ಮೈ-ಬೆಂ ಹೆದ್ದಾರಿಯ ಬೈಪಾಸ್ ನಲ್ಲಿ ಚಾಕು ತೋರಿಸಿ ದರೋಡೆ…ಚಿನ್ನಾಭರಣ ನಗದು ದೋಚಿದ ದುಷ್ಕರ್ಮಿಗಳು…
- Crime
- March 16, 2023
- No Comment
- 93
ಮೈ-ಬೆಂ ಹೆದ್ದಾರಿಯ ಬೈಪಾಸ್ ನಲ್ಲಿ ಚಾಕು ತೋರಿಸಿ ದರೋಡೆ…ಚಿನ್ನಾಭರಣ ನಗದು ದೋಚಿದ ದುಷ್ಕರ್ಮಿಗಳು…
ರಾಮನಗರ,ಮಾ16,Tv10 ಕನ್ನಡ
ಬೆಂಗಳೂರು ಮೈಸೂರು ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿ ಪ್ರಯಾಣಿಕರಿಗೆ ಚಾಕು ತೋರಿಸಿ ದರೋಡೆ ಮಾಡಿದ ಘಟನೆ ಚೆನ್ನಪಟ್ಟಣ ತಿಟ್ಟಮಾರನಹಳ್ಳಿ ಬಳಿ ನಡೆದಿದೆ. ಕೆಟ್ಟುನಿಂತಿದ್ದ ಕಾರಿನ ನಿಂತಿದ್ದ ಪ್ರಯಾಣಿಕರನ್ನು ಬೆದರಿಸಿ ಕಳ್ಳರು ಚಿನ್ನಾಭರಣ ದೋಚಿದ್ದಾರೆ.
ಮೈಸೂರಿನ ಲೋಹಿತ್ ರಾವ್ ಹಾಗೂ ಸ್ನೇಹಿತರನ್ನ ಬೆದರಿಸಿ ಚಿನ್ನಾಭರಣ ಜೊತೆ ಹಣ ಡರೋಡೆ ಮಾಡಿದ್ದಾರೆ.
ಸುಮಾರು 58 ಗ್ರಾಂ ಚಿನ್ನ, 8 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.
ಕಾರುಕೆಟ್ಟು ಹೋದ ಪರಿಣಾಮ ಟೋಯಿಂಗ್ ವಾಹನಕ್ಕಾಗಿ ಕಾಯುತ್ತಾ ನಿಂತಿದ್ದ ವೇಳೆ ಗ್ಲಾಸ್ ಬಡಿದು ಚಾಕು ತೋರಿಸಿ ಕೃತ್ಯವೆಸಗಿದ್ದಾರೆ.
ಬೆಳಗ್ಗಿನ ಜಾವ 1:50 ಸಮಯದಲ್ಲಿ ಘಟನೆ ನಡೆದಿದೆ.
ಮಾರ್ಚ್ 13 ರಂದು ಘಟನೆ ನಡೆದಿದೆ. ಆರೋಪಿಗಳಿಗಾಗಿ ಪೊಲೀಸರ ಬಲೆ ಬೀಸಿದ್ದಾರೆ.
ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…