು ನೆರವೇರಿತು.ಪೂಜೆ ನಂತರ ಭಕ್ತರಿಗೆ ಪ್ರಸಾದ ವಿನಯೋಗ ಕಾರ್ಯಕ್ರಮ ಇತ್ತು.ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.ಸುತ್ತೂರು ಶ್ರೀಗಳೇ ಭಕ್ತರಿಗೆ ಪ್ರಸಾದ ವಿತರಿಸಿದರು…
Read More