ಎಲೆಕ್ರ್ಟಿಕ್ ಸ್ಕೂಟರ್ ನಲ್ಲಿ ಬೆಂಕಿ…ಸವಾರ ಪಾರು…
- CrimeMysore
- July 13, 2023
- No Comment
- 64
ಮೈಸೂರು,ಜು13,Tv10 ಕನ್ನಡ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗೆ ಆಹುತಿಯಾದ ಘಟನೆ ಮೈಸೂರಿ ಅರಮನೆ ಬಳಿ ನಡೆದಿದೆ.
ಸಂಚಾರ ಪೊಲೀಸರ ಸಮಯಪ್ರಜ್ಞೆಯಿಂದ ಸ್ಕೂಟರ್ ಸವಾರ ಪಾರಾಗಿದ್ದಾರೆ.
ಬಸವರಾಜು ಎಂಬುವವರಿಗೆ ಸೇರಿದ ಎಲೆಕ್ಟ್ರಿಕ್
ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.ತಕ್ಷಣ ಸಂಚಾರ ಪೊಲೀಸರು ಎಚ್ಚರಿಸಿದ್ದಾರೆ.
ಸ್ಕೂಟರ್ ಪಕ್ಕಕ್ಕೆ ನಿಲ್ಲಿಸಿದ್ದಾರೆ.ಕ್ಷಣಮಾತ್ರದಲ್ಲಿ ಸ್ಕೂಟರ್ ಸಂಪೂರ್ಣ ಭಸ್ಮವಾಗಿದೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನ ನಂದಿಸಿದ್ದಾರೆ.
ಸ್ಥಳಕ್ಕೆ ಸಂಚಾರ ಎಸಿಪಿ ಪರಶುರಾಮಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದೇವರಾಜ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ…