TV10 Kannada Exclusive

ಬಳ್ಳಿಗಳಿಂದ ಮುಕ್ತವಾದ ಮಾರ್ಗದರ್ಶಿ ಫಲಕ…Tv10 ವರದಿ ಫಲಶೃತಿ…

ಬಳ್ಳಿಗಳಿಂದ ಮುಕ್ತವಾದ ಮಾರ್ಗದರ್ಶಿ ಫಲಕ…Tv10 ವರದಿ ಫಲಶೃತಿ… ಮೈಸೂರು,ಜುಲೈ29,Tv10 ಕನ್ನಡಕೊನೆಗೂ ಬಳ್ಳಿಗಳಿಂದ ಸಂಚಾರಿ ಮಾರ್ಗದರ್ಶಿ ಫಲಕ ಮುಕ್ತವಾಗಿದೆ.ವಿವಿ ಪುರಂ ಸಂಚಾರಿ ಪೊಲೀಸರು ಎಚ್ಚೆತ್ತು ಬಳ್ಳಿಗಳಿಂದ ಮುಚ್ಚಿಹೋಗಿದ್ದ ಮಾರ್ಗದರ್ಶಿ ಫಲಕವನ್ನ ಮುಕ್ತಗೊಳಿಸಿದ್ದಾರೆ.ಇದು Tv10 ವರದಿಯ ಫಲಶೃತಿ. ಕೆ.ಆರ್.ಎಸ್.ರಸ್ತೆ ಗೋಕುಲಂ ಬಡಾವಣೆ ಪ್ರವೇಶ ಧ್ವಾರದ ಇಎಸ್ ಐ ಆಸ್ಪತ್ರೆ ಬಳಿ ಅಳವಡಿಸಲಾಗಿದ್ದ ಸಂಚಾರಿ ಮಾರ್ಗದರ್ಶಿ ಫಲಕವೊಂದನ್ನ ಗಿಡಬಳ್ಳಿಗಳು ಮುಚ್ಚಿಹಾಕಿತ್ತು.ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಬೇಕಿದ್ದ ಫಲಕ ವಿ.ವಿ.ಪುರಂ ಸಂಚಾರಿ ಪೊಲೀಸರ ನಿರ್ಲಕ್ಷ್ಯತೆಗೆ ಒಳಗಾಗಿತ್ತು.ಈ ಬಗ್ಗೆ Tv10
Read More

ಮಾರ್ಗಸೂಚಿ ಫಲಕಗಳನ್ನ ನುಂಗಿದ ಗಿಡ ಬಳ್ಳಿಗಳು…ಕಣ್ಮುಚ್ಚಿ ಕುಳಿತ ಸಂಚಾರಿ ಪೊಲೀಸರು…

ಮಾರ್ಗಸೂಚಿ ಫಲಕಗಳನ್ನ ನುಂಗಿದ ಗಿಡ ಬಳ್ಳಿಗಳು…ಕಣ್ಮುಚ್ಚಿ ಕುಳಿತ ಸಂಚಾರಿ ಪೊಲೀಸರು… ಮೈಸೂರು,ಜುಲೈ28,Tv10 ಕನ್ನಡವಾಹನ ಸಂಚಾರರ ಅನುಕೂಲಕ್ಕಾಗಿ ರಸ್ತೆಗಳಲ್ಲಿ ಮಾರ್ಗಸೂಚಿ ಫಲಕಗಳನ್ನ ಅಳವಡಿಸಲಾಗಿದೆ.ಫಲಕಗಳಲ್ಲಿರುವ ಸಂದೇಶ ಪಾಲಿಸುವುದು ಇದರ ಉದ್ದೇಶ.ಆದ್ರೆ ಮೈಸೂರಿನ ಕೆ.ಆರ್.ಎಸ್.ರಸ್ತೆ ಗೋಕುಲಂ ಬಡಾವಣೆ ಮುಖ್ಯಧ್ವಾರ ಇಎಸ್ ಐ ಆಸ್ಪತ್ರೆ ಬಳಿ ಅಳವಡಿಸಲಾದ ಈ ಮಾರ್ಗಸೂಚಿ ಫಲಕವನ್ನ ಗಿಡಬಳ್ಳಿಗಳು ನುಂಗಿ ಹಾಕಿದೆ.ಇದರಲ್ಲಿ ಯಾವ ಸಂಚಾರಿ ನಿಯಮ ಪಾಲಿಸಬೇಕೆಂಬ ಮಾಹಿತಿ ಸಾರ್ವಜನಿಕರಿಗೆ ತಲುಪುತ್ತಿಲ್ಲ.ಬಳ್ಳಿಗಳು ಫಲಕವನ್ನ ಸುತ್ತುವರಿದು ಆವರಿಸಿದ್ದರೂ ವಿ.ವಿ.ಪುರಂ ಸಂಚಾರಿ ಪೊಲೀಸರ ಕಣ್ಣಿಗೆ
Read More

ಬೆಮೆಲ್ ಆವರಣದಲ್ಲಿ ಬೋನಿಗೆ ಬಿದ್ದ ಚಿರತೆ…

ಬೆಮೆಲ್ ಆವರಣದಲ್ಲಿ ಬೋನಿಗೆ ಬಿದ್ದ ಚಿರತೆ… ಮೈಸೂರು,ಜುಲೈ28,Tv10 ಕನ್ನಡಮೈಸೂರಿನ ಬಿಇಎಂಎಲ್ ನಲ್ಲಿ ಇರಿಸಲಾಗಿದ್ದ ಬೋನಿಗೆ ಚಿರತೆ ಸಿಕ್ಕಿಬಿದ್ದಿದೆ. ಸುಮಾರು ಆರು ವರ್ಷದ ಗಂಡು ಚಿರತೆ ಸೆರೆಯಾಗಿದೆ.ಕೆಲವು ದಿನಗಳಿಂದ ಆಗಾಗ ಬೆಮೆಲ್ ಆವರಣದಲ್ಲಿ ಚಿರತೆ ಕಾಣಿಸಿಕೊಂಡಿತ್ತು.ರಾತ್ರಿ ವೇಳೆ ಓಡಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.ಆತಂಕ ಸೃಷ್ಟಿಸಿದ್ದ ಚಿರತೆಯನ್ನ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಲಾಗಿತ್ತು.ಚಿರತೆ ಕಂಡುಬಂದ ಸ್ಥಳದಲ್ಲಿ ಬೋನು ಇರಿಸಲಾಗಿತ್ತು.ನಿನ್ನೆ ರಾತ್ರಿ ವೇಳೆ ಚಿರತೆ ಬೋನಿಗೆ ಸಿಲುಕಿದೆ. ಆರ್ ಎಫ್ ಓ. ಕೆ.
Read More

ಕುಡಿಯುವ ನೀರಿಗಾಗಿ ಪಾಲಿಕೆಗೆ ಮುತ್ತಿಗೆ…ಮಾಜಿ ಶಾಸಕ ಎಂ.ಕೆ.ಎಸ್.ನೇತೃತ್ವದಲ್ಲಿ ಪ್ರತಿಭಟನೆ…*

  ಕುಡಿಯುವ ನೀರಿಗಾಗಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಿವಿದೆಡೆ ಕಳೆದ ಮೂರು ದಿನದಿಂದಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.     ಸ್ಥಳೀಯ ಶಾಸಕರಾಗಲಿ,ಅಧಿಕಾರಿಗಳಾಗಲಿ ಸ್ಪಂದಿಸುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಖಾಲಿ ಬಿಂದಿಗೆ ಪ್ರದರ್ಶಿಸಿ ಕೆ.ಆರ್.ವಿಧಾನಸಭಾ ಕ್ಷೇತ್ರದ ನಿವಾಸಿಗಳು ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ
Read More

ಸಿಸಿಬಿ ಪೊಲೀಸರ ಕಾರ್ಯಾಚರಣೆ…ಇಬ್ಬರು ಮನೆಗಳ್ಳರ ಬಂಧನ…ಏರ್ ಗನ್ ಸೇರಿದಂತೆ 10.15 ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಮೈಸೂರು,ಜುಲೈ26,Tv10 ಕನ್ನಡ ಸಿಸಿಬಿ ಪೊಲೀಸರು ನಡಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಇಬ್ಬರು ಮನೆಗಳ್ಳರು ಅಂದರ್ ಆಗಿದ್ದಾರೆ.ಬಂಧಿತರಿಂದ ಒಂದು ಏರ್ ಗನ್ ಹಾಗೂ 10.15 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಕೃತ್ಯದಲ್ಲಿ ಭಾಗಿಯಾದ ಮತ್ತೋರ್ವ ಆರೋಪಿಯ ಬಂಧನಕ್ಕೆ ಜಾಲ ಬೀಸಿದ್ದಾರೆ.ಮೈಸೂರು,ಮಂಡ್ಯ,ಬೆಂಗಳೂರು ಸೇರಿದಂತೆ ವಿವಿದ ಠಾಣಾ ವ್ಯಾಪ್ತಿಯ 9 ಮನೆಗಳವು ಪ್ರಕರಣಗಳು ಪತ್ತೆಯಾಗಿದೆ. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳವು ಪ್ರಕರಣವನ್ನ ಜಾಲಾಡಿದ ಸಿಸಿಬಿ ಪೊಲೀಸರಿಗೆ ಮೊದಲ ಆರೋಪಿ ಸಿಕ್ಕಿಬಿದ್ದಿದ್ದಾನೆ.ಬಾಲ್ಯಾವಸ್ಥೆಯಿಂದಲೂ ಈತ ಕ್ರಿಮಿನಲ್
Read More

ACB ಬಲೆಗೆ DHO ಕಚೇರಿ FDA…3 ಸಾವಿರ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದ ಪ್ರಥಮ ದರ್ಜೆ ಸಹಾಯಕ…

ಚಾಮರಾಜನಗರ,ಜುಲೈ26,Tv10 ಕನ್ನಡ ಚಾಮರಾಜ ನಗರ ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿಯ ಪ್ರಥಮ ದರ್ಜೆಯ ಸಹಾಯಕ ಎಸಿಬಿ ಬಲೆಗೆ ಬಿದ್ದಿದ್ದಾರೆ.ವ್ಯಕ್ತಿಯೊಬ್ಬರ ಕೆಲಸ ಮಾಡಿಕೊಡಲು 3 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.FDA ಮಹೇಶ ಎಸಿಬಿ ಬಲೆಗೆ ಬಿದ್ದ ಸಿಬ್ಬಂದಿ.ವ್ಯಕ್ತಿಯೊಬ್ಬರ ಕೆಲಸದ ಬಗ್ಗೆ ಆದೇಶ ಮಾಡಲು ಹಾಗೂ ಅವರ ಮೂರು ತಿಂಗಳ ಸಂಬಳ ಕೊಡಲು 3 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು.ಇದರಿಂದ ಬೇಸತ್ತ ವ್ಯಕ್ತಿ ಚಾಮರಾಜನಗರ ಎಸಿಬಿ ಪೊಲೀಸರ ಮೊರೆ
Read More

ಪಾಲಿಕೆ ಆಯುಕ್ತರ ವರ್ಗಾವಣೆಗೆ ಆಗ್ರಹಿಸಿ ಪಾಲಿಕೆ ಸದಸ್ಯನಿಂದ ಪ್ರತಿಭಟನೆ…

ಮೈಸೂರು,ಜುಲೈ26,Tv10 ಕನ್ನಡ ವಾರ್ಡ್‌ ನಂ. 50 ರಲ್ಲಿ 1 ತಿಂಗಳಿಂದ ನೀರಿನ ಸಮಸ್ಯೆ ಇದ್ದರೂ ಗಮನ ಹರಿಸದೆ ನಿರ್ಲಕ್ಷ್ಯ ತೋರಿಸುತ್ತಿರುವ ಮೈಸೂರು ನಗರ ಪಾಲಿಕೆ ಆಯುಕ್ತರಾದ ಲಕ್ಷ್ಮೀಕಾಂತರೆಡ್ಡಿರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ನಗರ ಪಾಲಿಕೆ ಸದಸ್ಯರಾದ ಲೋಕೇಶ್ ಪಿಯಾ ಪ್ರತಿಭಟನೆ ನಡೆಸಿದರು. ಲಕ್ಷ್ಮೀಕಾಂತರೆಡ್ಡಿ ರವರು ಅಧಿಕಾರ ವಹಿಸಿಕೊಂಡಾಗಿನಿಂದಲು ಮೈಸೂರಿನ ಎಲ್ಲಾ ವಾರ್ಡ್‌ ಗಳಲ್ಲೂ ಸಮಸ್ಯೆಗಳ ಸುರಿಮಳೆಯಾಗಿದೆ. ವಾರ್ಡ್ ನಂ 50 ರಲ್ಲಿ ಬೀದಿ ದೀಪದ ವ್ಯವಸ್ಥೆ ಇಲ್ಲಾ ನೀರಿನ
Read More

ಒಂದು ತಿಂಗಳಲ್ಲಿ ನಾಡದೇವಿ ಚಾಮುಂಡೇಶ್ವರಿಗೆ 3.35 ಕೋಟಿ ಸಂಗ್ರಹ…

ಮೈಸೂರು,ಜುಲೈ26,Tv10 ಕನ್ನಡ ಚಾಮುಂಡಿ ಬೆಟ್ಟದ ದೇವಾಲಯದ ಹುಂಡಿ ಎಣಿಕೆಯಲ್ಲಿ ಒಂದೇ ತಿಂಗಳಲ್ಲಿ ಚಾಮುಂಡೇಶ್ವರಿ ದೇವಾಲಯದಲ್ಲಿ ಮೂರುವರೆ ಕೋಟಿ ಸಂಗ್ರಹವಾಗಿದೆ. ಆಶಾಡ ಮಾಸದಲ್ಲಿ ಚಾಮುಂಡೇಶ್ವರಿ ದೇವಾಲಯಕ್ಕೆ ದಾಖಲೆ ಆದಾಯ ಬಂದಿದೆ. 2 ಕೋಟಿ, 33 ಲಕ್ಷದ , 51 ಸಾವಿರದ 270 ರೂ ಹುಂಡಿಯಲ್ಲಿ ಸಂಗ್ರಹವಾಗಿದೆ. 270 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ.1 ಕೋಟಿ, 3 ಲಕ್ಷದ, 69 ಸಾವಿರದ ,270 ರೂ ಪ್ರವೇಶದ ಟಿಕೆಟ್
Read More

ಮರೆತು ಹೋಗಿದ್ದ ಲ್ಯಾಪ್ ಟಾಪ್,ಟ್ಯಾಬ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋಚಾಲಕ..

ಆಟೋದಲ್ಲಿ ಮರೆತುಹೋಗಿದ್ದ ಬೆಲೆ ಬಾಳುವ ಲ್ಯಾಪ್ ಟಾಪ್ ಹಾಗೂ ಟ್ಯಾಬ್ ಗಳನ್ನ ಮಾಲೀಕರಿಗೆ ಹಿಂದಿರುಗಿಸಿದ ಆಟೋ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ.ಜಯಪುರ ಹೋಬಳಿ ನಿವಾಸಿ ನಂಜುಂಡಸ್ವಾಮಿ ಪ್ರಾಮಾಣಿಕತೆ ಮೆರೆದ ಆಟೋಚಾಲಕ.ಮೈಸೂರಿನ ಗಂಗೋತ್ರಿ ಬಡಾವಣೆಯ ವಿಜಯಾನಂದ್ ಎಂಬುವರು ಬಸ್ ಸ್ಟಾಂಡ್ ಗೆ ನಂಜುಂಡಸ್ವಾಮಿ ರವರ ಆಟೋದಲ್ಲಿ ಬಂದಿದ್ದಾರೆ.ಬಸ್ ಹಿಡಿಯುವ ಆತುರದಲ್ಲಿ ಲ್ಯಾಪ್ ಟಾಪ್ ಹಾಗೂ ಟ್ಯಾಬ್ ಮರೆತು ಹೋಗಿದ್ದಾರೆ.ಇದನ್ನ ಮನಗಂಡ ನಂಜುಂಡಸ್ವಾಮಿ ಬ್ಯಾಗ್ ಸಮೇತ ಲಷ್ಕರ್ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.ಇದೇ ವೇಳೆ ದೂರು
Read More

ಅವ್ಯವಸ್ಥೆಯ ಗೂಡಾದ ಆರೋಗ್ಯ ತಪಾಸಣಾ ಶಿಬಿರ…ಶಾಸಕ ಅನಿಲ್ ಚಿಕ್ಕಮಾದು ಗರಂ..

ಹೆಚ್.ಡಿ.ಕೋಟೆ,ಜುಲೈ25,Tv10 ಕನ್ನಡ ಹೆಚ್.ಡಿ.ಕೋಟೆಯಲ್ಲಿಂದು ಆಯೋಜಿಸಲಾಗಿದ್ದ ವಿಶೇಷ ಚೇತನರ ಹಾಗೂ ಹಿರಿಯ ನಾಗರೀಕರ ಆರೋಗ್ಯ ತಪಾಸಣಾ ಶಿಬಿರ ಅವ್ಯವಸ್ಥೆಗಳ ಅಗರವಾಯಿತು. ತಾಲೂಕಿನ ಶಾಸಕ ಅ ಎಸ್.ಅನಿಲ್ ಚಿಕ್ಕಮಾದು ಅವರ ಗಮನಕ್ಕೂ ತಾರದೆ ಆಯೋಜಿಸಿದ ಶಿಬಿರ ಗೊಂದಲದಚಗೂಡಾಯಿತು.ಅವ್ಯವಸ್ಥೆಗಳಿಗೆ ಖುದ್ದು ಸಾಕ್ಷಿಯಾದ ಅನಿಲ್ ಚಿಕ್ಕಮಾದು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ಎಚ್.ಡಿ.ಕೋಟೆ ತಾಲೋಕಿನ 26ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿಶೇಷ ಚೇತನರು ರುತ್ತು ಹಿರಿಯ ನಾಗರಿಕರಿಗಾಗಿ ಶಿಬಿರ ಅಯೋಜಿಸಲಾಗಿತ್ತು. ಸಾಧನ ಸಲಕರಣೆ ಸೌಲಭ್ಯ ಒದಗಿಸುವ ಕಾರ್ಯಕ್ರಮವೂ ಶಿಬಿರದ
Read More