TV10 Kannada Exclusive

ದಟ್ಟಗಳ್ಳಿ ವಿವಾದಿತ ಜಮೀನಿನ ರಕ್ಷಣೆಗೆ ಮುಂದಾದ ಶಾಸಕದ್ವಯರು…ದೃಢೀಕರಿಸಿದ ದಾಖಲೆಗಳನ್ನ ನೀಡುವಂತೆ ಮುಡಾ ಆಯುಕ್ತರಿಗೆ ಪತ್ರ…

ಮೈಸೂರು,ಡಿ29,Tv10 ಕನ್ನಡ ಮೈಸೂರಿನ ದಟ್ಟಗಳ್ಳಿ ಗ್ರಾಮದ ಸರ್ವೆ ನಂ.27/1,27/2,27/4,29/1a,32,38/1,38/2 ಸೇರಿದಂತೆ ವಿವಿದ ಸರ್ವೆ ನಂಬರ್ ಗಳ ಸುಮಾರು 27.34 ಎಕ್ರೆ ಜಮೀನುಗಳ ವಿವಾದಕ್ಕೆ ಬ್ರೇಕ್ ಹಾಕಲು ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕರಾದ ಕೆ.ಹರೀಶ್ ಗೌಡ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಬಂಡೀಸಿದ್ದೇಗೌಡ ರವರು ಮುಂದಾಗಿದ್ದಾರೆ. ಕೋಟ್ಯಾಂತರ ಬೆಲೆ ಬಾಳುವ ಮುಡಾ ಆಸ್ತಿಯನ್ನ ಕಬಳಿಸಲು ಸಂಚು ರೂಪಿಸಿರುವ ಆರೋಪಕ್ಕೆ ಸಂಭಂಧಿಸಿದಂತೆ ಪ್ರಾಧಿಕಾರದ ಬಳಿ ಇರುವ ಎಲ್ಲಾ ದಾಖಲೆಗಳನ್ನ ಧೃಢೀಕರಿಸಿ
Read More

ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಾಲಯದ ಜಮೀನಿಗೆ ಕನ್ನ ಪ್ರಕರಣ…ಸಮಿತಿ ರಚನೆ…ಸ್ಥಳಕ್ಕೆ ಅಧಿಕಾರಿಗಳ ಭೇಟಿ ಪರಿಶೀಲನೆ…

ಮೈಸೂರು,ಡಿ29,Tv10 ಕನ್ನಡ ಮೇಲುಕೋಟೆ ಶ್ರೀ ಚಲುವನಾರಾಯಣಸ್ವಾಮಿ ದೇವಾಲಯಕ್ಕೇ ಸೇರಿದ ಜಮೀನುಗಳನ್ನ ಲಪಟಾಯಿಸಿದ ಖದೀಮರ ವಿರುದ್ದ ಕ್ರಮ ಕೈಗೊಳ್ಳುವಂತೆ ಮಂಡ್ಯ ಜಿಲ್ಲೆ ಜಿಲ್ಲಾಧಿಕಾರಿಗಳು ಮೈಸೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದ ಪ್ರಕರಣಕ್ಕೆ ಚುರುಕು ನೀಡಲಾಗಿದೆ.ಅಕ್ರಮದ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸಮಿತಿ ರಚಿಸಿ ಸೂಚನೆ ನೀಡಲಾಗಿದೆ.ಅಕ್ರಮ ನಡೆದ ಸ್ಥಳಕ್ಕೆ ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.ಮೈಸೂರುತಾಲೂಕು ಕಸಬ ಹೋಬಳಿ ಕೆಸರೆ ಗ್ರಾಮದ ಸರ್ವೆ ನಂ 396
Read More

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ನಯಿಮಾಸುಲ್ತಾನ್ ವಿಧಿವಶ…

ಹೆಚ್.ಡಿ.ಕೋಟೆ,ಡಿ28,Tv10 ಕನ್ನಡ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ನಯೀಮಾ ಸುಲ್ತಾನಾ ವಿಧಿವಶರಾಗಿದ್ದಾರೆ.ಇತ್ತೀಚೆಗಷ್ಟೆ ಅನಾರೋಗದಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಸ್ವಗ್ರಾಮಕ್ಕೆ ವಾಪಸ್ಸಾಗಿದ್ದರು.ಇಂದು ಎಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆ ಚಿಕಿತ್ಸೆಗೆ ಆಗಮಿಸಿದಾಗ ಮೃತಪಟ್ಟಿದ್ದಾರೆ.ನಾಲ್ಕು ಗಂಡು ಮಕ್ಕಳು ಪತಿ ಮತ್ತು ಅಪಾರ ಬಂಧುಬಳಗ ಅಗಲಿದ್ದಾರೆ.ಎಚ್.ಡಿ.ಕೋಟೆ ಪಟ್ಟಣದ ಶಿವಾಜಿ ರಸ್ತೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು…
Read More

ಸಿದ್ದರಾಮಯ್ಯ ವಿರುದ್ದ ಅವಹೇಳನಾಕಾರಿ ವಾಗ್ಧಾಳಿ…ಪ್ರತಾಪ್ ಸಿಂಹ ವಿರುದ್ದ FIR ದಾಖಲು…

ಮೈಸೂರು,ಡಿ27,Tv10 ಕನ್ನಡ ಹುಣಸೂರುನಲ್ಲಿ ನಡೆದ ಹನುಮಜಯಂತಿ ಮೆರವಣಿಗೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಅವಹೇಳನಾಕಾರಿಯಾಗಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ವಿರುದ್ದ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ FIR ದಾಖಲಿಸಿದ್ದಾರೆ.ಚುನಾವಣೆ ಸಮೀಪ ಬರುತ್ತಿವ ವೇಳೆ ಕೋಮು ಸೌಹಾರ್ಧತೆಗೆ ಧಕ್ಕೆ ಬರುವಂತಹ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ…
Read More

ದತ್ತಾತ್ರೇಯ ಜಯಂತಿ…ಗಣಪತಿ ಆಶ್ರಮದಲ್ಲಿ ಅದ್ದೂರಿ ಆಚರಣೆ…

ಮೈಸೂರು,ಡಿ26,Tv10 ಕನ್ನಡಮೈಸೂರು ನಂಜನಗೂಡು ರಸ್ತೆಯಲ್ಲಿರುವ ಶ್ರೀ ಅವಧೂತ ದತ್ತಪೀಠ,ಶ್ರೀ‌‌ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇಂದು ಶ್ರೀ ದತ್ತಾತ್ರೇಯ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.ಮುಂಜಾನೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಮೊದಲು ಗೋವುಗಳಿಗೆ ಹಣ್ಣು ತಿನ್ನಿಸಿ ಗೋಪೂಜೆ‌ ಮಾಡಿ ನಂತರ ಶ್ರೀ ಚಕ್ರ ಪೂಜೆ ನೆರವೇರಿಸಿದರು.ದೇಶ ವಿದೇಶಗಳಿಂದ ಬಂದಿದ್ದ ನೂರಾರು ಭಕ್ತರಿಂದ ಶ್ರೀ ದತ್ತಾತ್ರೇಯ ಸ್ವಾಮಿಗೆ ಸಹಸ್ರ ಕಲಶ ತೈಲಾಭಿಷೇಕವನ್ನು ನೆರವೇರಿಸಿದರು.ಈ ವೇಳೆ ಕೊಚ್ಚಿ ಆಶ್ರಮ ಭಜನಾ ತಂಡದವರಿಂದ ನಾಮ ಸಂಕೀರ್ತನ
Read More

ರಾಷ್ಟ್ರೀಯ ಗ್ರಾಹಕರ ದಿನಾಚರಣೆ…ಗ್ರಾಹಕನೇ ರಾಜ ಪುಸ್ತಕ ಬಿಡುಗಡೆ…

ಮೈಸೂರು,ಡಿ25,Tv10 ಕನ್ನಡಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ವತಿಯಿಂದ ಗ್ರಾಹಕರಲ್ಲಿ ಅರಿವು ಮೂಡಿಸುವಂತಹ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.ಜೆಪಿ ನಗರದಲ್ಲಿರುವ ಪಂಡಿತ್ ಗವಾಯಿ ಸ್ಟೇಡಿಯಂ ಆವರಣದಲ್ಲಿರಾಷ್ಟ್ರೀಯ ಗ್ರಾಹಕರ ದಿನಾಚರಣೆ ಹಾಗೂ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಸುವರ್ಣ ಮಹೋತ್ಸವ ಅಂಗವಾಗಿ ಗ್ರಾಹಕನೇ ರಾಜ ಪುಸ್ತಕವನ್ನು ಹೊರತರಲಾಗಿದ್ದು, ನಿವೃತ್ತ ಡಿ ವೈ ಎಸ್ ಪಿ ರಂಗಸ್ವಾಮಿ ಅವರು ಲೋಕಾರ್ಪಣೆ ಮಾಡಿದರು.ಈ ವೇಳೆ ಮಾತನಾಡಿದ ರಂಗಸ್ವಾಮಿ ಗ್ರಾಹಕರ ಹಕ್ಕುಗಳು ಏನು, ಅವುಗಳನ್ನು ಏಕೆ
Read More

ಹುಣಸೂರು:ಹನುಮ ಜಯಂತಿ ಹಿನ್ನಲೆ…ಶಾಲಾ ಕಾಲೇಜುಗಳಿಗೆ ರಜೆ…

ಹುಣಸೂರು,ಡಿ24,Tv10 ಕನ್ನಡ ಮೈಸೂರು ಜಿಲ್ಲೆಯಹುಣಸೂರು ಪಟ್ಟಣದಲ್ಲಿ ಮೂರು ದಿನ ನಡೆಯಲಿರುವ ಹನುಮ ಜಯಂತಿ ಹಿನ್ನಲೆಡಿ 26 ರಂದು ಪಟ್ಟಣ ವ್ಯಾಪ್ತಿಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹನುಮ ಮೂರ್ತಿ ಮೆರವಣಿಗೆ ಅದ್ದೂರಿಯಾಗಿ ನೆರವೇರಲಿದ್ದು ವಿಧ್ಯಾರ್ಥಿಗಳ ಹಿತದೃಷ್ಟಿಯಿಂದ ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಆದೇಶ ಹೊರಡಿಸಿದ್ದಾರೆ.ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲುಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರಿ, ಅನುದಾನಿತ, ಅನುದಾನ ರಹಿತ, ಖಾಸಗಿ ವಿದ್ಯಾಸಂಸ್ಥೆಗಳಿಗೆ
Read More

ಶುದ್ದಕುಡಿಯುವ ನೀರಿನ ಘಟಕದ ದುರಸ್ಥಿಗಾಗಿ ಪ್ರತಿಭಟನೆ…ರಿಪೇರಿಗೆ ಹಣ ಇಲ್ಲವೆಂದ ಅಧಿಕಾರಿ ವಿರುದ್ದ ಆಕ್ರೋಷ…

ಹೆಚ್.ಡಿ.ಕೋಟೆ,ಡಿ23,Tv10 ಕನ್ನಡ ಹೆಚ್.ಡಿ.ಕೋಟೆ ಅಣ್ಣೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶುದ್ದಕುಡಿಯುವ ನೀರಿನ ಘಟಕಗಳು ಕೆಟ್ಟುನಿಂತು ತಿಂಗಳುಗಳೇ ಉರುಳಿದರೂ ದುರಸ್ಥಿಗೆ ಸಂಭಂಧಪಟ್ಟ ಅಧಿಕಾರಿಗಳು ಗಮನಹರಿಸುತ್ತಿಲ್ಲವೆಂದು ಆರೋಪಿಸಿ ಸ್ಥಳೀಯ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಪ್ರತಿಭಟನೆ ನಡೆಸಿ ಆಕ್ರೋಷ ವ್ಯಕ್ತಪಡಿಸಿದ್ದಾರೆ.ಅಣ್ಣೂರು ಗ್ರಾಮ ಪಂಚಾಯ್ತಿ ಸಭೆ ನಡೆಯುವ ವೇಳೆ ಜಿಲ್ಲಾ ಪಂಚಾಯತಿ ಕಾರ್ಯನಿರ್ವಣಧಿಕಾರಿ ಗಾಯತ್ರಿ ರವರಿಗೆ ಮನವಿ ಸಲ್ಲಿಸಿದಾಗ ನಿರ್ಲಕ್ಷಿಸಿ ನಮ್ಮಲ್ಲಿ ಹಣ ಇಲ್ಲವೆಂದು ಕಾರಣ ನೀಡಿದ್ದಾರೆಂದು ಆರೋಪಿಸುವ ಗ್ರಾಮ ಪಂಚಾಯ್ತಿ ಸದಸ್ಯರು
Read More

ನಿವೃತ್ತ ಪೊಲೀಸ್ ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುತ್ತಿರುವ ಮೀಸಲುಪಡೆ ಸಿಬ್ಬಂದಿಗಳನ್ನ ಹಿಂಪಡೆಯಿರಿ…ಸರ್ಕಾರದ ಅಧೀನ ಕಾರ್ಯದರ್ಶಿಗಳಿಂದ ಆದೇಶ…

ಬೆಂಗಳೂರು,ಡಿ21,Tv10 ಕನ್ನಡ ನಿವೃತ್ತ ಐಪಿಎಸ್ ಹಾಗೂ ಹಿರಿಯ ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುತ್ತಿರುವ ಕೆ.ಎಸ್.ಆರ್.ಪಿ. ಸಿಬ್ಬಂದಿಗಳನ್ನ ಹಿಂದಕ್ಕೆ ಪಡೆಯುವಂತೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಐಜಿ ಹಾಗೂ ಡಿಜಿ ಗಳಿಗೆ ಸೂಚನೆ ನೀಡಿದ್ದಾರೆ.ನಿವೃತ್ತ ಅಧಿಕಾರಿಯಾದ ಸುನಿಲ್ ಅಗರವಾಲ್,ಭಾಸ್ಕರ್ ರಾವ್ ಸೇರಿದಂತೆ ಹಲವರ ಮನೆಯಲ್ಲಿ ಇನ್ನೂ ಕರ್ನಾಟಕ ರಾಜ್ಯ ಮೀಸಲು ಪಡೆ ಸಿಬ್ಬಂದಿಗಳು ಕೆಲಸ ಮುಂದುವರೆಸಿದ್ದು ಕೂಡಲೇ ಅವರನ್ನ ಹಿಂದಕ್ಕೆ ಕರೆಸಿಕೊಳ್ಳುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿರುವ ಹಿನ್ನಲೆ ಕ್ರಮ ಕೈಗೊಳ್ಳಲು ಮುಂದಾದ ಸರ್ಕಾರದ
Read More

ಉಪರಾಷ್ಟ್ರಪತಿ ಅಪಮಾನಿಸಿದ ಹಿನ್ನಲೆ… ಕಾಂಗ್ರೆಸ್ ವಿರುದ್ದ ಬಿಜೆಪಿ ಪ್ರತಿಭಟನೆ…

ಮೈಸೂರು,ಡಿ21,Tv10 ಕನ್ನಡ ಉಪರಾಷ್ಟ್ರಪತಿ ಜಗದೀಪ್ ಧನ್ ಕರ್ ರವರನ್ನ ಅಪಮಾನಿಸಿದ ಹಿನ್ನಲೆ ಕಾಂಗ್ರೆಸ್ ವಿರುದ್ದ ಬಿಜೆಪಿ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ಗಾಂಧಿ ವೃತ್ತದಲ್ಲಿ ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ ನಾಯಕರ ವಿರುದ್ದ ಆಕ್ರೋಷ ವ್ಯಕ್ತಪಡಿಸಿದ್ದಾರೆ.ರಾಹುಲ್ ಗಾಂಧಿಯವರ ನಡೆಯನ್ನ ಖಂಡಿಸಿ ಘೋಷಣೆ ಕೂಗುವ ಮೂಲಕ ಪ್ರತಿಭಟಿಸಿದ್ದಾರೆ…
Read More