ಜಿಲ್ಲಾಧಿಕಾರಿಗಳಿಂದ ಪ್ರಥಮ ಚಿಕಿತ್ಸಾ ಕಿಟ್ ವಿತರಣೆ
- TV10 Kannada Exclusive
- March 16, 2023
- No Comment
- 104
ಜಿಲ್ಲಾಧಿಕಾರಿಗಳಿಂದ ಪ್ರಥಮ ಚಿಕಿತ್ಸಾ ಕಿಟ್ ವಿತರಣೆ
ಮಂಡ್ಯ ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜೂನಿಯರ್ ರೆಡ್ ಕ್ರಾಸ್ ಘಟಕದ ವತಿಯಿಂದ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗೆ ರೆಡ್ ಕ್ರಾಸ್ ಸಂಸ್ಥೆಯ ದೇಯೋದ್ದೇಶ ಮತ್ತು ಪ್ರಥಮ ಚಿಕಿತ್ಸೆ ಜಾಗೃತಿ ಕಾರ್ಯಕ್ರಮಕ್ಕೆ ಮಂಡ್ಯ ಜಿಲ್ಲಾಧಿಕಾರಿಗಳಾದ ಡಾ. ಹೆಚ್.ಎನ್ ಗೋಪಾಲಕೃಷ್ಣ ಅವರು ಚಾಲನೆ ನೀಡಿ 40 ಪ್ರಥಮ ಚಿಕಿತ್ಸಾ ಕಿಟ್ ಗಳನ್ನು ವಿವಿಧ ಶಾಲೆಯ ಮುಖ್ಯಸ್ಥರುಗಳಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಶಿಕ್ಷಣ ಇಲಾಖೆಯ ಬಿಇಓ ಉದಯಕುಮಾರ್,
ಶಿಕ್ಷಣಾಧಿಕಾರಿ ಚಂದ್ರ ಕಾಂತ, ಸಂಸ್ಥೆಯ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ನಿರ್ದೇಶಕರಾದ ಕೆ ಟಿ ಹನುಮಂತು, ಮಂಗಲ ಯೋಗೇಶ್, ಜವರೇಗೌಡ ಸಿಬ್ಬಂದಿಯಾದ ಜಗದೀಶ್ ಹಾಗೂ ಇನ್ನಿತರರಿದ್ದರು.