ಚಿರತೆದಾಳಿ…ತೋಟದಲ್ಲಿ ಕಟ್ಟಿಹಾಕಿದ್ದ ಎರಡು ಕುರಿಗಳು ಬಲಿ…
- MysoreTV10 Kannada Exclusive
- July 13, 2023
- No Comment
- 63
ಚಿರತೆದಾಳಿ…ತೋಟದಲ್ಲಿ ಕಟ್ಟಿಹಾಕಿದ್ದ ಎರಡು ಕುರಿಗಳು ಬಲಿ…
ಹುಣಸೂರು,ಜು13,Tv10 ಕನ್ನಡ ಹುಣಸೂರು ತಾಲೂಕು ರಾಮ ಪಟ್ಟಣದ ತೋಟವೊಂದರಲ್ಲಿ ಕಟ್ಟಿಹಾಕಲಾಗಿದ್ದ ಎರಡು ಕುರಿಗಳನ್ನ ಚಿರತೆ ಬಲಿ ಪಡೆದಿದೆ. ತಿಮ್ಮೇಗೌಡ ಎಂಬುವರಿಗೆ ಸೇರಿದ ಕುರಿಗಳು ಬಲಿಯಾಗಿದೆ.ಘಟನೆಯಿಂದ ರಾಮಪಟ್ಟಣ ಗ್ರಾಮಸ್ಥರು ಆತಂಕಗೊಂಡಿದ್ದಾರೆ.ಜಮೀನುಗಳಿಗೆ ತೆರಳಿ ಕೆಲಸ ಮಾಡಲು ಹೆದರುತ್ತಿದ್ದಾರೆ. ಧನ ಕುರಿಗಳನ್ನು ಮೇಯಿಸಲು ಸಾಧ್ಯವಾಗದೆ ಭಯದ ವಾತಾವರಣ ಸೃಷ್ಟಿಯಾಗಿದೆ.ಕೂಡಲೇ ಸಂಬಂಧಪಟ್ಟವರು ಅರಣ್ಯ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ಚಿರತೆ ಸೆರೆಗೆ ಮುಂದಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ…