- May 20, 2023
ಪ್ರತಿ ಮನೆಗೆ ಉಚಿತ ವಿದ್ಯುತ್ ‘ಗೃಹ ಜ್ಯೋತಿ’ ಹಾಗೂ ಮಹಿಳೆಯರಿಗೆ ಬಸ್ ಪಾಸ್ ‘ಶಕ್ತಿ ಯೋಜನೆ’ ಗಳಿಗೆ ತಾತ್ವಿಕ ಅನುಮೋದನೆ…ಸರ್ಕಾರದಿಂದ ಮಹತ್ವದ ಆದೇಶ…

ಮೈಸೂರು,ಮೇ20,Tv10 ಕನ್ನಡ
ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರೆಂಟಿಗಳನ್ನ ಜಾರಿಗೆ ತರಲು ಎಲ್ಲಾ ಕಸರತ್ತು ನಡೆಸುತ್ತಿದೆ.ಈಗಾಗಲೇ ಮನೆ ಯಜಮಾನಿಗೆ ಪ್ರತಿ ತಿಂಗಳು 2000 ರೂ ನೀಡುವ ಆದೇಶ ಹೊರಡಿಸಿದ ಸರ್ಕಾರ ಮತ್ತೆರಡು ಯೋಜನಗಳನ್ನೂ ಅನುಷ್ಠಾನಗೊಳಿಸುತ್ತಿದೆ.ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಶಕ್ತಿ ಯೋಜನೆ ಹಾಗೂ ಪ್ರತಿ ಮನೆಗೆ ಉಚಿತ ವಿದ್ಯುತ್ ನೀಡುವ ಉದ್ದೇಶದ ಹಿನ್ನಲೆ ಗೃಹ ಜ್ಯೋತಿ ಯೋಜನೆಗಳನ್ನ ಜಾರಿಗೆ ತರುತ್ತಿದೆ.ಇಂದು ಎರಡೂ ಯೋಜನೆಗಳಿಗೆ ತಾತ್ವಿಕ ಅನುಮೋದನೆ ನೀಡಲಾಗಿದೆ.ಮುಂದಿನ ದಿನಗಳಲ್ಲಿ ಯೋಜನೆ ಬಗ್ಗೆ ಷರತ್ತುಗಳು ಹಾಗೂ ನಿಭಂಧನೆಗಳನ್ನ ಹೊರಡಿಸುವುದಾಗಿ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ…