TV10 Kannada Exclusive

ದಮ್ಮನಕಟ್ಟೆ ಸಫಾರಿಯಲ್ಲಿ ಹುಲಿಗಳ ದರ್ಶನ…ಪ್ರವಾಸಿಗರು ಖುಷ್…

ದಮ್ಮನಕಟ್ಟೆ ಸಫಾರಿಯಲ್ಲಿ ಹುಲಿಗಳ ದರ್ಶನ…ಪ್ರವಾಸಿಗರು ಖುಷ್… ಎಚ್.ಡಿ.ಕೋಟೆ,ಜ12,Tv10 ಕನ್ನಡಎಚ್.ಡಿ.ಕೋಟೆ ತಾಲೋಕಿನ ದಮ್ಮನಕಟ್ಟೆ ಅರಣ್ಯದ ಸಫಾರಿಯಲ್ಲಿ ಇಂದು ಮುಂಜಾನೆ ಹುಲಿಗಳ ದರ್ಶನವಾಗಿದೆ.ತಾಯಿಯೊಂದಿಗಿದ್ದ ನಾಲ್ಕು ಹುಲಿ ಮರಿಗಳನ್ನು ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ.ಇಂದು ಬೆಳ್ಳಂಬೆಳಗ್ಗೆ ತಾಸುಗಟ್ಟಲೆ ಮರಿಗಳೊಂದಿಗೆ ದರ್ಶನ ನೀಡಿದ ಹುಲಿಗಳ ಆಟವನ್ನ ಸೆರೆಹಿಡಿದಿದ್ದಾರೆ. ಛಾಯಾಗ್ರಾಹಕ ಮನೋಜ್ ಘನ್ನ ಕ್ಯಾಮರಾದಲ್ಲಿ ದೃಶ್ಯಗಳು ಸೆರೆಯಾಗಿದೆ.ಕಳೆದ ವಾರದಿಂದ ಪ್ರವಾಸಿವರಿಗೆ ನಾಗರಹೊಳೆ ಸಫಾರಿ ಕಬಿನಿ ಹಿನ್ನೀರಿನಲ್ಲಿ ಹುಲಿಗಳು ದರ್ಶನ ನೀಡುತ್ತಿವೆ.ಜಿಂಕೆ ಬೇಟೆಯಾಡಿ ಮರಿ ಹುಲಿಗಳಿಗೆ ಆಹಾರ ಸಬರಾಜು ಮಾಡುತ್ತಿರುವ ತಾಯಿ
Read More

ಜ.15 ರಂದು ಯೋಗಾಥಾನ್…ಯಶಸ್ಸಿಗೆ ಸಜ್ಜಾಗುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕರೆ…

ಜ.15 ರಂದು ಯೋಗಾಥಾನ್…ಯಶಸ್ಸಿಗೆ ಸಜ್ಜಾಗುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕರೆ… ಮೈಸೂರು,ಜ11,Tv10 ಕನ್ನಡಜನವರಿ 15 ರಂದು ಬೆಳಿಗ್ಗೆ 8 ಗಂಟೆಯಿಂದ ಮೈಸೂರಿನ ಚಾಮುಂಡಿ ಬೆಟ್ಟದ ಬಳಿ ಇರುವ ರೇಸ್ ಕೋರ್ಸ್ ಮೈದಾನದಲ್ಲಿ ಯೋಗಥಾನ್ ನಡೆಯಲಿದೆ.80 ಸಾವಿರ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕಾರ್ಯಕ್ರಮದ ಯಶಸ್ಸಿಗೆ ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ: ಕೆ.ವಿ.ರಾಜೇಂದ್ರ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ‌ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾಮತನಾಡಿದರು.
Read More

ಮಾರ್ಶಲ್ ಆರ್ಟ್ಸ್ ನಲ್ಲಿ ಸಾಧನೆ ಮಾಡಿದ ಕರಾಟೆಪಟುಗೆ ಎನ್.ಆರ್.ಠಾಣೆ ಪೊಲೀಸರಿಂದ ಸನ್ಮಾನ…

ಮಾರ್ಶಲ್ ಆರ್ಟ್ಸ್ ನಲ್ಲಿ ಸಾಧನೆ ಮಾಡಿದ ಕರಾಟೆಪಟುಗೆ ಎನ್.ಆರ್.ಠಾಣೆ ಪೊಲೀಸರಿಂದ ಸನ್ಮಾನ… ಮೈಸೂರು,ಜ10, Tv10 ಕನ್ನಡಮಾರ್ಶಲ್ ಆರ್ಟ್ಸ್ ನಲ್ಲಿ ಸಾಧನೆ ಮಾಡಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಕೀರ್ತಿ ತಂದ ಸೌಜನ್ಯ ರವರನ್ನ ಎನ್.ಆರ್.ಪೊಲೀಸ್ ಠಾಣೆಯ ಎಸ್ಸೈ ಜೈಕೀರ್ತಿ ಹಾಗೂ ಸಿಬ್ಬಂದಿಗಳು ಗೌರವಿಸಿ ಸನ್ಮಾನಿಸಿದರು. ಮೈಸೂರು ವಿಶ್ವ ವಿದ್ಯಾನಿಲಯದ ಎಂ.ಎಸ್ಸಿ ವಿದ್ಯಾರ್ಥಿನಿ ಹಾಗೂ ಮೈಸೂರು ನಗರದ ರಾಜೇಂದ್ರ ನಗರ SGRR ಕರಾಟೆ & ಸ್ಪೋರ್ಟ್ಸ್ ಶಾಲೆಯ ಕರಾಟೆ ತರಬೇತುದಾರ ಲೋಕೇಶ್ ರವರಲ್ಲಿ
Read More

ಮೈಸೂರು ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಲ್. ನಾಗೇಂದ್ರರವರು, ಮೈಸೂರು ಮಹಾನಗರ ಪಾಲಿಕೆ ವಾರ್ಡ ಸಂ:25 ರ

ಮೈಸೂರು ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಲ್. ನಾಗೇಂದ್ರರವರು, ಮೈಸೂರು ಮಹಾನಗರ ಪಾಲಿಕೆ ವಾರ್ಡ ಸಂ:25 ರ ಸದಸ್ಯರಾದ ಶ್ರೀ ರಂಗಸ್ವಾಮಿ ರವರೊಂದಿಗೆ ಬೆಳಿಗ್ಗೆ: 10.00 ಕ್ಕೆ ವಾರ್ಡ ನಂ-25 ಕೈಲಾಸಪುರಂ, 2ನೇ ಕ್ರಾಸ್, 2ನೇ ಮೇನ್ ರಸ್ತೆ ಬಳಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಘಟಕ ಯೋಜನೆಯಡಿಯಲ್ಲಿ ಕೈಲಾಸಪುರಂ ಅಡ್ಡರಸ್ತೆಗಳನ್ನು ಅಭಿವೃದ್ದಿಗೊಳಿಸುವ & ಚರಂಡಿ ನಿರ್ಮಾಣ ಕಾಮಗಾರಿಯ ರೂ:50.00 ಲಕ್ಷದ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು,
Read More

ಮೈಸೂರು ಅಪರ ಜಿಲ್ಲಾಧಿಕಾರಿಯಾಗಿ ಆರ್ . ಲೋಕನಾಥ್ ಅಧಿಕಾರ ಸ್ವೀಕಾರ

ಮೈಸೂರು ಅಪರ ಜಿಲ್ಲಾಧಿಕಾರಿಯಾಗಿ ಆರ್ . ಲೋಕನಾಥ್ ಅಧಿಕಾರ ಸ್ವೀಕಾರ ಮೈಸೂರು,ಜ10,Tv10 ಕನ್ನಡಮೈಸೂರು ನೂತನ ಅಪರ ಜಿಲ್ಲಾಧಿಕಾರಿಯಾಗಿ ಆರ್ . ಲೋಕನಾಧ್ ಅವರು ಇಂದು ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಅಪರ ಜಿಲ್ಲಾಧಿಕಾರಿ ಡಾ ಮಂಜುನಾಥ್ ಸ್ವಾಮಿ ಅವರಿಂದ ಅಧಿಕಾರ ವಹಿಸಿಕೊಂಡರು….
Read More

ಪೇಯಿಂಟ್ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ…ಲಕ್ಷಾಂತರ ಮೌಲ್ಯದ ಪದಾರ್ಥಗಳು ಭಸ್ಮ…

ಪೇಯಿಂಟ್ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ…ಲಕ್ಷಾಂತರ ಮೌಲ್ಯದ ಪದಾರ್ಥಗಳು ಭಸ್ಮ… ಕೊಡಗು,ಜ10,Tv10 ಕನ್ನಡಬೆಳ್ಳಂಬೆಳಗ್ಗೆ ಬೆಂಕಿ‌ ಆವಘಢದಿಂದ ಪೇಯಿಂಟ್ ಅಂಗಡಿ‌ ಸಂಪೂರ್ಣ ಭಸ್ಮವಾದ ಘಟನೆ ಕೊಡಗು ಜಿಲ್ಲೆಯ ಗೋಣಿಕೊಪ್ಪದಲ್ಲಿ ನಡೆದಿದೆ.ಭೇರು ಪೇಯಿಂಟ್ ಶಾಪ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ವಾಹನಗಳ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.ಅಕ್ಕಪಕ್ಕದ ಅಂಗಡಿಗಳಿಗೆ ಬೆಂಕಿ ಹರಡದಂತೆ ಅಗ್ನಿಶಾಮಕ ಸಿಬ್ಬಂದಿ ಹತೋಟಿಗೆ ತಂದಿದ್ದಾರೆ.ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ…
Read More

ವಿದ್ಯುತ್ ಕಂಬದ ಬಳಿ ಉರುಳಿಬಿದ್ದ ಟ್ರಕ್…ತಪ್ಪಿದ ಅನಾಹುತ…

ಹುಣಸೂರು,ಜ5,Tv10 ಕನ್ನಡಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ವಿದ್ಯುತ್ ಕಂಬದ ಬಳಿ ಉರುಳಿಬಿದ್ದ ಘಟನೆ ಹುಣಸೂರು ತಾಲೂಕಿನ ಬಸರಿಕಟ್ಟೆ ಬಳಿ ನಡೆದಿದೆ.ಕೇರಳಾ ದಿಂದ ಬೆಂಗಳೂರಿಗೆ ಕಬ್ಬಿಣದ ಶೀಟ್ ಗಳನ್ನ ಸಾಗಿಸುತ್ತಿದ್ದ ಟ್ರಕ್ ಉರುಳಿ ಬಿದ್ದಿದೆ.ಸಮೀಪದಲ್ಲೇ ವಿದ್ಯುತ್ ಕಂಬ ಇದ್ದರೂ ಸಂಪರ್ಕ ಸಾಧಿಸದ ಪರಿಣಾಮ ಅನಾಹುತ ತಪ್ಪಿದಂತಾಗಿದೆ.ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಬಿಳಿಕೆರೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲ‌ನೆ ನಡೆಸಿದ್ದಾರೆ…
Read More

ಮುಖ್ಯಮಂತ್ರಿ @BSBommai ಅವರು ಇಂದು ಬೆಂಗಳೂರಿನ  ವೈಯಾಲಿ ಕಾವಲ್ ನಲ್ಲಿರುವ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ

ಮುಖ್ಯಮಂತ್ರಿ @BSBommai ಅವರು ಇಂದು ಬೆಂಗಳೂರಿನ  ವೈಯಾಲಿ ಕಾವಲ್ ನಲ್ಲಿರುವ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಸಚಿವರಾದ @drashwathcn, @MunirathnaMLA ಉಪಸ್ಥಿತರಿದ್ದರು.
Read More

ಯೋಗನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷದ ಸಂಭ್ರಮ…ಎರಡು ಲಕ್ಷ ಲಾಡು ವಿತರಣೆ…ಹರಿದುಬಂದ ಭಕ್ತಸಾಗರ…

ಯೋಗನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷದ ಸಂಭ್ರಮ…ಎರಡು ಲಕ್ಷ ಲಾಡು ವಿತರಣೆ…ಹರಿದುಬಂದ ಭಕ್ತಸಾಗರ… ಮೈಸೂರು,ಜ1,Tv10 ಕನ್ನಡಮೈಸೂರಿನ ವಿಜಯನಗರದಲ್ಲಿರುವ ಯೋಗನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷದ ಸಂಭ್ರಮ ಮನೆ ಮಾಡಿದೆ.2023 ವರ್ಷವನ್ನ ಸಿಹಿ ವಿತರಿಸುವ ಮೂಲ ಬರಮಾಡಿಕೊಳ್ಳಲಾಗುತ್ತಿದೆ.ದೇವಾಲಯಕ್ಕೆ ಬರಯವ ಭಕ್ತರಿಗೆ ತಿರುಪತಿ ಮಾದರಿ ಲಡ್ಡು ವಿತರಿಸುವ ಕಾರ್ಯ ಆರಂಭವಾಗಿದೆ.ಎರಡು ಲಕ್ಷ ಲಾಡುಗಳು ತಯಾರಾಗಿದ್ದು ಭಕ್ತರಿಗೆ ವಿತರಿಸಲಾಗುತ್ತಿದೆ.ಮುಂಜಾನೆ 4 ಗಂಟೆಗೆ ಶ್ರೀ ಭಾಷ್ಯಂ ಸ್ವಾಮೀಜಿರವರು ಲಾಡು ವಿತರಣೆಗೆ ಚಾಲನೆ ನೀಡಿದರು.ಮುಂಜಾನೆ ವಿಶೇಷ ಅಭಿಷೇಕ,ಪೂಜೆಗಳು
Read More

ಹೊಸವರ್ಷ ಸಂಭ್ರಮಾಚರಣೆ ಹಿನ್ನಲೆ…ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿಷೇಧ…

ಮೈಸೂರು,ಡಿ31,Tv10 ಕನ್ನಡಚಾಮುಂಡಿಬೆಟ್ಟದಲ್ಲಿಹೊಸ ವರ್ಷದ ಸಂಭ್ರಮ ಆಚರಿಸಲು ಬ್ರೇಕ್ ಹಾಕಲಾಗಿದೆ.ಚಾಮುಂಡಿಬೆಟ್ಟ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.ಇಂದು (31/12/2022) ರಾತ್ರಿ 9 ಗಂಟೆಯಿಂದ ನಾಳೆ (01/01/2023) ಬೆಳಗ್ಗೆ 5 ಗಂಟೆಯವರೆಗೆ ನಿರ್ಬಂಧ ಹೇರಲಾಗಿದೆ.ಮೈಸೂರು ಪೊಲೀಸ್ ಕಮೀಷನರ್ ರಮೇಶ್ ಬಾನೋತ್ ಆದೇಶಿಸಿದ್ದಾರೆ.ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್ ಬಳಿ ಹೆಚ್ಚು ಜನ ಸೇರುವ ಹಿನ್ನೆಲೆಮುಂಜಾಗ್ರತಾ ಕ್ರಮವಾಗಿ ನಿರ್ಬಂಧ ವಿಧಿಸಲಾಗಿದೆ.ಚಾಮುಂಡಿ ಬೆಟ್ಟದ ನಿವಾಸಿಗಳು ಸಿಬ್ಬಂದಿಗಳಿಗೆ ಮಾತ್ರ ಪ್ರವೇಶ ಅವಕಾಶ ಕಲ್ಪಿಸಲಾಗಿದೆ…
Read More